(ಸ) ಮಾನವನ ಹಾಗೂ ಪಶುಪಕ್ಷಿಗಳ ರೋಗ ಶಮನಕಾರಕ ಉತ್ಪನ್ನ ನೀಡುವ ಗಿಡ. ಬಳ್ಳಿ, ಮರ, ಮೂಲಿಕೆ, ನಿಸರ್ಗದಲ್ಲಿ ಸ್ವೇಚ್ಛೆಯಾಗಿ ಬೆಳೆಯುತ್ತವೆ. ಕೆಲವನ್ನು ಪ್ರಯತ್ನ ಪೂರ್ವಕವಾಗಿ ಬೆಳೆಸುವುದು ಉಂಟು. ಇವುಗಳ ಬೇರು, ಕಾಂಡ, ಎಲೆ, ಹೂ, ಹಣ್ಣು, ಕಾಯಿ, ಬೀಜ, ತೊಗಟೆ ಇತ್ಯಾದಿಗಳೆಲ್ಲ ಔಷಧ ತಯಾರಿಕೆಯಲ್ಲಿ ಉಪಯುಕ್ತ. ಇವುಗಳಲ್ಲಿರುವ ನಿರ್ದಿಷ್ಟ ರಾಸಾಯನಿಕ ಘಟಕಗಳಿಂದ ಇವುಗಳಿಗೆ ರೋಗ ಪರಿಹಾರಕ ಗುಣ ಒದಗುತ್ತದೆ. ಕೆಳವರ್ಗದ ಸಸ್ಯಗಳಿಂದ (ಅಂದರೆ ಬೂಷ್ಟು, ಪಾಚಿ ಇತ್ಯಾದಿ) ತಯಾರಾಗುವ ಔಷಧಗಳು: ಪೆನಿಸಿಲಿನ್, ಸ್ಟ್ರೆಪ್ಟೊಮೈಸಿನ್, ಎರ್ಗಟ್, ಅಯೊಡೀನ್ ಇತ್ಯಾದಿ. ಮೇಲ್ವರ್ಗದ ಸಸ್ಯಗಳಿಂದ ಆದವು: ಅಕೊನಿಟಮ್, ಪೊಡೊ ಫಿಲ್ಲಮ್, ಜಲಪ್, ಕ್ವಿನೈನ್, ಕೊಕೇನ್ ಇತ್ಯಾದಿ. ಅರಿಶಿನ, ಇಂಗು, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ದಾಲ್ಚಿನ್ನಿ, ತುಳಸಿ, ವೀಳಯದೆಲೆ, ಬಾಲ ಮೆಣಸು, ಅಳಲೆಕಾಯಿ, ಬಿಲ್ವಪತ್ರೆ, ಮೆಂತ್ಯ, ಪರಂಗಿ ಇವು ಉಪಯುಕ್ತ ಔಷಧ ಸಸ್ಯಗಳಲ್ಲಿ ಕೆಲವು
(ಪ್ರಾ) ಪ್ರಾಣಿಯ ಶರೀರವನ್ನು ಒಳಗೊಂಡ ಅಥವಾ ಅದಕ್ಕೆ ಆಧಾರವಾಗಿರುವ ಮೂಳೆಗಳು, ಮೆಲ್ಲೆಲುಬು, ಚಿಪ್ಪು ಮೊದಲಾದವುಗಳ ಗಡಸು ಚೌಕಟ್ಟು. ಅಸ್ಥಿಪಂಜರ. ಎಲುಬಿನ ಗೂಡು