(ರ) CH2=C(CH3). CH=CH2. ನಿರ್ವರ್ಣ ದ್ರವ. ಕುಬಿಂ ೩೭0 ಸೆ. ರಬ್ಬರಿನ ವಿನಾಶಕ ಬಟ್ಟೀಕರಣ ದಿಂದ, ಪ್ರೋಪೆನ್‌ನಿಂದ ೨-ಮಿಥೈಲ್ ಬ್ಯುಟೇನಿನ ಡಿಹೈಡ್ರೊಜನೀ ಕರಣದಿಂದ ಹಾಗೂ ಇತರ ವಿಧಾನಗಳಿಂದ ಪಡೆಯಬಹುದು. ಸಂಶ್ಲೇಷಿತ ರಬ್ಬರ್‌ನ ತಯಾರಿಕೆಯಲ್ಲಿ ಬಳಕೆ
isoprene
ಐಸೊಫೇನ್
(ಜೀ) ಗೊತ್ತಾದ ಪ್ರಾಂತದಲ್ಲಿ ಹವೆಯನ್ನು ಅವಲಂಬಿಸಿದಂಥ ಯಾವುದೇ ಘಟನೆ ಜರಗುವ. ಉದಾ: ಒಂದೇ ಕಾಲದಲ್ಲಿ ಹೂ ಬಿಡುವ, ನಿರ್ದಿಷ್ಟ ಪ್ರದೇಶಗಳನ್ನು ಸಂಬಂಧಿಸುವ ಆಲೇಖದ ಮೇಲಿನ ರೇಖೆ
isophane
ಐಸೊಬಾರ್
(ಪವಿ) ದತ್ತ ಕ್ಷಣದಲ್ಲಿ ಒಂದೇ ವಾಯುಮಂಡಲ ಒತ್ತಡವಿರುವ ನೆಲೆಗಳನ್ನು ಸೇರಿಸುವ ವಕ್ರರೇಖೆ. (ರ) ಒಟ್ಟು ಪ್ರೋಟಾನ್‌ಗಳ ಹಾಗೂ ನ್ಯೂಟ್ರಾನ್‌ಗಳ ಸಂಖ್ಯೆ ಒಂದೇ ಆಗಿದ್ದು ಅದೇ ರಾಶಿ ಸಂಖ್ಯೆ ಮತ್ತು ಸರಿಸುಮಾರು ಅದೇ ಪರಮಾಣುರಾಶಿ ಇರುವ ನ್ಯೂಕ್ಲೈಡ್‌ಗಳ ಪೈಕಿ ಒಂದು. ಉದಾ: ಹೈಡ್ರೊಜನ್ ಹಾಗೂ ಹೀಲಿಯಮ್‌ಗಳ ಸಮಸ್ಥಾನಿಗಳು 13H, 23He. ತವರದ 11550 Sn ಮತ್ತು ಇಂಡಿಯಮ್‌ನ 115 49 In ಸಮಸ್ಥಾನಿಗಳು
isobar
ಐಸೊಮಾರ್ಫಿಸಮ್
(ಗ) ಒಂದು ಬೀಜ ಗಣಿತೀಯ ವ್ಯವಸ್ಥೆಯಿಂದ ಮತ್ತೊಂದನ್ನು ೧:೧ ಸಂಬಂಧ ಇರುವಂತೆ ನಕ್ಷಿಸುವುದು. ಎರಡು ವ್ಯವಸ್ಥೆಗಳೂ ಒಂದೇ ಅಮೂರ್ತ ರಚನೆಯುಳ್ಳವೆಂದು ಇದು ತೋರಿಸುತ್ತದೆ. ಅನುರೂಪತೆ. (ಸಾ) ಸಮರೂಪತೆ. ಸಮಾಕಾರತೆ. ಹೊರ ಆಕೃತಿ ಒಂದೇ ಆಗಿರುವುದು
isomorphism
ಐಸೊಮೆಟ್ರಿಕ್
(ಸಾ) ಅಳತೆಗಳು ಸಮವಾಗಿರುವ. ಸಮಮಾಪನೀಯ. (ಭೂವಿ) ಪರಸ್ಪರ ಲಂಬವಾಗಿರುವ ಮೂರು ಸಮ ಅಕ್ಷಗಳುಳ್ಳ (ಸ್ಫಟಿಕ ವರ್ಗ). ಉದಾ: ಅಡುಗೆ ಉಪ್ಪು ತ್ರಿಸಮಲಂಬಾಕ್ಷಿ. (ವೈ) ಎರಡು ತುದಿ ಸ್ಥಾನಗಳೂ ಸ್ಥಿರವಾಗಿದ್ದು ಸ್ನಾಯುವಿನ ಉದ್ದ ಹೆಚ್ಚೇನೂ ವ್ಯತ್ಯಾಸವಾಗದೆ ತುಯ್ತ ಮಾತ್ರ ಹೆಚ್ಚಾಗಿರುವ ಸ್ನಾಯು ಸಂಕೋಚನ. (ಗ) ಆಕೃತಿ ಬದಲಾಯಿಸದಿರುವ ಪರಿವರ್ತನೆ. (ಭೌ) ಗಾತ್ರ ಸ್ಥಿರವಾಗಿದ್ದಾಗ ಇತರ ಎರಡು ವ್ಯತ್ಯಯೀ ಭೌತಿಕ ಗುಣಗಳ (ಉದಾ : ಉಷ್ಣತೆ ಹಾಗೂ ಎಂಟ್ರೊಪಿ ಅಥವಾ ಉಷ್ಣತೆ ಹಾಗೂ ಒತ್ತಡ) ನಡುವಿನ ಸಂಬಂಧ ಸೂಚಿಸುವ ರೇಖೆ
