(ಗ) ಒಂದೇ ಕೇಂದ್ರ ಅಥವಾ ಮಧ್ಯಬಿಂದು ಇರುವ (ವೃತ್ತ, ಇತ್ಯಾದಿ)
concentric
ಏಕಕೋಶ
(ಗ) ಸಮಾಂತರ ಚಲನೆಗಳ ಪ್ರಭಾವದಲ್ಲಿ ವ್ಯತ್ಯಯವಾಗದಂತೆ ಇರುವ ಸ್ಫಟಿಕ ಜಾಲಕದ ಸಮಸ್ತ ಪ್ರದೇಶವನ್ನೂ ತುಂಬುವಂತಹ ಸಮಾಂತರ ಷಟ್ಫಲಕ. (ಭೌ) ಸ್ಫಟಿಕ ಜಾಲಕದ ಒಳಗೆ ಮೂರು ಆಯಾಮಗಳಲ್ಲಿ ಪುನರಾವರ್ತಿತವಾಗುವ ಅಣು ಅಥವಾ ಅಯಾನ್ ಅಥವಾ ಪರಮಾಣುಗಳ ಗುಂಪು
unit cell
ಏಕಕೋಶೀಯ
(ಜೀ) ಒಂಟಿಕೋಶವಿರುವ ಅಥವಾ ಒಂದೇ ಜೀವಕಣವಿರುವ ಪ್ರಾಣಿ. ಉದಾ: ಅಮೀಬ
unicellular
ಏಕಕೋಶೋದ್ಭವ
(ಜೀ) ಪ್ರತಿಯೊಂದು ಸಸ್ಯ/ಪ್ರಾಣಿ ಒಂದೇ ಜೀವಕೋಶದಿಂದ ವಿಕಾಸಗೊಳ್ಳುತ್ತದೆಂಬ ಸಿದ್ಧಾಂತ. (ಪ್ರಾ) ಅಲೈಂಗಿಕ ಸಂತಾನಾಭಿವೃದ್ಧಿ; ರೂಪಾಂತರವಿಲ್ಲದೆ ವಿಕಾಸ
monogenesis
ಏಕಚಕ್ರೀಯ
(ಸ) ಒಂದೇ ಪುಷ್ಪ ವಲಯದಲ್ಲಿರುವ ಕೇಸರಗಳು ಅಥವಾ ಇತರ ಪುಷ್ಪ ಭಾಗಗಳು. (ರ) ಪರಮಾಣುಗಳ ಒಂದೇ ಉಂಗುರದಿಂದಾದ
monocyclic
ಏಕಚರೀಯ ಪರಿಕರ್ಮ
(ಗ) ಏಕಮಾತ್ರ ಫಲಿತಾಂಶ ಪಡೆಯಲು ಕೇವಲ ಒಂಟಿ ಪರಿಕರ್ಮ ಅವಶ್ಯ ವಾಗುವ ಪರಿಕರ್ಮ. ಉದಾ : ನಕಾರೀಕರಣ, ಪೂರಕೀಕರಣ, ವರ್ಗಮೂಲ, ಪರಿವರ್ತ
aunary operation
ಏಕತತ್ತ್ವವಾದ
(ಸಾ) ಒಂದೇ ರೀತಿಯ ವಸ್ತು ಅಥವಾ ಸತ್ತ್ವ ಅಸ್ತಿತ್ವದಲ್ಲಿದೆ, ಮನಸ್ಸೂ (ಮನೋದ್ರವ್ಯ) ವಸ್ತುವೂ (ಭೌತದ್ರವ್ಯ) ಎರಡೂ ಒಂದೇ ಎಂಬ ನಂಬಿಕೆ. ಅದ್ವೈತ
monism
ಏಕದಂತಿ
(ಜೀ) ಉದ್ದವಾದ ಹಲ್ಲುಳ್ಳ ಪ್ರಾಣಿ. ಈ ಹಲ್ಲು ಕೋರೆಹಲ್ಲಿನ ರೂಪ ತಳೆದಿರುತ್ತದೆ. ಉದಾ : ಆರ್ಕ್ಟಿಕ್ ಸಮುದ್ರದ ನಾರ್ವಲ್ ಎಂಬ ತಿಮಿಂಗಿಲ