(ಭೂವಿ) ಗ್ರೇಟ್ ಬ್ರಿಟನ್ ಹಾಗೂ ವಾಯವ್ಯ ಯೂರೋಪಿನಲ್ಲಿ ಕಂಡುಬರುವ ಡಿವೋನಿಯನ್ ಶಿಲಾರಚನೆ. ಪ್ರಧಾನವಾಗಿ ಕೆಂಪು ಜಲಜ ಶಿಲೆಗಳಿಂದ ರೂಪಿತ. ಮರಳುಗಲ್ಲು, ಪಿಂಡಶಿಲೆ ಹಾಗೂ ಜೇಡು ಶಿಲೆಗಳು ಇದರ ಮುಖ್ಯ ಘಟಕಗಳು
old red sandstone
ಓಲಾಟ
(ಭೌ) ಆವರ್ತನೆಯಲ್ಲಿರುವ ಕಾಯ ತೋರುವ ತೂಗಾಟ ಅಥವಾ ತೊನೆತ ಸ್ಥಿತಿ
wobble
ಓಲಿಯಮ್
(ರ) ಹೊಗೆ ಸೂಸುವ ಡೈಸಲ್ಫ್ಯೂರಿಕ್ ಆಮ್ಲದ ವ್ಯಾಪಾರೀ ನಾಮ. H2S2O7. ತೀವ್ರ ಸಂಕ್ಷಾರಕ ಸ್ವಭಾವದ್ದು. ಕೈಗಾರಿಕಾ ನೈಟ್ರೀಕರಣದಲ್ಲಿ ಬಳಕೆ
oleum
ಓಲಿಯಿಕ್ ಆಮ್ಲ
(ರ) C12H33COOH. ನಿರ್ವರ್ಣ ದ್ರವ; ದ್ರಬಿಂ ೧೪0 ಸೆ. ಗ್ಲಿಸರೀನ್ ಎಸ್ಟರ್ ಆಗಿ ಮೇದಾಮ್ಲಗಳಲ್ಲಿ ಲಭ್ಯ. ಗಾಳಿಗೆ ಒಡ್ಡಿದಾಗ ತತ್‌ಕ್ಷಣ ಆಕ್ಸಿಡೀಕರಣಗೊಂಡು, ಹಳದಿ ಬಣ್ಣಕ್ಕೆ ತಿರುಗಿ ಕಮಟು ನಾತ ಹೊರ ಸೂಸುತ್ತದೆ. ಕುಬಿಂ ೨೮೬0 ಸೆ; ಆಲಿವ್ ಮತ್ತು ಖಾದ್ಯ ತೈಲಗಳ ಪ್ರಧಾನ ಘಟಕ; ಸಾಬೂನು, ಮುಲಾಮುಗಳಲ್ಲಿ ಬಳಕೆ. ಕೆಂಪು ತೈಲ ಎಂಬ ಹೆಸರೂ ಉಂಟು. ಖನಿಜ ಸಂಸ್ಕರಣದಲ್ಲೂ ಬಳಕೆ
oleic acid
ಓಲಿಯಿನ್
(ರ) (C17H33COO)3C3H5. ಓಲಿಯಿಕ್ ಆಮ್ಲದ ಟ್ರೈಗ್ಲಿಸರೈಡ್. ಹಳದಿ ದ್ರವ. ದ್ರಬಿಂ -೫0 ಸೆ. ಆಲ್ಕಹಾಲ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕ್ಲೋರೊಫಾರಮ್, ಈಥರ್ ಹಾಗೂ ಕಾರ್ಬನ್ ಟೆಟ್ರಾಕ್ಲೋರೈಡ್‌ಗಳಲ್ಲಿ ಅಧಿಕವಾಗಿ ವಿಲೇಯ. ಹೆಚ್ಚಿನ ಮೇದಸ್ಸುಗಳಲ್ಲೂ ಎಣ್ಣೆಗಳಲ್ಲೂ ಲಭ್ಯ. ಅರಿವೆ ಗಿರಣಿ ಯಂತ್ರಗಳಲ್ಲಿ ಮೃದುಚಾಲಕವಾಗಿ ಬಳಕೆ
