(ತಂ) ಉಬ್ಬಿದ ಮೊನೆಗಳ ರೂಪದ ಬಿಡಿ ಬಿಡಿಯಾದ ಹಲ್ಲುಗಳುಳ್ಳ ಅರ
rasp
ಒರಳು
(ರ) ಪಿಂಗಾಣಿ, ಗಾಜು ಅಥವಾ ಶಿಲೆಯಿಂದ ಮಾಡಿದ ಬೋಗುಣಿ. ಒನಕೆ ಅಥವಾ ಮೋಟು ಹಾರೆಯ ಸಹಾಯದಿಂದ ಇದರಲ್ಲಿ ಘನ ಪದಾರ್ಥಗಳನ್ನು ಇಟ್ಟು ಪುಡಿ ಮಾಡಲಾಗುತ್ತದೆ. ಕಲಬತ್ತು. ನೋಡಿ : ಕುಟ್ಟಣಿ
mortar
ಒರಾಂಗೂಟಾನ್
(ಪ್ರಾ) ವಾನರ ಜಾತಿಗೆ ಸೇರಿದ ದೊಡ್ಡ ಪ್ರಾಣಿ. ಪಾಂಗೊ ಪಿಗ್ಮಿಯಿಸ್ ವೈಜ್ಞಾನಿಕ ನಾಮ. ಬೋರ್ನಿಯೊ, ಸುಮಾತ್ರ ದ್ವೀಪಗಳ ಜೌಗು ಕಾಡುಗಳಲ್ಲಿ ಮರಗಳ ಮೇಲೆ ವಾಸ. ಇವುಗಳ ಸಂಖ್ಯೆ ೫,೦೦೦ ಕ್ಕಿಂತ ಕಡಿಮೆ. ಬಲಯುತವಾದ ದೇಹ (೮೮೦ ಕಿಗ್ರಾಮ್‌ಗೂ ಹೆಚ್ಚು ತೂಕ), ಸಣ್ಣ ಕಿವಿಗಳು, ಗಿಡ್ಡ ಕಾಲುಗಳು, ಎದ್ದು ನಿಂತಾಗ ನೆಲ ಮುಟ್ಟುವಷ್ಟು ಉದ್ದವಾದ ಕೈಗಳು. ಧ್ವನಿ ಪೆಟ್ಟಿಗೆಯಿಂದ ಹೊರಬಂದ ಗಾಳಿಚೀಲ ಕುತ್ತಿಗೆ ಬಳಿ ನೇತುಬಿದ್ದಿರುತ್ತದೆ ಎರಡು ಕೆನ್ನೆಗಳ ಬಳಿಯೂ ಒಂದೊಂದು ಚೀಲ. ಸಸ್ಯಾಹಾರಿ
orangutan
ಒರೆ
(ಭೂವಿ) ಖನಿಜದ ಸೂಕ್ಷ್ಮಕಣಗಳ ಬಣ್ಣ. ಇದು ಒಡಲಿನ ಬಣ್ಣಕ್ಕಿಂತ ಭಿನ್ನವಾಗಿರಬಹುದು. ಉದಾ: ಪೈರೈಟ್ ಹಳದಿ, ಅದರ ಒರೆ ಕಪ್ಪು. ಖನಿಜವನ್ನು ಒರಟು ಪಿಂಗಾಣಿ ಫಲಕದ ಮೇಲೆ ಉಜ್ಜುವು ದರಿಂದ, ಚಾಕುವಿನಲ್ಲಿ ಹೆರೆಯುವುದರಿಂದ, ಒರೆ ಲಭಿಸುತ್ತದೆ
streak
ಒರೆಗಲ್ಲು
(ಭೂವಿ) ಬೆಣಚಿನಂಥ ಈ ಕಪ್ಪು ಅಥವಾ ಬೂದು ಕಲ್ಲಿಗೆ ಚಿನ್ನ ಅಥವಾ ಬೆಳ್ಳಿಯನ್ನು ಉಜ್ಜಿದಾಗ ಮೂಡುವ ಗುರುತನ್ನು (ಒರೆ) ಆಧರಿಸಿ ಆಯಾ ಲೋಹಗಳ ಪರಿಶುದ್ಧತೆಯನ್ನು ನಿರ್ಣಯಿಸಲಾಗುವುದು. ನಿಕಷ