logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಏಕಶೃಂಗಿ
(ಪ್ರಾ) ೧. ಒಂಟಿ ಕೊಂಬು ಇರುವ ಗ್ರೀಕ್ ಪುರಾಣ ಪ್ರಸಿದ್ಧ ಕಾಲ್ಪನಿಕ ಪ್ರಾಣಿ. ೨. ನಾರ್ವಲ್ ಎಂಬ ತಿಮಿಂಗಿಲಕ್ಕೆ ಮೂತಿ ತುದಿಯಲ್ಲಿ ಈಟಿಯಂಥ ಮೂಳೆ ಇದೆ. ಸು. ಶರೀರದ ಉದ್ದ ೬೦ ಸೆಂಮೀ. ಶೃಂಗದ ಉದ್ದ ೨೭ ಸೆಂಮೀ
unicorn

ಏಕಸಂಕರ
(ಜೀ) ಒಂದು ನಿರ್ದಿಷ್ಟ ಜೀನ್‌ಗೆ ಸಂಬಂಧಿಸಿದಂತೆ ವಿಭಿನ್ನ ಅಲೀಲ್‌ಗಳು. ಅಂದರೆ ಒಂದು ಜನ್ಮ ದಾತೃವಿನಲ್ಲಿ ಎರಡು ಪ್ರಭಾವೀ ಅಲೀಲ್‌ಗಳೂ ಇನ್ನೊಂದರಲ್ಲಿ ಎರಡು ಅಪ್ರಭಾವೀ ಅಲೀಲ್‌ಗಳೂ ಇದ್ದು ಅವುಗಳ ಸಂಕರದಿಂದ ಜನಿಸಿದ ಸಂತಾನ. ಈ ಎಲ್ಲ ಸಂತಾನಗಳಲ್ಲೂ ಈ ಜೀನ್‌ಗೆ (ವಂಶವಾಹಿ) ಸಂಬಂಧಿಸಿದಂತೆ ಒಂದು ಪ್ರಭಾವೀ ಹಾಗೂ ಒಂದು ಅಪ್ರಭಾವೀ ಅಲೀಲ್ ಇರುತ್ತವೆ. ಅಂದರೆ, ಅವು ಆ ಒಂದು ಲೋಕಸ್‌ನಲ್ಲಿ ಸಂಕರವಾಗಿರುತ್ತವೆ. ಈ ಸಂತಾನಗಳ ಸಂಕರದಿಂದ ಜನಿಸುವ ಸಂತಾನಗಳಲ್ಲಿ ೩:೧ ಪ್ರಮಾಣದಲ್ಲಿ ಪ್ರಭಾವೀ ಹಾಗೂ ಅಪ್ರಭಾವೀ ಅಲೀಲ್‌ಗಳಿವೆ
monohybrid

ಏಕಸಂಧೀ
(ಸ) ಪುಷ್ಪದಲ್ಲಿ ಎಲ್ಲ ಕೇಸರಗಳೂ ಅವುಗಳ ತಂತುಗಳಿಂದ ಒಂದು ನಳಿಕೆಯಾಗಿ ಒಟ್ಟಾಗಿ ಸೇರಿಕೊಂಡಿರುವುದು. ಉದಾ: ದ್ವಿದಳೀಯ ಪುಷ್ಪಗಳು
monadelphous

ಏಕಸಾಮರ್ಥ್ಯ ಕಾಂಡಕೋಶ
(ವೈ) ಒಂದೇ ಒಂದು ರೀತಿಯ ಜೀವಕೋಶವನ್ನು ಮಾತ್ರ ಸೃಜಿಸುವ ಸಾಮರ್ಥ್ಯವನ್ನು ಹೊಂದಿರುವ ಮೂಲ ಜೀವಕೋಶ. ಉದಾ: ಕೇವಲ ಅಂಡಾಣು/ವೀರ್ಯಾಣುಗಳನ್ನು ಸೃಜಿಸಬಲ್ಲ ಆದಿಕೋಶ
unipotent stem cell