isometric
ಐಸೊಮೆರಿಸಮ್
(ರ) ಒಂದೇ ಅಣುಸೂತ್ರ ವಿರುವ, ಆದರೆ ಅಣುವಿನೊಳಗಿನ ಪರಮಾಣುಗಳ ವಿಭಿನ್ನ ಅಳವಡಿಕೆಯ ಕಾರಣವಾಗಿ ಬೇರೆ ಬೇರೆ ಗುಣಗಳಿರುವ ಎರಡು ಅಥವಾ ಅಧಿಕ ರಾಸಾಯನಿಕ ಸಂಯುಕ್ತಗಳ ಅಸ್ತಿತ್ವ. ಸಮಾಂಗತೆ. ಉದಾ : ಅಮೋನಿಯಮ್ ಸಯನೇಟ್ NH4 CNO ಮತ್ತು ಯೂರಿಯ CO(NH2)2 ಐಸೊಮೆರ್‌ಗಳು (ಸಮಾಂಗಿಗಳು). ಈಥೈಲ್ ಆಲ್ಕಹಾಲ್ (CH3.CH2.OH) ಮತ್ತು ಡೈಮಿಥೈಲ್ ಈಥರ್ ಐಸೊಮೆರ್‌ಗಳು
isomerism
ಐಸ್ಲಂಡ್ ಸ್ಪಾರ್
(ರ) ದ್ವಿವಕ್ರೀಭವನ ಗುಣವುಳ್ಳ ನೈಸರ್ಗಿಕ ಕ್ಯಾಲ್ಸಿಯಂ ಕಾರ್ಬೊನೇಟ್ (CaCO3- ಕ್ಯಾಲ್ಸೈಟ್)ನ ಅತ್ಯಂತ ಶುದ್ಧ ಪಾರಕ ಹಾಗೂ ಸ್ಫಟಿಕ ರೂಪ. ಇದನ್ನು ಮೊದಲು ಐಸ್ಲಂಡ್‌ನಿಂದ ತರಲಾಯಿತು. ಇದರ ಪರಿಪೂರ್ಣ ಸೀಳುಗಳು ಹಾಗೂ ದ್ವಿವಕ್ರೀಭವನ ಗಮನಾರ್ಹ. ಧ್ರುವೀಕೃತ ಬೆಳಕು ವೀಕ್ಷಣೆಯ ನಿಕೋಲ್ ಅಶ್ರಗ ತಯಾರಿಕೆಯಲ್ಲಿ ಬಳಕೆ
iceland spar
ಒಂಟೆ
(ಪ್ರಾ) ಕಶೇರುಕ ವಿಭಾಗ, ಸ್ತನಿ ವರ್ಗ, ದ್ವಿಖುರ ಗಣ, ಕಮೆಲಿಡೀ ಕುಟುಂಬ ಹಾಗೂ ಕಮೀಲಸ್ ಜಾತಿಗೆ ಸೇರಿದ, ಮರುಭೂಮಿಯ ಹಡಗೆಂದು ಪರಿಚಿತವಾಗಿರುವ ಚತುಷ್ಪಾದಿ, ಸಾಕು ಪ್ರಾಣಿ. ಸವಾರಿಗೂ ಹೇರು ಸಾಗಣೆಗೂ ಉಪಯುಕ್ತ. ಎರಡು ಮುಖ್ಯ ಪ್ರಭೇದಗಳಿವೆ ೧. ಕಮೀಲಸ್ ಡ್ರಾಮಿ ಡೆರಿಯಸ್ (ಅರೇಬಿಯದ ಒಂಟೆ) ಒಂದು ಡುಬ್ಬ ಉಳ್ಳದ್ದು; ೨. ಕಮೀಲಸ್ ಬ್ಯಾಕ್ಟ್ರಿಯೇನಸ್ ಎರಡು ಡುಬ್ಬ ಉಳ್ಳದ್ದು (ಮಂಗೋಲಿಯ, ತುರ್ಕಿ ಜನ್ಮ ಸ್ಥಾನ). ಒಂಟೆಯ ಹಾಲು ಅತ್ಯುತ್ತಮ ಆಹಾರ. ರೋಮದಿಂದ ಮೇಲು ಹಾಸು, ಕಂಬಳಿ, ಕೋಟು, ಗೌನು ಇತ್ಯಾದಿ ವಸ್ತ್ರಗಳನ್ನು ತಯಾರಿಸುತ್ತಾರೆ