(ತಂ) ಕೀಟನಾಶಕ, ಸುಗಂಧದ್ರವ್ಯ, ಬಣ್ಣ ಮುಂತಾದವನ್ನು ತುಂಬುವ, ಸಿಂಪರಣೆ ಏರ್ಪಾಡೂ ಇರುವ ಧಾರಕ. (ರ) ಮಂಜು ಅಥವಾ ಕಾವಳದಂಥ ಯಾವುದೇ ಕಲಿಲ ವ್ಯವಸ್ಥೆ; ಇದರಲ್ಲಿಯ ಪ್ರಸರಣ ಮಾಧ್ಯಮ ಒಂದು ಅನಿಲ
aerosol
ಏಲ್
(ರ) ಮೊಳೆತ ಜವೆಗೋದಿಯನ್ನು ನೀರಿನಲ್ಲಿ ಕೊಳೆಸಿ, ಹುಳಿ ಬರಿಸಿದ ಬಳಿಕ ಈ ದ್ರವಕ್ಕೆ ಹಾಪ್ಸ್ ಎಂಬ ಕಹಿ ಸಸ್ಯ ಪದಾರ್ಥ ಬೆರೆಸಿ ತಯಾರಿಸಿದ ಸೌಮ್ಯ ಮದ್ಯ
ale
ಏಲಕ್ಕಿ
(ಸ) ಜಿಂಜಿಬರೇಸೀ ಕುಟುಂಬಕ್ಕೆ ಸೇರಿದ ಏಕದಳ ಪಂಗಡದ ಬಹು ವಾರ್ಷಿಕ ಸಸ್ಯ. ಎಲಿಟೇರಿಯ ಕಾರ್ಡಮೋಮಮ್ ವೈಜ್ಞಾನಿಕ ನಾಮ. ಮುಖ್ಯವಾಗಿ ಭಾರತ, ಮಲಯ ಪರ್ಯಾಯ ದ್ವೀಪಗಳಲ್ಲಿ ಬೆಳೆಯುತ್ತದೆ. ಘಮಘಮಿಸುವ ಬೀಜಗಳುಳ್ಳ ಇದರ ಕಾಯಿಗಳನ್ನು ಸಂಬಾರ ಪದಾರ್ಥವಾಗಿ ಉಪಯೋಗಿಸಲಾಗುವುದು. ತೈಲಾಂಶದಲ್ಲಿ ಔಷಧೀಯ ಗುಣಗಳುಂಟು
cardamom
ಏಲಿರಾನ್
(ತಂ) ವಿಮಾನದ ರೆಕ್ಕೆಯ ಹಿಂಜೋಲು ಅಂಚುಭಾಗ. ಇದನ್ನು ಕೀಲಿನಿಂದ ರೆಕ್ಕೆಗೆ ಜೋಡಿಸಲಾಗಿರುತ್ತದೆ. ಚಾಲಕ ಇದನ್ನು ನಿಯಂತ್ರಿಸಿ ವಿಮಾನದ ಅನುದೀರ್ಘಾಕ್ಷ ಕುರಿತಂತೆ ವಿಮಾನಕ್ಕೆ ಉರುಳು ಚಲನೆ ಒದಗಿಸಿ ಅದರ ಸಮತೋಲ ಕಾಪಾಡ ಬಲ್ಲ. ಪಾರ್ಶ್ವ ಸಮತೋಲ ನಿಯಂತ್ರಕ
aileron
ಏವೀಸ್
(ಪ್ರಾ) ವಾಯು ಮಂಡಲದಲ್ಲಿ ಬಾಳಲು ಬೇಕಾಗುವ ಯುಕ್ತ ದೈಹಿಕ ಮಾರ್ಪಾಟು ಪಡೆದಿರುವ ಅಸ್ಥಿ ಪಟ್ಟೆ ಪ್ರಾಣಿವರ್ಗ. ಪಕ್ಷಿವರ್ಗ
aves
ಐಕಾನಸ್ಕೋಪ್
(ತಂ) ಟೆಲಿವಿಷನ್‌ಗೆ ಜೋಡಿಸಿರುವ ಒಂದು ನಳಿಗೆ. ಇದರಲ್ಲಿಯ ಎಲೆಕ್ಟ್ರಾನ್ ದಂಡವು ಚಿತ್ರವನ್ನು ಕ್ರಮ ವೀಕ್ಷಿಸಿ ಆ ದ್ಯುತಿಚಿತ್ರವನ್ನು ವಿದ್ಯುತ್ ಸಂeಗಳಾಗಿ ಪರಿವರ್ತಿಸುತ್ತದೆ. ಇವು ಮುಂದೆ ರೇಡಿಯೋ ಅಲೆಗಳಾಗಿ ಪರಿವರ್ತಿತವಾಗಿ ದೂರದರ್ಶನದಲ್ಲಿ ಬಿತ್ತರವಾಗುತ್ತವೆ. ಬಿಂಬದರ್ಶಕ
iconoscope
ಐಕ್ಯ ಧಾತು
(ಗ) ನೋಡಿ : ತತ್ಸಮಕಾರಿ ಧಾತು
identity element
ಐಗನ್ ಫಲನ
(ಭೌ) ಗಡಿ ನಿರ್ಬಂಧಗಳ ಒಂದು ಗಣವನ್ನು ತೃಪ್ತಿಪಡಿಸುವ ತರಂಗ ಸಮೀಕರಣ ಪರಿಹಾರ. ಕ್ಯಾರಕ್ಟರಿಸ್ಟಿಕ್ (ಲಾಕ್ಷಣಿಕ) ಫಲನ. ಪ್ರಾಪರ್ (ನೈಜ) ಫಲನ
eigen function
ಐಚ್ಛಿಕ ಕ್ರಿಯೆ
(ಭೌ) ಮನಸ್ಸಿನಲ್ಲಿ ರೂಪುಗೊಂಡ, ಯಾವುದೋ ಉದ್ದೇಶದಿಂದ ಪ್ರೇರಿತವಾದ, ಪ್ರeಪೂರಿತವಾದ, ತನ್ನಷ್ಟಕ್ಕೆ ತಾನೇ ಆಗದ ಕ್ರಿಯೆ