(ತಂ) ಪ್ರಧಾನವಾಗಿ ತಾಮ್ರ ಮತ್ತು ತವರ ಲೋಹಗಳಿಂದಾದ ಮಿಶ್ರಲೋಹ. ತವರರಹಿತ ಮಿಶ್ರಲೋಹ ಗಳಿಗೂ ಇದು ಈಗ ಅನ್ವಯ. ಉದಾ: ಅಲ್ಯೂಮಿನಿಯಮ್ ಕಂಚು (AL+Cu), ಮ್ಯಾಂಗನೀಸ್ ಕಂಚು (Mn+Cu) ಇತ್ಯಾದಿ
bronze
ಕಂಚುಕ
(ಪ್ರಾ) ಕೆಲವು ಮೃದ್ವಂಗಿಗಳ ಚರ್ಮ ಕವಚ (ಸ) ಗೆಡ್ಡೆಯ ಪದರಗಳಲ್ಲೊಂದು; ಸಿಪ್ಪೆ. (ವೈ) ಒಂದು ಅಂಗದ ಆವರಣ ಕೋಶ. ಹೊದಿಕೆ ಪೊರೆ
tunic
ಕಂಚುಪ್ರಾಂತಿ
(ಸ) ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಮಧ್ಯಮ ಎತ್ತರದ ಮರ. ಮಕರಂಗ ಪೆಲ್ಟೇಟ ವೈಜ್ಞಾನಿಕ ನಾಮ. ಭಾರತದ ಬೆಟ್ಟ ಗುಡ್ಡಗಳಲ್ಲಿ ಬೆಳೆಯುತ್ತದೆ. ಕಾಫೀ ತೋಟಗಳಲ್ಲಿ ನೆರಳಿಗಾಗಿ ಬೆಳೆಸುವುದೂ ಉಂಟು. ಎಲೆಗಳಲ್ಲಿ ಪೊಟ್ಯಾಷ್ ಹಾಗೂ ಸಾರಜನಕ ಅಧಿಕ ಪ್ರಮಾಣ ದಲ್ಲಿದ್ದು ಬತ್ತದ ಗದ್ದೆಗಳಲ್ಲಿ ಗೊಬ್ಬರಕ್ಕಾಗಿ ಬಳಸುತ್ತಾರೆ. ಎಲೆ ಮತ್ತು ತೊಗಟೆಗಳಲ್ಲಿ ಔಷಧೀಯ ಗುಣಗಳಿವೆ. ಚೌಬೀನೆ, ಬೆಂಕಿಕಡ್ಡಿ ಹಾಗೂ ಕಾಗದದ ಪಲ್ಪ್‌ನ ತಯಾರಿಕೆಯಲ್ಲಿ ಬಳಕೆ. ಚಂದಕನ್ನೆ
mecaranga peltata
ಕಂಜಂಕ್ಟಿವೈಟಿಸ್
(ವೈ) ಕಣ್ಣಿನ ಆರ್ದ್ರಚರ್ಮದ (ಕಂಜಂಕ್ಟೈವ) ಉರಿಯೂತ. ಕೆಂಗಣ್ಣು
conjunctivitis
ಕಂಜಂಕ್ಟೈವ
(ವೈ) ಕಣ್ಣಿನ ಬಿಳಿಗುಡ್ಡೆಯ ಹೊರಪೊರೆ ಮತ್ತು ರೆಪ್ಪೆಯ ಒಳಪೊರೆ. ಕಣ್ಣಿನ ಆರ್ದ್ರಚರ್ಮ
conjunctiva
ಕಂಟಕಚರ್ಮಿ
(ಪ್ರಾ) ಮುಳ್ಳಿನಿಂದ ಕೂಡಿ ಗಡಸು ಹೊರಚಿಪ್ಪು ಇರುವ ಸಾಗರ ಜೀವಿಗಳ ಒಂದು ಬಗೆ. ಇವುಗಳ
echinoderm
ಕಂಟಿಕ
(ಭೌ) ಧ್ವನಿಮುದ್ರಿಕೆಯ ತಟ್ಟೆಯಿಂದ ಧ್ವನಿಯನ್ನು ಪುನರುತ್ಪಾದಿಸಲು ಬಳಸುವ ಸೂಜಿ. ಕಂಟಿ. ಗಾನಸೂಚಿ