logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಒಡ್ಡಿಕೆ
(ವೈ) ನೆಗಡಿ, ರೋಗ ಅಥವಾ ತೇವಗಳಂಥ ಬಾಧಕ ಅಂಶಗಳಿಗೆ ಶರೀರವನ್ನು ಒಡ್ಡುವುದು/ತೆರೆದಿಡುವುದು. (ತಂ) ದ್ಯುತಿಸಂವೇದಿ ವಸ್ತುವಿನ ಮೇಲೆ (ಉದಾ: ಛಾಯಾ ಚಿತ್ರೀಕರಣದಲ್ಲಿ ಫಿಲ್ಮ್ ಮೇಲೆ) ನಿರ್ದಿಷ್ಟ ಪ್ರಮಾಣದಲ್ಲಿ ಬೆಳಕು ಬೀಳುವಂತೆ ಮಾಡುವ ಕ್ರಿಯೆ
exposure

ಒಡ್ಡು
(ಸಾ) ಅಲೆಗಳ ಹೊಡೆತದಿಂದ ದಂಡೆ ಕೊರೆತ ತಪ್ಪಿಸಲು ಕಡಲೊಳಗೆ ಕಟ್ಟಿದ ಅಡ್ಡಗೋಡೆ. ಅಲೆತಡೆ
breakwater

ಒಡ್ಡು
(ಪ್ರಾ) ಸ್ತನಿಗಳಲ್ಲಿ ವರ್ಧಿಸುತ್ತಿರುವ ಅಂಡದ ಸುತ್ತಲೂ ಆವರಿಸಿಕೊಂಡಿರುವ ಕೋಶಸಮೂಹ. (ಪವಿ) ಮೋಡಗಳ ಸಮೂಹ
cumulus

ಒಡ್ಡು
(ತಂ) ಹರಿಯುವ ನೀರನ್ನು ತಡೆದು ಮಿತಿ ಯೊಳಗಿಡಲು ಕಟ್ಟುವ ಅಣೆಕಟ್ಟು. ತಗ್ಗು ಪ್ರದೇಶದಲ್ಲಿ ಸಮಮಟ್ಟದ ರಸ್ತೆ ಕಟ್ಟಲು ಅಥವಾ ರೈಲ್ವೆ ಹಳಿ ಹಾಸಲು ನಿರ್ಮಿಸಿರುವ ಏರಿ
embankment

ಒಣಕೊಳೆತ
(ಸ) ಸಸ್ಯ ರೋಗಗಳಲ್ಲೊಂದು. ಉದಾ: ಆಲೂಗೆಡ್ಡೆಯಲ್ಲಿ ಪೆಟ್ಟು ಬಿದ್ದ ಭಾಗ ಉದುರಿ ಹೋಗುವುದು. ಮರಮುಟ್ಟುಗಳಲ್ಲಿ ಬೂಷ್ಟು ಬಂದು ಒಣಗುವುದು
dry rot

ಒಣಬೇಸಾಯ
(ಸ) ಅತ್ಯಲ್ಪ ಮಳೆ ಆಧರಿಸಿ ಕೈಗೊಳ್ಳುವ ವ್ಯವಸಾಯ. ಜೋಳ, ಸಜ್ಜೆ, ನವಣೆ, ರಾಗಿ ಮುಂತಾದ ಏಕದಳ ಧಾನ್ಯಗಳನ್ನು ಹೀಗೆ ಬೆಳೆಯಲಾಗುತ್ತದೆ
dry farming

ಒಣಹುಲ್ಲು
(ಸ) ಓಟ್ಸ್, ಜೋಳ, ಬತ್ತ, ರಾಗಿ ಮುಂತಾದ ಸಸ್ಯಗಳ ಬೆಳೆ ಕಟಾವು ಮಾಡಿದಾಗ ಲಭಿಸುವ ಹುಲ್ಲನ್ನು ಒಣಗಿಸಿ ದೀರ್ಘಕಾಲ ಆಹಾರಾಂಶ ನಷ್ಟವಾಗದಂತೆ ಸಂಗ್ರಹಿಸಿಟ್ಟ ದನ ಮೇವು
straw

ಒತ್ತಡ
(ಭೌ) ವಸ್ತುವೊಂದರ ಮೇಲೆ ಎಲ್ಲ ದಿಕ್ಕು ಗಳಿಂದಲೂ ಸಮಪ್ರಮಾಣದಲ್ಲಿ ಹಾಕಲಾಗುವ ಪೀಡನ. ವಸ್ತುವಿನ ಏಕಮಾನ ಕ್ಷೇತ್ರದ ಮೇಲೆ ಬಿದ್ದ ಬಲದಿಂದ ಇದನ್ನು ಅಳೆಯ ಲಾಗುತ್ತದೆ. ಎಸ್‌ಐ ಪದ್ಧತಿಯಲ್ಲಿ ಒತ್ತಡವನ್ನು ಪ್ಯಾಸ್ಕಲ್‌ಗಳಲ್ಲಿ (Pa) ವ್ಯಕ್ತಪಡಿಸಲಾಗುತ್ತದೆ. ಸಂಮರ್ದ
pressure

ಒತ್ತಡಮಾಪಕ
(ಭೌ) ಆವಿಯ ಅಥವಾ ಅನಿಲದ ಒತ್ತಡ ಅಳೆಯಲು ಬಳಸುವ ಸಾಧನ. ಸ್ಫಟಿಕಗಳ ಸಂಕ್ರಮಣ ಬಿಂದುಗಳನ್ನು ಗುರುತಿಸುವಲ್ಲೂ ಬಳಕೆ
tensimeter

ಒತ್ತಡ ಸಂಪುಟ
(ತಂ) ಉನ್ನತ ಅಥವಾ ಕಡಿಮೆ ಬಾಹ್ಯ ಒತ್ತಡಕ್ಕೆ ಒಳಪಡಿಸಿದಾಗಲೂ ಸಹಜ ವಾತಾವರಣ ಒತ್ತಡವನ್ನೇ ಉಳಿಸಿಕೊಂಡಿರುವ ಸಂಪುಟ. (ಉದಾ: ವಿಮಾನದಲ್ಲಿರುವಂತೆ)
pressurized capsule


logo