logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಐಸಿ
(ಭೌ,ಕಂ) ನೋಡಿ: ಸಮಾಕಲಿತ ಮಂಡಲ
integrated circuit

ಐಸೆಂಟ್ರಾಪಿಕ್
(ಭೌ) ಒಂದೇ ಎಂಟ್ರಪಿಯುಳ್ಳ (ಮುಖ್ಯವಾಗಿ ಕ್ರಿಯೆಗಳ ವಿಷಯದಲ್ಲಿ) ಎಂಟ್ರಪಿ ಬದಲಾಯಿಸದ. ಸಮಎಂಟ್ರಪಿಯ
isentropic

ಐಸೊಅಗ್ಲುಟಿನಿನ್
(ಪ್ರಾ) ಪ್ರಾಣಿಗಳ ಕೆಂಪು ರಕ್ತಕಣಗಳಲ್ಲಿ ಅಂಟಿಕೆ ಉಂಟುಮಾಡುವ ಪ್ರತಿಕಾಯ. ಯಾವ ಪ್ರಾಣಿ ಪ್ರಭೇದದಿಂದ ಉತ್ಪತ್ತಿಯಾಯಿತೋ ಆ ಪ್ರಾಣಿ ಪ್ರಭೇದದ ಕೋಶಗಳ ಮೇಲಷ್ಟೆ ಕ್ರಿಯೆ ನಡೆಸುತ್ತದೆ
isoagglutinin

ಐಸೊಎಲೆಕ್ಟ್ರಾನಿಕ್
(ಭೌ,ರ) (ಪರಮಾಣುಗಳ ವಿಷಯದಲ್ಲಿ) ನ್ಯೂಕ್ಲಿಯಸ್ ಸುತ್ತ ಒಂದೇ ಸಂಖ್ಯೆಯ ಎಲೆಕ್ಟ್ರಾನ್ ಗಳಿರುವ. ಉದಾ: ನೈಟ್ರೊಜನ್ (N2) ಹಾಗೂ ಕಾರ್ಬನ್ ಮಾನಾಕ್ಸೈಡ್ (CO) ಐಸೊ ಎಲೆಕ್ಟ್ರಾನಿಕ್ ಅಣುಗಳು; Na+ ಮತ್ತು Mg2+ ಅಯಾನ್‌ಗಳಲ್ಲಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ ೧೦
isoelectronic

ಐಸೊಕಾರ್ಪಸ್
(ರ) ಶಲಾಕಾಶಯಗಳು, ಪುಷ್ಪ ಪಾತ್ರೆ ಮತ್ತು ದಳವಲಯಗಳು ಸಮಸಂಖ್ಯೆಯಲ್ಲಿರುವುದು
isocarpous

ಐಸೊಕೋರ್
(ರ) ಅನಿಲದ ಅಥವಾ ದ್ರವದ ಗಾತ್ರ ಸ್ಥಿರವಾಗಿರುವಂಥ ಪರಿಸ್ಥಿತಿಗಳಲ್ಲಿ ಅಳೆಯಲಾದ ಉಷ್ಣತೆ ಮತ್ತು ಒತ್ತಡಗಳಂಥ ಪ್ರಮಾಣಗಳಿಗೆ ಸಂಬಂಧಿಸಿದ ವಕ್ರರೇಖೆ
isochore

ಐಸೊಗ್ರಾಫ್
(ತಂ) ಕೋನಮಾಪಕ ಮತ್ತು ತ್ರಿಕೋನ ಪಟ್ಟಿ ಇವೆರಡರ ಕ್ರಿಯೆಗಳನ್ನೂ ಜೊತೆಗೂಡಿಸಿ ಕೊಂಡ ಸಲಕರಣೆ
isograph

ಐಸೊಝೈಮುಗಳು
(ಪ್ರಾ) ಒಂದೇ ಬಗೆಯ ಪ್ರಾಣಿಯಲ್ಲಿ ಒಂದೇ ಕಿಣ್ವಕ್ಕೆ ಅನೇಕ ಬಗೆಯ ರಚನೆಗಳಿದ್ದಾಗ ರೂಪುಗೊಳ್ಳುವ ಘಟಕಗಳು. ಪ್ರೋಟೀನ್‌ಗಳ ಚತುರ್ಥ ಮಟ್ಟದ ರಚನೆ ಇವುಗಳಿಗೆ ಆಧಾರಭೂತ. ಕೋಳಿಯಲ್ಲಿ ಈ ಕಿಣ್ವ ವಿಶೇಷವಾಗಿ ಕಾಣಬರುತ್ತದೆ
isozymes

ಐಸೊಟೈಪ್
(ಜೀ) ಜೀವಿ ಸಂಕುಲದಲ್ಲಿ ಸಣ್ಣಪುಟ್ಟ
isotype

ಐಸೊಟೋನ್‌ಗಳು
(ಭೌ) ನ್ಯೂಕ್ಲಿಯಸ್‌ನಲ್ಲಿ ನ್ಯೂಟ್ರಾನ್‌ಗಳ ಸಂಖ್ಯೆ ಒಂದೇ ಆಗಿದ್ದು ಭಿನ್ನ ಪರಮಾಣು ಸಂಖ್ಯೆ ಇರುವ ಪರಮಾಣುಗಳು. ಉದಾ: ಸ್ಟ್ರಾನ್ಷಿಯಮ್-೮೮ ಹಾಗೂ ಯಿಟ್ರಿಯಮ್-೮೯ (ಇವೆರಡೂ ೫೦ ನ್ಯೂಟ್ರಾನ್‌ಗಳಿಂದ ಕೂಡಿವೆ) ಸಹಜಲಭ್ಯ ಐಸೊಟೋನ್‌ಗಳು
isotones


logo