ಏಕಸ್ವಾಮ್ಯ
(ಸಾ) ಯಾವುದೇ ಸರಕಿನ ತಯಾರಿಕೆ, ವಿತರಣೆ, ಮಾರಾಟ ಕುರಿತಂತೆ ಸಂಪೂರ್ಣ ಪ್ರಭುತ್ವವಿರುವ ಸ್ಥಿತಿ
monopoly

ಏಕಾಂಗ ಸಸ್ಯ
(ಸ) ಕಾಂಡ, ಎಲೆ ಮತ್ತು ಬೇರು ಭಾಗಗಳು ಪ್ರತ್ಯೇಕವಾಗಿರದ ಸರಳ ಸಸ್ಯ ರಚನೆ. ಏಕ/ಬಹುಕೋಶಿಗಳು. ಉದಾ: ಶೈವಲ, ಶಿಲೀಂಧ್ರ, ಶಿಲಾವಲ್ಕ ಮತ್ತು ಹಾವಸೆ
thallus

ಏಕಾಂಗುಲಿಕ
(ಪ್ರಾ) ಕೈಯಲ್ಲಿ ಅಥವಾ ಕಾಲಿನಲ್ಲಿ ಒಂದೇ ಬೆರಳು ಉಳ್ಳದ್ದು
monodactylous

ಏಕಾಕ್ಷೀಯ ಸ್ಫಟಿಕ
(ಭೂವಿ) ಒಂದೇ ದೃಗಕ್ಷವಿರುವ ದ್ವಿವಕ್ರೀಭವನ ಸ್ಫಟಿಕ. ಉದಾ: ಷಡ್ಭುಜೀಯ, ಚತುರ್ಭುಜೀಯ ಸ್ಫಟಿಕಗಳು. ನೋಡಿ : ದ್ವಿಅಕ್ಷೀಯ ಸ್ಫಟಿಕ
uniaxial crystal

ಏಕಾಣವಿಕ ಕ್ರಿಯೆ
(ರ) ರಾಸಾಯನಿಕ ಕ್ರಿಯೆ ಜರಗಿಸಲು ಒಂದೇ ಅಣು ಮಾತ್ರ ಅಗತ್ಯವಿರುವ ಸಂದರ್ಭ
monomolecular reaction

ಏಕಾಭಿಮುಖ ವಿಕಾಸವಾದ
(ಜೀ) ಒಂದು ಬಗೆಯ ಸಸ್ಯ ಅಥವಾ ಪ್ರಾಣಿ ಯಾವುದೇ ಬಾಹ್ಯ ಬಲಗಳ ಅಥವಾ ಪರಿಸ್ಥಿತಿಗಳ ಪ್ರಭಾವಕ್ಕೊಳಗಾಗದೆಯೇ ಸ್ವತಂತ್ರವಾಗಿ ತನ್ನ ಆನುವಂಶಿಕ ಗುಣಗಳ ಪರಿಣಾಮವಾಗಿಯಷ್ಟೆ ಬಲು ಕಾಲ ನಿರ್ದಿಷ್ಟ ದಿಶೆಯಲ್ಲಿ ವಿಕಾಸಗೊಳ್ಳುತ್ತ ಹೋಗುತ್ತದೆ; ಒಂದೇ ಪೂರ್ವಜರಿರುವ ವಿಭಿನ್ನ ಸಸ್ಯ/ಪ್ರಾಣಿ ವೃಂದಗಳು ಸಮಾಂತರ ವಾಗಿ ಬೆಳೆಯುತ್ತ ಹೋಗುವುದರಲ್ಲಿ ಇದನ್ನು ಕಾಣಬಹುದು - ಎಂಬ ಒಂದು ಬಗೆಯ ವಿಕಾಸವಾದ. ಇದು ಅಷ್ಟು ತಥ್ಯವಲ್ಲ ಎಂದು ಪ್ರಯೋಗಗಳು ತೋರಿಸಿಕೊಟ್ಟಿವೆ. ಆರ್ತೋಜೆನಿಸಿಸ್
orthogenesis


logo