(ಸ) ಅಕ್ಕಿ, ಗೋದಿ ಮುಂತಾದ ಹುಲ್ಲಿನ ಜಾತಿಯ ಸಸ್ಯಗಳಿಂದ ದೊರೆಯುವ ಬೇಳೆಯಾಗದ ಕಾಳು
cereal
ಏಕದಿಶೀಯ
(ಭೌ) ಏಕಮುಖ ವಿದ್ಯುತ್ ಪ್ರವಾಹದಂತೆ ಒಂದೇ ದಿಶೆಯಲ್ಲಿ ಹರಿಯುವ. ಒಂದೇ ದಿಶೆಯಲ್ಲಿ ವಿಕಿರಣ ಪ್ರಸಾರ ಮಾಡುವ
unidirectional
ಏಕದಿಷ್ಟ
(ಗ) ಬೇರೊಂದು ಪರಿಮಾಣದ ಫಲನವಾಗಿ ಯಾವತ್ತೂ ಹೆಚ್ಚಾಗದ (ಅಥವಾ ಯಾವತ್ತೂ ಕಡಿಮೆಯಾಗದ) ಯಾವುದೇ ಪರಿಮಾಣ. ಏಕಮುಖೀಯ
monotone
ಏಕಧ್ರುವ
(ಭೌ) ಎಲ್ಲ ದಿಶೆಗಳಲ್ಲಿಯೂ ಸಂಜ್ಞೆಗಳನ್ನು ಸಮವಾಗಿ ಪರಿಗ್ರಹಿಸುವ ಇಲ್ಲವೇ ಪ್ರಸರಿಸುವ (ತಾತ್ತ್ವಿಕವಾದರೂ ಆಚರಣೆಗೆ ತರಲಾಗದ) ಒಂದು ಆಂಟೆನಾ
unipole
ಏಕನತ ವ್ಯವಸ್ಥೆ
(ಭೂವಿ) ಸ್ಫಟಿಕ ರಚನೆಯ ಒಂದು ಶೈಲಿ. ಇದರಲ್ಲಿ ಮೂರು ಅಸಮ ಅಕ್ಷಗಳಿದ್ದು ಆ ಪೈಕಿ ಒಂದು ಓರೆ ಛೇದಕವಾಗಿ ಇದ್ದು ಉಳಿದ ಎರಡು ಪರಸ್ಪರ ಲಂಬವಾಗಿ ಇರುತ್ತವೆ. ಇದನ್ನು ಓರೆ ಸ್ಫಟಿಕ ವ್ಯವಸ್ಥೆ ಎಂದೂ ಕರೆಯಲಾಗುತ್ತದೆ
monoclinic system
ಏಕನತೀಯ
(ಭೂವಿ) ೧. ಎರಡು ಸಮತಲ ಭಾಗಗಳನ್ನು ಜೋಡಿಸುವ ಒಂದೇ ಇಳುಕಲಿರುವ ಶಿಲಾಮಡಿಕೆ. ೨. ಖನಿಜಗಳು ಸ್ಫಟಿಕೀಕರಣಗೊಳ್ಳುವ ಆರು ವ್ಯವಸ್ಥೆಗಳಲ್ಲಿ ಒಂದು. ಇಂಥ ಸ್ಫಟಿಕ ಗಳಲ್ಲಿ ಒಂದು ಅಕ್ಷ ಬಾಗಿರುತ್ತದೆ. ಉದಾ : ಮಾನಜೈಟ್
monoclinal
ಏಕಪದಿ
(ಗ) ಬೀಜಗಣಿತದಲ್ಲಿ ಒಂಟಿ ಪದವುಳ್ಳ. ಉದಾ: a, b, c
monomial
ಏಕಪರಮಾಣವಿಕ
(ರ) ಅಣುವಿನಲ್ಲಿ ಒಂದೇ ಒಂದು ಪರಮಾಣುವುಳ್ಳ ರಾಸಾಯನಿಕ ವಸ್ತು. ಉದಾ : ಜಡಾನಿಲಗಳು
monatomic
ಏಕಪಾರ್ಶ್ವೀಯ ತಲ
(ಗ) ಒಂದೇ ಮೈ ಇರುವ ಜ್ಯಾಮಿತೀಯ ಆಕೃತಿ. ಉದಾ: ಮೋಬಿಯಸ್ ಪಟ್ಟಿ