logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಏಕವರ್ಣಿ
(ಭೌ) ಒಂದೇ ಬಣ್ಣದಲ್ಲಿ ಚಿತ್ರಿಸಿದ ಚಿತ್ರ. ಏಕವರ್ಣದ ವಿವಿಧ ಛಾಯೆಗಳ ಚಿತ್ರ. ಏಕವರ್ಣ ರೂಪಣೆ. ಸಾಮಾನ್ಯವಾಗಿ ಕಪ್ಪು-ಬಿಳುಪು ಮಾತ್ರ ಬಳಸಿ ರಚಿಸಿದ ವರ್ಣಚಿತ್ರವನ್ನು ಹೀಗೆ ಕರೆಯುತ್ತಾರೆ. ಮಾನೊಕ್ರೋಮ್
monochrome

ಏಕವರ್ಣೀಯ
(ಭೌ) ಅತ್ಯಂತ ಕಡಿಮೆ ವ್ಯಾಪ್ತಿಯ ಅಲೆಯುದ್ದವಿರುವ ವಿದ್ಯುತ್ಕಾಂತ ವಿಕಿರಣ ಅಥವಾ ಅತ್ಯಂತ ಕಡಿಮೆ ವ್ಯಾಪ್ತಿಯ ಶಕ್ತಿ ಇರುವ ಕಣಗಳು; ಅತ್ಯಂತ ಕಡಿಮೆ ವ್ಯಾಪ್ತಿಯ ಅಲೆ ಯುದ್ದದ ಬೆಳಕನ್ನು ವಿಕಿರಣಿಸುವ ಮೇಲ್ಮೈಯ ಬಣ್ಣಕ್ಕೆ ಸಂಬಂಧಿಸಿದ
monochromatic

ಏಕವರ್ಣೀಯ ವಿಕಿರಣ
(ಭೌ) ಒಂದೇ ಆವೃತ್ತಿ ಅಥವಾ ಅಲೆಯುದ್ದದ ವಿದ್ಯುತ್ಕಾಂತ ವಿಕಿರಣ, ವಿಶೇಷವಾಗಿ ಗೋಚರ ವಿಕಿರಣ. ಸಂಪೂರ್ಣವಾಗಿ ಏಕವರ್ಣೀಯ ವಿಕಿರಣವನ್ನು ಉತ್ಪಾದಿಸುವುದು ಸಾಧ್ಯವಿಲ್ಲ. ಆದರೆ ಲೇಸರ್‌ಗಳು ಅತ್ಯಂತ ಕಡಿಮೆ ಅಗಲದ ಆವೃತ್ತಿ ಪಟ್ಟೆಯೊಳಗೆ ಅಂಥ ವಿಕಿರಣ ಉಂಟುಮಾಡುತ್ತವೆ
monochromatic radiation

ಏಕವರ್ತಕತೆ
(ರ) ಯಾವುದೇ ರಾಸಾಯನಿಕ ವಸ್ತು ಒಂದಕ್ಕಿಂತ ಹೆಚ್ಚು ಭೌತರೂಪಗಳಲ್ಲಿರಬಹುದಾದರೂ ಅವುಗಳಲ್ಲಿ ಒಂದು ರೂಪ ಮಾತ್ರ ಸ್ಥಿರವಾಗಿರುವ ಗುಣಧರ್ಮ
monotropy

ಏಕವಿಷಯಕ ಪ್ರಬಂಧ
(ಸಾ) ಒಂದೇ ವಿಷಯ/ವಸ್ತುವಿನ ಮೇಲೆ ಅಥವಾ ಒಂದೇ ವರ್ಗಕ್ಕೆ ಸೇರಿದ ವಸ್ತುಗಳ ಮೇಲೆ ಬರೆದ ಪ್ರಬುದ್ಧ ಲೇಖನ. ಏಕಲೇಖೀ
monograph

ಏಕವಿಷಯಕ ಭ್ರಮೆ
(ವೈ) ಒಂದೇ ವಿಷಯ ಅಥವಾ ವಿಚಾರಕ್ಕೆ ಸಂಬಂಧಿಸಿದಂಥ ಹುಚ್ಚು. ಗೀಳು ಅಥವಾ ಅಪಸಾಮಾನ್ಯ ಅಪರಿಮಿತ ಉತ್ಸಾಹ
monomania

ಏಕಶರ್ಕರಗಳು
(ರ) ಸರಳ ಸಕ್ಕರೆಗಳ ವರ್ಗ. ಸಕ್ಕರೆಯ ಒಂದು ಅಣುವಿನಲ್ಲಿರುವ ಕಾರ್ಬನ್ ಪರಮಾಣುಗಳ ಸಂಖ್ಯೆಗೆ ಅನುಗುಣವಾಗಿ ಮತ್ತೆ ವರ್ಗೀಕರಣ. ಉದಾ: ಹೆಕ್ಸೋಸ್- C6H12O6 ಪೆಂಟೋಸ್ - C5H10O5 ಇತ್ಯಾದಿ ಇವುಗಳನ್ನು ಜಲವಿಭಜಿಸಲಾಗದು
monasaccharides

ಏಕಶಿಲೆ
(ಸಾ) ಒಂದೇ ಶಿಲಾರಾಶಿಯಿಂದಾದ. ಸ್ತಂಭಾಕೃತಿಯಾಗಿ, ಸ್ಮಾರಕವಾಗಿ ರೂಪಿಸಿದ ಅಖಂಡ ಶಿಲೆ
monolith

ಏಕಶುಕ್ರಾಣುತೆ
(ಪ್ರಾ) ಬಹುಶುಕ್ರಾಣುತೆಯ ವಿರುದ್ಧ ಪದ. ಒಂದೇ ಶುಕ್ರಾಣು ಅಂಡದೊಳಗೆ ಪ್ರವೇಶಿಸಿ ಗರ್ಭಕಟ್ಟುವಿಕೆ. ವಲಯವಂತ ಪ್ರಾಣಿಗಳು, ಮೀನು, ಕಪ್ಪೆ ಮುಂತಾದ ಕೆಳವರ್ಗ ಪ್ರಾಣಿಗಳಲ್ಲಿ ಹೀಗೆ ಸಂಭವಿಸುತ್ತದೆ
monospermy

ಏಕಶೃಂಗಿ
(ಪ್ರಾ) ಒಂದೇ ಒಂದು ಕೊಂಬುಳ್ಳ ಪ್ರಾಣಿ. ಉದಾ: ಘೇಂಡಾಮೃಗ
monocerous


logo