(ಸಾ) ವಿವಿಧ ವಸ್ತುಗಳನ್ನು ಕಟ್ಟಿ ಮಾಡಿದ ಪಿಂಡಿ, ಮೂಟೆ. ಸಮುದಾಯ. (ವೈ) ಶರೀರದಲ್ಲಿ ಸಮಾಂತರವಾಗಿರುವ ನರಗಳು, ಎಳೆ, ನಾರು ಮೊದಲಾದವುಗಳ ಗೊಂಚಲು. ಕುಚ್ಚು
bundle
ಕಂದಕ
(ತಂ) ಕಿರಿದಾದ ಅಗಲ, ಕಡಿದಾದ ಬದಿಗಳಿರುವ, ಆಳವಾದ ಮತ್ತು ಉದ್ದವಾದ ಕಾಲುವೆ. ಅಗಲದಲ್ಲಿಯೂ ವಿಸ್ತಾರ ದಲ್ಲಿಯೂ ಕಣಿವೆಗಿಂತ ಚಿಕ್ಕದು. ಕಂದಕಗಳು ನೈಸರ್ಗಿಕವಾಗಿರ ಬಹುದು, ಸಮುದ್ರ ತಳಗಳಲ್ಲಿ ಅಥವಾ ಗುಡ್ಡ ಪ್ರದೇಶಗಳಲ್ಲಿ ಇರುವಂತೆ ಮನುಷ್ಯಕೃತವೂ ಆಗಿರಬಹುದು
trench
ಕಂದಕ ಜ್ವರ
(ವೈ) ಮುಖ್ಯವಾಗಿ ಹೇನುಗಳಿಂದ ಹಬ್ಬುವ ಒಂದು ವ್ಯಾಧಿ. ಒಂದನೇ ಮಹಾಯುದ್ಧದಲ್ಲಿ ಸೈನಿಕರು ವಿಶೇಷವಾಗಿ ಬಾಧಿತರಾಗಿದ್ದರು. ಎಡಬಿಡದೆ ಬರುವ ಜ್ವರ, ತಲೆನೋವು, ಮೈಕೈನೋವು ಇದರ ಲಕ್ಷಣಗಳು
trench fever
ಕಂದೀಲು
(ತಂ) ಬೇಕಾದಲ್ಲಿಗೆ ಒಯ್ಯಬಹುದಾದ ದೀಪ. ಲಾಂದ್ರ, ಲಾಟೀನು
lantern
ಕಂದು
(ರ) ಕಪಿಲವರ್ಣ. ಕಿತ್ತಳೆ ಮತ್ತು ಕಪ್ಪು ಬಣ್ಣಗಳನ್ನು ಬೆರೆಸಿದಾಗ ದೊರೆಯುವ ಬಣ್ಣ
brown
ಕಂದು ತುಕ್ಕು
(ಸ) ಪ್ಲಮ್ ಮತ್ತು ಇತರ ಹಣ್ಣು ಮರಗಳಿಗೆ ತಗಲುವ ಶಿಲೀಂಧ್ರಜನ್ಯ ರೋಗ. ಕಡಿದು ಒಟ್ಟಿದ ಮರ ನಶಿಸುವುದು ಈ ಕಾರಣದಿಂದ
brown rot
ಕಂಪಕ
(ಎಂ) ಒಂದು ನಿಮಿಷಕ್ಕೆ ೩೦೦೦ದಿಂದ ೧೦,೦೦೦ ಕಂಪನಗಳನ್ನುಂಟುಮಾಡಿ, ಹಸಿಯ ಕಾಂಕ್ರೀಟನ್ನು ಅಡಕಿಸುವ ಯಂತ್ರ. ಇವುಗಳ ಪ್ರಕಾರಗಳು - ಆಂತರಿಕ ಕಂಪಕ, ಮೇಲ್ಮೈ ಕಂಪಕ; ಸ್ಕ್ರೀಡ್ ಕಂಪಕ, ರೂಪಕದ ಕಂಪಕ
vibrator
ಕಂಪನ ಕಶ
(ಜೀ) ತನ್ನ ಚಲನೆಗಳಿಂದ ಆಹಾರವನ್ನು ಬಾಯಿಯೊಳಕ್ಕೆ ಎಳೆದುಕೊಳ್ಳಲು ಬಳಸುವ, ಕೆಲವು ಶೈವಲ ಪ್ರಾಣಿಗಳಲ್ಲಿರುವ ಚಾವಟಿಯಂಥ ಅಂಗ
vibracullum
ಕಂಪನಾನುಕುಂಚನ
(ಸ) ಕೆಲವು ಸಸ್ಯಗಳು (ಉದಾ: ಮುಟ್ಟಿದರೆಮುನಿ) ಆಘಾತಕ್ಕೆ, ವಿಶೇಷವಾಗಿ ಯಾಂತ್ರಿಕ ಆಘಾತಕ್ಕೆ ತೋರುವ ಅನುಕುಂಚನ ಪ್ರತಿಕ್ರಿಯೆ