olein
ಓಲಿಯೊ ತೈಲ
(ರ) ಪ್ರಾಣಿಯ, ವಿಶೇಷವಾಗಿ ದನದ, ಕೊಬ್ಬನ್ನು ಹಿಂಡಿ ತೆಗೆದ ಹಳದಿ ಬಣ್ಣದ ಬೆಣ್ಣೆಯಂಥ ಎಣ್ಣೆ. ದ್ರವ ರೂಪದ ಓಲೀನ್ ಹಾಗೂ ಪಾಮಿತಿನ್‌ಗಳಿಂದ ಕೂಡಿರುತ್ತದೆ. ಮಾರ್ಗರಿನ್ ತಯಾರಿಕೆಯಲ್ಲಿ ಬಳಕೆ
oleo oil
ಓಲುವಿಕೆ
(ಭೌ) ನೋಡಿ: ವಿಕ್ಷೇಪಣ
deflection
ಓಸಜೋನ್‌ಗಳು
(ರ) ಫೀನೈಲ್ ಹೈಡ್ರಜೈನ್‌ನ ಎರಡು ಅಣುಗಳು ಮಾನೊಸ್ಯಾಕರೈಡ್‌ನ ಒಂದು ಅಣುವಿನೊಂದಿಗೆ ವರ್ತಿಸಿದಾಗ ದೊರೆಯುವ ಮಾನೊ ಸ್ಯಾಕರೈಡ್‌ಗಳ ಡೈಫೀನೈಲ್ ಹೈಡ್ರೊಜೋನ್‌ಗಳು. ನೀರಿನಲ್ಲಿ ಅಲ್ಪ ವಿಲೇಯ. ಪುನರ್
osazones
ಔಟ್‌ಪುಟ್
(ತಂ) ೧. ಯಾವುದೇ ಯಂತ್ರದಲ್ಲಿ (ವಿಶೇಷವಾಗಿ ಕಂಪ್ಯೂಟರ್‌ನಲ್ಲಿ) ಅನೇಕ ಸಂಸ್ಕರಣೆಗಳ ಫಲವಾಗಿ ದೊರೆತ ಹಾಗೂ ಆ ಯಂತ್ರದಿಂದ ಮತ್ತೊಂದು ಬಾಹ್ಯ ಸಾಧನಕ್ಕೆ ಅಥವಾ ಶಾಶ್ವತ ದಾಖಲೆ ಮಾಧ್ಯಮಕ್ಕೆ (ಕಾಗದ, ಮೈಕ್ರೊಫಿಲ್ಮ್ ಇತ್ಯಾದಿಗಳಿಗೆ) ವರ್ಗಾಯಿತವಾಗುವ ಮಾಹಿತಿ. ೨. ಮಂಡಲ ಅಥವಾ ಸಾಧನವೊಂದು ನೀಡುವ ವಿದ್ಯುಚ್ಛಕ್ತಿ, ವೋಲ್ಟೇಜ್, ಚಾಲಕ ಬಲಗಳ ಪ್ರಮಾಣ ಅಥವಾ ಸುದ್ದಿ ಸಮಾಚಾರ. ಪ್ರದಾನ. ನಿರ್ಗಮ. ನೋಡಿ: ಇನ್‌ಪುಟ್
output
ಔನ್ಸ್
(ಪ್ರಾ) ಚಿರತೆಗಿಂತ ಚಿಕ್ಕದಾದ, ಆದರೆ ಅದೇ ಬಗೆಯ ಚುಕ್ಕೆಗಳುಳ್ಳ ಒಂದು ತರಹದ ಸಣ್ಣ ಚಿರತೆ. ಪ್ಯಾಂತರಅನ್ಸಿ ಕುಲದ ಬೆಕ್ಕಿನ ಬಳಗದ ಪ್ರಾಣಿ ಹಿಮಚಿರತೆ. (ತಂ) ತೂಕದ ಹಾಗೂ ಗಾತ್ರದ ಒಂದು ಮಾನ. ತೂಕ ೧ ಔನ್ಸ್ = ೨೮.೩೫ ಗ್ರಾಂ; ಗಾತ್ರ ೧ ಔನ್ಸ್ = ೨೩.೪೧ ಮಿಲೀ.