logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಏಕಮುಖ ಪ್ರವಾಹ
(ಭೌ) ಸದಾ ಒಂದೇ ದಿಶೆಯಲ್ಲಿ ಹರಿಯುವ ಮತ್ತು ಬಹುತೇಕ ನಿಯತ ಮೌಲ್ಯವಿರುವ ವಿದ್ಯುತ್ ಪ್ರವಾಹ. ನೇರಪ್ರವಾಹ. dc. ನೋಡಿ: ಪರ್ಯಾಯಕ ಪ್ರವಾಹ
direct current

ಏಕಯುಗಲೀ
(ಸ) ಕಾಂಡದ ಅತ್ತ ಇತ್ತ ಎದುರು ಬದಿಗಳಲ್ಲಿ ಎರಡು ಸಣ್ಣ ಸಣ್ಣ ಎಲೆಗಳಿರುವ ಪರ್ಣ ವ್ಯವಸ್ಥೆ
unijugate

ಏಕಯುಗ್ಮಜೀ
(ಪ್ರಾ) ಒಂದೇ ಫಲೀಕೃತ ಅಂಡ ಅಥವಾ ಅದರಿಂದ ಉಂಟಾದ ಆರಂಭಿಕ ಭ್ರೂಣ ಒಡೆದು ಜನಿಸಿದ ಅವಳಿಗಳು. ಇವು ಸಾಮಾನ್ಯವಾಗಿ ಒಂದೇ ಲಿಂಗದವಾಗಿ ಇರುತ್ತವೆ. ನೋಡಿ : ಸರ್ವಸಮ ಅವಳಿಗಳು
monozygotic

ಏಕಯುಗ್ಮಿ
(ಪ್ರಾ) ಒಂದೇ ಗಂಡು ಅಥವಾ ಹೆಣ್ಣಿನೊಂದಿಗೆ ಕೂಡುವ ಪ್ರಾಣಿ. ಏಕ ಪತಿತ್ವ, ಏಕ ಪತ್ನಿತ್ವ
monogamous

ಏಕರೀತಿ
(ಸಾ) ಎಲ್ಲಾ ಬಿಂದುಗಳಲ್ಲೂ ಅಥವಾ ಎಲ್ಲ ಕಾಲಗಳಲ್ಲೂ ಅದೇ ಆಗಿರುವ; ಸಂಪೂರ್ಣವಾಗಿ ಸಕ್ರಮವಾದ, ಬದಲದ, ಏಕರೂಪ
uniform

ಏಕರೀತಿ ಅಭಿಸರಣೆ
(ಗ) ನೋಡಿ : ಅಭಿಸರಣೆ
uniform convergence

ಏಕರೀತಿ ಚಲನೆ
(ಭೌ) ಯಾವುದೇ ಕಣ ಸಮಕಾಲಗಳಲ್ಲಿ ಸಮ ದೂರಗಳನ್ನು ಒಂದೇ ದಿಕ್ಕಿನಲ್ಲಿ ಕ್ರಮಿಸುವುದು; ವೇಗೋತ್ಕರ್ಷವಿಲ್ಲದೆ ಇರುವುದು
uniform motion

ಏಕರೀತಿ ವಿತರಣೆ
(ಭೌ) ಯಾದೃಚ್ಛಿಕ ಚರವೊಂದರ ವಿವಿಧ ಬೆಲೆಗಳು ಬರುವುದರ ಸಂಭಾವ್ಯತೆ ಏಕರೀತಿಯಲ್ಲಿರುವಂತೆ ಆ ಚರದ ವಿತರಣೆ
uniform distribution

ಏಕರೂಪತೆ
(ಜೀ) ಜೀವನಚಕ್ರದಲ್ಲಿ ರೂಪ ರಚನೆಗಳ ಬದಲಾವಣೆ ತೋರದ, ಬೆಳವಣಿಗೆಯ ಎಲ್ಲ ಹಂತ ಗಳಲ್ಲೂ ಒಂದೇ ಸಾಮಾನ್ಯ ರೂಪ ಉಳಿಸಿಕೊಂಡಿರುವ ಗುಣ
monomorphism

ಏಕಲಿಂಗಿ
(ಪ್ರಾ) ಒಂದು ಲಿಂಗದ, ನಿರ್ದಿಷ್ಟವಾಗಿ ಗಂಡು ಅಥವಾ ಹೆಣ್ಣಿನ ಲಕ್ಷಣಗಳನ್ನು ತೋರ್ಪಡಿಸುವ. (ಸ) ಶಲಾಕಾಶಯಗಳೂ ಕೇಸರಗಳೂ ಪ್ರತ್ಯೇಕ ಹೂಗಳಲ್ಲಿ ಇರುವ. ನೋಡಿ : ಉಭಯಲಿಂಗಿ
unisexual


logo