(ಭೂವಿ) ಹಿಂದೆ ನೀರ್ಗಲ್ಲು ನದಿಗಳಿದ್ದ ಕಡೆ, ಸುತ್ತಮುತ್ತಲ ಮೇಲ್ಮೈ ಲಕ್ಷಣಗಳಿಗೆ ಭಿನ್ನವಾಗಿ ಎದ್ದುನಿಂತ, ಮರಳು ಮತ್ತು ನುರುಜುಗಲ್ಲುಗಳಿಂದ ಕೂಡಿದ ನಿಡಿದಾದ ಗುಡ್ಡಸಾಲು. ಉದಾ : ಐರ್ಲೆಂಡಿನಲ್ಲಿ ಕಂಡುಬರುವಂಥದು
esker
ಎಸ್ಕಲೇಟರ್
(ತಂ) ನೋಡಿ: ಚರ ಸೋಪಾನ
escalator
ಎಸ್ಕೇಪ್‌ಮೆಂಟ್
(ತಂ) ಗಡಿಯಾರದಲ್ಲಿ ಚಾಲಕ ನಿಯಂತ್ರಕ ಗಳನ್ನು ಸಂಬಂಧಿಸುವ ಸಲಕರಣೆ. ಚಲನೆಯನ್ನು ಒಂದೇ ದಿಕ್ಕಿನಲ್ಲಿ ನಿಧಾನ ವಾಗಿ ಹೋಗಗೊಡುವ ತಡೆಹಲ್ಲು ಸಾಧನ. ಸಂಯೋಜಕ. ಸಂಬಂಧಕ
escapement
ಎಸ್ಟರ್
(ರ) ಕಾರ್ಬಾಕ್ಸಿಲಿಕ್ ಆಮ್ಲ ದೊಂದಿಗೆ ಆಲ್ಕಹಾಲ್ ವರ್ತಿಸಿದಾಗ ಆಮ್ಲದ ಅಂಶ ಹೈಡ್ರೊ ಕಾರ್ಬನ್ ವೃಂದದೊಂದಿಗೆ ವಿನಿಮಯಗೊಂಡು ರೂಪುಗೊಳ್ಳುವ ಆರ್ಗ್ಯಾನಿಕ್ ಸಂಯುಕ್ತ ವಸ್ತು. ಅನೇಕ ಎಸ್ಟರ್‌ಗಳು ಪರಿಮಳಯುಕ್ತ ವಾಗಿರುವುದರಿಂದ ಅವನ್ನು ಹಣ್ಣಿನ ರಸಗಳಿಗೆ ರುಚಿ ಹಾಗೂ ಸುವಾಸನೆ ನೀಡಲು ಬಳಸಲಾಗುತ್ತದೆ
ester
ಎಸ್ಪಿರಾಂಟೋ
(ಸಾ) ಪೋಲೆಂಡಿನ ಭಾಷಾ ವಿಜ್ಞಾನಿ ಎಲ್. ಎಲ್. ಝಾಮೆನ್‌ಹಾಫ್ ಎಂಬಾತ ಎಸ್ಪಿರಾಂಟೊ (ಸಹಾಯ ಮಾಡುವಾತ ಎಂದರ್ಥ) ಎಂಬ ಕಾವ್ಯನಾಮದಿಂದ ೧೮೮೭ರಲ್ಲಿ ರೂಪಿಸಿದ ಭಾಷೆ. ಯೂರೋಪಿನ ಪ್ರಧಾನ ಭಾಷೆಗಳಲ್ಲಿನ ಪದಗಳನ್ನು ಆಧರಿಸಿಕೊಂಡು ಎಲ್ಲ ದೇಶಗಳ ಜನರ ಮಾಧ್ಯಮವಾಗಲೆಂದು ರಚಿಸಿದ ಕೃತಕ ಅಂತರರಾಷ್ಟ್ರೀಯ ಭಾಷೆ
esperanto
ಎಳೆಗರಿ
(ಪ್ರಾ) ಸಣ್ಣ ತುಪ್ಪಳು ಗರಿ
plumule
ಏಕಕ
(ಸಾ) ನೋಡಿ: ಏಕಮಾನ
unit
ಏಕಕ ಮಾತೃಕೆ
(ಗ) ಈ ಮುಂದಿನ ನಿರ್ಬಂಧಗಳನ್ನು ತೃಪ್ತಿಪಡಿಸುವ ಒಂದು ಚೌಕ ಮಾತೃಕೆ : ೧. ಪ್ರಧಾನ ಕರ್ಣದ ಪ್ರತಿಯೊಂದು ಧಾತುವೂ, ಅಂದರೆ, ಮೇಲು-ಎಡದಿಂದ ತಳ-ಬಲದವರೆಗೆ ಪ್ರಧಾನ ಕರ್ಣದ ಮೇಲಿನ ಎಲ್ಲ ಧಾತುಗಳೂ
unit matrix
ಏಕಕವಾಟಿ
(ಪ್ರಾ) ಬಸವನಹುಳು, ಶಂಖಹುಳು ಮೊದಲಾದವುಗಳಲ್ಲಿರುವಂತೆ ಒಂದೇ (ಇಡೀ) ಚಿಪ್ಪು (ಒಂದೇ ಒಂದು ಕವಾಟ) ಇರುವ (ಮೃದ್ವಂಗಿ)
univalve
ಏಕಕಾಲಿಕ ಸಮೀಕರಣಗಳು
(ಗ) ಏಕಕಾಲದಲ್ಲಿ ಸಿಂಧುವಾಗುವ ಎರಡು ಅಥವಾ ಹೆಚ್ಚು ಸಮೀಕರಣ ಗಳು. ಉದಾ: 2x+y=3, 3x+4y=2 ಸಮೀಕರಣಗಳು x=2, y=-1 ಬೆಲೆಗಳಿಗೆ ಸಿಂಧು. ಇವು ಈ ಸಮೀಕರಣಗಳ ಪರಿಹಾರಗಳು