logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಏಕಾಮ್ಲೀಯ
(ರ) ಪಲ್ಲಟಯೋಗ್ಯವಾದ ಒಂದೇ ಒಂದು ಹೈಡ್ರಾಕ್ಸಿಲ್ ರ‍್ಯಾಡಿಕಲ್ ಇರುವ (ಪ್ರತ್ಯಾಮ್ಲ) ಉದಾ: ಸೋಡಿಯಮ್ ಹೈಡ್ರಾಕ್ಸೈಡ್ NaOH, ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ KOH
monoacidic

ಏಕಾಹಾರಿ
(ಪ್ರಾ) ಒಂದೇ ಬಗೆಯ ಆಹಾರ ಸೇವಿಸುವ. ಉದಾ : ಒಂದೇ ಬಗೆಯ ಸಸ್ಯಕ್ಕೆ ತಮ್ಮನ್ನು ಸೀಮಿತ ಗೊಳಿಸಿಕೊಂಡಿರುವ ಕೀಟಗಳು; ಯಾವತ್ತೂ ಒಂದೇ ಕೋಶದಲ್ಲಿ ಜೀವಿಸುವ ಸ್ಪೋರೊಜೋವ
monophagous

ಏಕಿಕ
(ಸಾ) ಏಕಮಾನಗಳ; ಏಕಮಾನಗಳಿಗೆ ಸಂಬಂಧಿಸಿದ. ವಿಭಜನೆಗೊಳ್ಳದೆ ಏಕಮಾನ ರೂಪಿಸುವ
unitary

ಏಕೀಕರಿಸು
(ಸಾ) ಒಂದುಗೂಡಿಸು; ಏಕರೂಪಕ್ಕೆ ತರು
unify

ಏಕೀಕೃತ ಕ್ಷೇತ್ರ ಸಿದ್ಧಾಂತ
(ಭೌ) ಗುರುತ್ವಾಕರ್ಷಣೀಯ ಸಿದ್ಧಾಂತವನ್ನೂ ವಿದ್ಯುತ್ಕಾಂತೀಯ ಸಿದ್ಧಾಂತವನ್ನೂ ಒಂದೇ ಚೌಕಟ್ಟಿನಲ್ಲಿ ನಿರೂಪಿಸಲು ಪ್ರಯತ್ನಿಸುವ ಯಾವುದೇ ಸಿದ್ಧಾಂತ. ವಿಶ್ವದ ಮೂಲಭೂತ ಅಂತರಕ್ರಿಯೆಗಳಾದ ಗುರುತ್ವಾಕರ್ಷಣೆ, ವಿದ್ಯುತ್ಕಾಂತತ್ವ, ದುರ್ಬಲ ಮತ್ತು ಪ್ರಬಲ ಬೈಜಿಕ ಬಲಗಳು - ಈ ನಾಲ್ಕು ಆಂತರಿಕ ಕ್ರಿಯೆಗಳಲ್ಲಿ ಎರಡು ಅಥವಾ ಹೆಚ್ಚು ಅಂತರಕ್ರಿಯೆಗಳನ್ನು ವಿವರಿಸಬಲ್ಲ ಒಂದು ಸಿದ್ಧಾಂತ
unified field theory

ಏಕೀಕೃತ ಮಾನಕ
(ರ) ಕಾರ್ಬನ್ ಸಮಸ್ಥಾನಿ c೧೨ರ ರಾಶಿಯನ್ನು ೧೨ ಎಂದು ಅಂಗೀಕರಿಸಿ ವ್ಯಾಖ್ಯಾನಿಸಿರುವ ಪರಮಾಣವಿಕ, ಆಣವಿಕ ತೂಕ ಮಾನಕ. ಎಂದೇ ಕಾರ್ಬನ್‌ನ ಪರಮಾಣವಿಕ ರಾಶಿ ಏಕಮಾನ ೧.೬೬ ೧೦-೨೭ ಕಿಗ್ರಾಮ್
unified scale

ಏಕೈಕ
(ಸಾ) ಎಣೆಯಿಲ್ಲದ, ಸಾಟಿಯಿಲ್ಲದ, ಅದ್ವಿತೀಯ
unique

ಏಕೈಕತೆ
(ಖ) ದೇಶ ಕಾಲದಲ್ಲಿ ಅನಂತ ವಕ್ರತೆ ಇರುವ ಒಂದು ಬಿಂದು. ಅನಂತ ಸಾಂದ್ರತೆಯ ಹಾಗೂ ಶೂನ್ಯ ಆಯಾಮದ ಈ ಬಿಂದುವಿನಲ್ಲಿ ದೇಶ-ಕಾಲಗಳ ಎಲ್ಲ ಪರಿಕಲ್ಪನೆಗಳೂ ಮುರಿದುಬೀಳುತ್ತವೆ. ಕೆಲವು ಸಿದ್ಧಾಂತಗಳ ಪ್ರಕಾರ ಕಪ್ಪುಕುಳಿ (ಬ್ಲಾಕ್‌ಹೋಲ್)ಯನ್ನು ವಿಶ್ವದ ಆದಿ ಅಥವಾ ವಿಶ್ವದ ಅಂತ್ಯದಂಥ ಸನ್ನಿವೇಶಗಳಲ್ಲಿ ಕಾಣಬಹುದು
singularity

ಏಕೈಲಿಯಾ ಗ್ಯಾಸ್ಟ್ರಿಕ
(ವೈ) ೧. ಜಠರಾಮ್ಲ ಉತ್ಪಾದನೆಯಾಗದ ಪರಿಸ್ಥಿತಿ. ೨. ಮೇದರಸ ರಾಹಿತ್ಯ
achylia gastrica

ಏಕೋದ್ಭವೀ
(ಸ) ಒಂದೇ ಜೀನ್‌ನಿಂದ (ವಂಶ ವಾಹಿ) ಉದ್ಭವಿಸಿದ, ಒಂದೇ ಜೀನ್‌ಅನ್ನು ಅವಲಂಬಿಸಿದ. (ಪ್ರಾ) ಒಂದೇ ಲಿಂಗದ ಸಂತಾನಕ್ಕೆ ಜನ್ಮ ನೀಡುವ
monogenic


logo