(ರ) ಪಲ್ಲಟಗೊಳಿಸಲು ಸಾಧ್ಯವಾದ ಒಂದು ಹೈಡ್ರೊಜನ್ ಪರಮಾಣುವುಳ್ಳ (ಆಮ್ಲ) ಉದಾ : ಹೈಡ್ರೊಕ್ಲೋರಿಕ್ ಆಮ್ಲ HCl, ನೈಟ್ರಿಕ್ ಆಮ್ಲ HNO3, ಹೈಪೊಫಾಸ್ಫರಸ್ ಆಮ್ಲ H3PO2
monobasic
ಏಕಪ್ರರೂಪ
(ಪ್ರಾ) ಒಂದು ಜಾತಿ ಅಥವಾ ಪ್ರಭೇದವನ್ನು ರೂಪಿಸುವಂಥ ಏಕ ಮಾದರಿಯ ಜೀವಿ. ಒಂದೇ ಅಧೀನ ಸದಸ್ಯವುಳ್ಳ ವರ್ಗೀಕಾರಕ ಗುಂಪು. ಉದಾ : ಒಂದೇ ಜಾತಿ ಉಳ್ಳ ಕುಟುಂಬ ಅಥವಾ ಒಂದೇ ಪ್ರಭೇದವುಳ್ಳ ಜಾತಿ
monotype
ಏಕಫಲಕ ವಿಮಾನ
(ತಂ) ಏಕೈಕ ಪ್ರಧಾನ ಆಧಾರಕ ಮೇಲ್ಮೈ ಉಳ್ಳ, ಒಂದೇ ಜೋಡಿ ರೆಕ್ಕೆಗಳಿರುವ ವಿಮಾನ ಅಥವಾ ಗ್ಲೈಡರ್. ಮಾನೊಪ್ಲೇನ್
monoplane
ಏಕಫಲೀಯ
(ಸ) ಒಮ್ಮೆ ಫಲವಿತ್ತು ಸಾಯುವ. ಉದಾ: ತೆಂಗಿನ ಕುಟುಂಬದ ಕಾರಿಫಾ. ನೋಡಿ : ಬಹುಫಲೀಯ
monocarpic
ಏಕಬಿಂದುಸ್ಥ
(ಗ) ಮೂರು/ಹೆಚ್ಚು ಸರಳ ರೇಖೆಗಳು ಒಂದೇ ಬಿಂದುವಿನಲ್ಲಿ ಸಂಧಿಸುವುದು. ಸಂಗಮಶೀಲ. ಸಂಗಾಮೀ
concurrent
ಏಕಬೀಜಕ
(ಸ) ಸರಳ ಅಥವಾ ಅವಿಭಜಿತ ಅಚಲನಶೀಲ ಅಲೈಂಗಿಕ ಬೀಜಕ; ಕೆಲವು ಶೈವಲಗಳ ದ್ವಿಗುಣಿತ ಪೀಳಿಗೆಯಿಂದ ಉತ್ಪಾದಿತವಾದುದು (ಪ್ರಾ) ಒಂದೇ ಬೀಜಕವುಳ್ಳ
monospore
ಏಕಬೀಜಕೇಂದ್ರೀಯ
(ಪ್ರಾ) ವಿಭಜನೆಗಳಿಲ್ಲದ ಏಕೈಕ ಬೀಜಕೇಂದ್ರವುಳ್ಳ (ಒಂದು ಮ್ಯಾಕ್ರೊಲ್ಯೂಕೊಸೈಟ್). ಬಹುರೂಪ ಬೀಜಕೇಂದ್ರವುಳ್ಳದ್ದಕ್ಕೆ ವಿರುದ್ಧವಾದ
mononuclear
ಏಕಬೆದೆಕಾಲೀ
(ಪ್ರಾ) ಒಂದೇ ಬೆದೆಚಕ್ರದಲ್ಲಿ ಸಂತಾನೋತ್ಪತ್ತಿ ಮಾಡುವ, ವರ್ಷಕ್ಕೊಂದು ಬೆದೆಚಕ್ರವುಳ್ಳ ಪ್ರಾಣಿ
monoestrous
ಏಕಮಾನ
(ಸಾ) ಅಳತೆಯ ಶಿಷ್ಟವಾಗಿ ಅಂಗೀಕರಿಸಿರುವ ಯಾವುದೇ ರಾಶಿ ಅಥವಾ ಆಯಾಮ. ಏಕಕ
unit
ಏಕಮುಖ ಕವಾಟ
(ತಂ) ನಳಿಗೆಯಲ್ಲಿ ತರಲ ಒಂದೇ ದಿಕ್ಕಿನಲ್ಲಿ ಹರಿಯುವಂತೆ ನಿಯಂತ್ರಿಸುವ ಯಾವುದೇ ಸಾಧನ. (ಪ್ರಾ) ಮೃದ್ವಂಗಿ, ಸಂಧಿಪದಿ ಮುಂತಾದ ಅಕಶೇರುಕಗಳಲ್ಲಿ ಬಾಹ್ಯ ಕವಚದ ಅಂಗ. ರಕ್ತ ಮುಂತಾದ ದ್ರವಗಳು ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವಂತೆ ನೋಡಿಕೊಳ್ಳುವ ಪೊರೆಯಂಥ ಅಂಗಭಾಗ