(ಪವಿ) ಇದೊಂದು ಸಾರಯುಕ್ತ ರಾಸಾಯನಿಕ ಕಳೆನಾಶಕ. ಇದರಲ್ಲಿ ಡೈಕ್ಲೋರೋಫಿನಾಕ್ಸಿ ಅಸಿಟಿಕ್ ಆಮ್ಲ ಮತ್ತು ಟ್ರೈಕ್ಲೋರೋಫಿನಾಕ್ಸಿ ಅಸಿಟಿಕ್ ಆಮ್ಲಗಳು ಸಮಪ್ರಮಾಣದಲ್ಲಿರುತ್ತವೆ. ೧೯೬೦ರ ದಶಕದಲ್ಲಿ ಅಮೆರಿಕ ಇದನ್ನು ವಿಯೆತ್ನಾಂನ ಯುದ್ಧದ ಸಮಯದಲ್ಲಿ ಬಳಸಿ ಕಾಡುಗಳನ್ನು ನಾಶಪಡಿಸಿತು. ಇದು ಕ್ಯಾನ್ಸರ್‌ಕಾರಕ. ಅಮೆರಿಕದಲ್ಲಿ ಇದನ್ನು ನಿಷೇಧಿಸಲಾಗಿದೆ. ಈ ರಾಸಾಯನಿಕದ ಪೊಟ್ಟಣದ ಮೇಲೆ ಇರುವ ಕಡುಕಿತ್ತಳೆ ಬಣ್ಣದ ಪಟ್ಟಿಯಿಂದಾಗಿ ಇದಕ್ಕೆ ಈ ಹೆಸರು
agent orange
ಏಡಿ
(ಪ್ರಾ) ಅಕಶೇರುಕಗಳ ವಿಭಾಗ, ಆರ್ತ್ರಾಪೊಡ ವಂಶ. ಕ್ರಸ್ಟೇಸಿಯ ವರ್ಗ, ಡೆಕೊಪೊಡ ಗಣ ಹಾಗೂ ಬ್ರಾಕಿಯರ ಉಪ ಗಣಕ್ಕೆ ಸೇರಿದ ಜಲವಾಸಿ ಪ್ರಾಣಿ. ಕಠಿಣಚರ್ಮಿ. ಇದರ ಇಡೀ ದೇಹ ಕ್ಯಾರಪೇಸ್ ಎಂಬ ಗಡಸು ಚಿಪ್ಪಿ ನಿಂದ ಆವೃತವಾಗಿದೆ. ಎದೆ ಭಾಗ ದಲ್ಲಿ ಐದು ಜೊತೆ ಕಾಲುಗಳಿವೆ. ಮೊದಲ ಜೊತೆಯ ಕಾಲುಗಳು ಚಿಮುಟದಂತೆ ಆಹಾರವನ್ನೂ ವಸ್ತುಗಳನ್ನೂ ಹಿಡಿಯುತ್ತವೆ. ಏಡಿಯು ಕೊಳೆತ ಮಾಂಸ ತಿಂದು ಪರಿಸರವನ್ನು ಸ್ವಚ್ಛಗೊಳಿಸುತ್ತದೆ. ನಳ್ಳಿ
crab
ಏಡಿಗಂತಿ
(ವೈ) ನೋಡಿ : ಕ್ಯಾನ್ಸರ್
cancer
ಏಣು
(ಭೂವಿ) ಪರ್ವತಗಳ ನೆರಿಗೆಗಳಲ್ಲಿರುವ ಗಟ್ಟಿ ಶಿಲೆಗಳ ಮೇಲಿನ ಮೃದು ಶಿಲೆಗಳು, ಹರಿಯುವ ನೀರಿನಿಂದ ಸವೆದು, ನಶಿಸಿ ಹೋದಾಗ ಉಳಿದು ತೋರುವ ಚೂಪಾದ ಶಿಖರವುಳ್ಳ ಬೆಟ್ಟದ ಬೆನ್ನೇರುಗಳು. ಇವುಗಳ ಒಂದು ಬದಿಯಲ್ಲಿ ವಾಲಿದ ಮುಖವೂ ಇನ್ನೊಂದು ಬದಿಯಲ್ಲಿ ಗಟ್ಟಿ ಶಿಲೆಯ ಇಳಿಜಾರು ಭಾಗವೂ ಕಾಣಿಸುತ್ತವೆ. ಭಾರತದಲ್ಲಿ ಸಿವಾಲಿಕ್ ಗುಡ್ಡ , ಕಿರಿ ಹಿಮಾಲಯ ಗುಡ್ಡ, ಕಾಶ್ಮೀರದ ಪೀರ್ ಪಂಜಲ್ ಶ್ರೇಣಿ ಇದಕ್ಕೆ ನಿದರ್ಶನ. ಈ ಏಣುಗಳು ಸಾಗರಾಂತರ್ಗತ ಪರ್ವತಗಳಲ್ಲೂ ಕಾಣಬರುತ್ತವೆ. ಇವು ಜ್ವಾಲಾ ಮುಖಿಯಿಂದ ಮೈದಳೆದವು. ಉದಾ: ಮಧ್ಯ ಅಟ್ಲಾಂಟಿಕ್ ಏಣುಗಳು
ridge
ಏಣು ಫಲಕ
(ಸಾ) ನಿರಿಗೆ/ಮಡಿಕೆ ಇರುವ ಹಲಗೆ (ಹಾಳೆ)
corrugated sheet
ಏಪೋಡುಗಳು
(ಪ್ರಾ) ಟೆಲಿಯೋಸ್ಟ್ ಮೀನುವರ್ಗದ ಗಣ; ಹಾವಿನಂಥ ದೇಹ; ಪ್ರತ್ಯೇಕ ಬಾಲ ಕಿವಿರಾಗಲೀ ವಸ್ತಿಕುಹರ ಕಿವಿರುಗಳಾಗಲೀ ಇಲ್ಲ
apodes
ಏರ್
(ಗ) ನೆಲದ ವಿಸ್ತೀರ್ಣ ಅಳೆಯಲು ಬಳಸುವ ಮೆಟ್ರಿಕ್ ಮಾನ. ೧ ಏರ್=೧೦೦ ಚಮೀ=೧೧೯.೬ ಚಗ. ನೋಡಿ: ಹೆಕ್ಟೇರ್
are
ಏರಾನಮಿ
(ಭೂ) ಊರ್ಧ್ವ ವಾಯುಮಂಡಲ ವಿಜ್ಞಾನ. ಮೇಲ್ವಾಯುಮಂಡಲದ ರಾಸಾಯನಿಕ ಸಂಯೋಜನೆ, ಭೌತಿಕ ಗುಣಗಳು ಮೊದಲಾದವನ್ನು ಕುರಿತ ವಿಜ್ಞಾನ ವಿಭಾಗ
aeronomy
ಏರಿ
(ತಂ) ನದಿಯ ನೀರು ತಗ್ಗು ಪ್ರದೇಶಗಳಿಗೆ ಹರಿದು ಹೋಗುವುದನ್ನು ತಪ್ಪಿಸಲು ಮತ್ತು ಪ್ರವಾಹದ ನೀರನ್ನು ಉಳಿಸಿ ಕೊಳ್ಳಲು ನದಿಗೆ ಅಡ್ಡವಾಗಿ ಶುಷ್ಕ ಭೂಮಿಯ ಮೇಲೆ ನಿರ್ಮಿಸುವ ಒಂದು ಅಡ್ಡಗಟ್ಟು. ಬದು
dyke
ಏರಿ
(ಸಾ) ಗದ್ದೆಗಳ ನಡುವೆ ಇಕ್ಕಟ್ಟಾದ ಎತ್ತರದಾರಿ. ಕಟ್ಟೆ. ಬದು