(ಆವಿ) ಉಪಗ್ರಹ/ಅಂತರಿಕ್ಷ ನೌಕೆಯಲ್ಲಿನ ಒತ್ತಡವನ್ನು ಅಳೆಯುವ ಉಪಕರಣ
pressure sensor
ಒತ್ತು ಕಾಗದ
(ತಂ) ಅಳ್ಳಕವಾಗಿ ಒತ್ತಿದ ಸಡಿಲ ಬಂಧದ ಕಾಗದ. ಶಾಯಿ ಮುಂತಾದ ದ್ರವ ಪದಾರ್ಥಗಳನ್ನು ಹೀರಬಲ್ಲದು. ಬ್ಲಾಟಿಂಗ್ ಪೇಪರ್
blotting paper
ಒತ್ತುಗ
(ತಂ) ವಸ್ತುವನ್ನು ಕತ್ತರಿಸಲು, ಬಾಗಿಸಲು, ತಂತಿ ಎಳೆಯಲು, ರೂಪಕೊಡಲು ಅಗತ್ಯ ಒತ್ತಡ ನೀಡುವ ಸಾಧನ
press
ಒತ್ತುಫಲಕ
(ತಂ) ಯಂತ್ರೋಪಕರಣದ ಕಾರ್ಯ ಮೇಜು. ಮುದ್ರಣಯಂತ್ರದಲ್ಲಿ ಅಚ್ಚಿನ ಮೊಳೆಗಳ ಮೇಲೆ ಕಾಗದ ಒತ್ತುವ ಫಲಕ
platen
ಒಪರ್ಕ್ಯುಲಮ್
(ಸ) ಬೀಜಕಣಕೋಶದ ಅಂಗ ಭಾಗವನ್ನು ಮುಚ್ಚುವ ಅಥವಾ ತೆರೆಯುವ ಕವಚ. ಉದಾ: ಕೆಲವು ಬೀಜ ನಾಳಗಳು ಅಥವಾ ಬೀಜಕ ನಾಳಗಳು. (ಪ್ರಾ) ಚಿಪ್ಪುಜೀವಿ ತನ್ನ ಚಿಪ್ಪಿನೊಳಗೆ ಸೇರಿಕೊಂಡಾಗ ಚಿಪ್ಪಿನ ತೆರಪನ್ನು ಮುಚ್ಚುವ ಪದರ. ಮೀನಿನ ಕಿವಿರು ಮೇಲಿನ ಹೊದಿಕೆ. ಹಕ್ಕಿ ಮೂಗಿನ ಹೊಳ್ಳೆಗಳ ಮೇಲಿನ ಚರ್ಮ ಪದರ
operculum
ಒಪಾಸಮ್
(ಪ್ರಾ) ಮಾರ್ಸುಪಿಯೇಲಿಯ ಗಣ ಹಾಗೂ ಡೈಡೆಲ್ಫಿಡೀ ಕುಟುಂಬಕ್ಕೆ ಸೇರಿದ ಹಿಂಗಾಲಿನಲ್ಲಿ ಹೆಬ್ಬೆಟ್ಟು, ಹೊಟ್ಟೆಯ ಮೇಲೆ ಚೀಲ ಇರುವ, ನಿಶಾಚರಿ. ವೃಕ್ಷವಾಸಿ ಸರ್ವಭಕ್ಷಕ ಸ್ತನಿ. ಅನೇಕ ಮೊನಚಾದ ಹರಿತವಾದ ಬಾಚಿ ಹಲ್ಲುಗಳಿವೆ. ಅಮೆರಿಕ ಮೂಲವಾಸಿ
opossum
ಒಪೆರಾನ್
(ಜೀ) ಬಿಡಿ ಕಿಣ್ವಗಳು ಒಂದುಗೂಡಿ ಒಂದು ವ್ಯವಸ್ಥೆಯಾಗಿ ಕ್ರಿಯೆ ಜರಗಿಸುವಂತೆ ಅವನ್ನು ಸಂಶ್ಲೇಷಿಸುವ ಕಾರ್ಯ ನಿರ್ವಾಹಕ ಜೀನ್‌ಗಳ ಒಂದು ವೃಂದ. ಈ ವೃಂದದಲ್ಲಿ ಒಂದು ಜೀನ್ ಮತ್ತು ಒಂದು ಆಪರೇಟರ್ (ನಿರ್ವಾಹಕ) ಜೀನ್ ಇದ್ದು ಆಪರೇಟರ್ ಜೀನ್ ಇಡೀ ವೃಂದದ ಕಾರ್ಯವನ್ನು ಪ್ರಾರಂಭಿಸಬಲ್ಲದು ಮತ್ತು ನಿಲ್ಲಿಸಬಲ್ಲದು
operon
ಒಪ್ಪವಿಡು
(ತಂ) ಮೆರುಗು ಅಥವಾ ಹೊಳಪು ಕೊಡು. ಉಕ್ಕಿನ ಗುಂಡುಗಳೊಂದಿಗೆ ಹೊರಳಾಡುವಂತೆ ಮಾಡುವ ಮೂಲಕ ಇಲ್ಲವೇ ಗಡುಸಾದ ಲೋಹ ಪಟ್ಟಿಯಿಂದ ಉಜ್ಜುವ ಮೂಲಕ ನಯವಾದ ಹೊಳಪಿನ ಮೇಲ್ಮೈ ಒಪ್ಪ ನೀಡುವುದು
burnish
ಒಮೇಸಮ್
(ಪ್ರಾ) ಮೆಲುಕು ಹಾಕುವ ಪ್ರಾಣಿಗಳಲ್ಲಿ ಉದರದ ತೃತೀಯ ವಿಭಾಗ. ಇಲ್ಲಿ ಆಹಾರಾಂಶಗಳು ಸಮರೂಪ ಸ್ಥಿತಿಗೆ ಮಿಶ್ರಗೊಳ್ಳುತ್ತವೆ. ತೃತೀಯ ಅಮಾಶಯ