(ಭೌ) ವಿದ್ಯುತ್ಸರಣ. ವಿದ್ಯುಚ್ಚಾಲಕ ಬಲದ ಪರಿಣಾಮವಾಗಿ ಕಲಿಲ ದ್ರಾವಣದಲ್ಲಿ ಇರುವ ಕಣಗಳು ಎರಡರಲ್ಲೊಂದು ವಿದ್ಯುದ್ವಾರದ ದಿಕ್ಕಿನಲ್ಲಿ ಚಲಿಸುವುದು. ಧನಾವಿಷ್ಟ ಕಣಗಳು ಕ್ಯಾಥೋಡ್‌ಗೂ, ಋಣಾವಿಷ್ಟ ಕಣಗಳು ಆನೋಡ್‌ಗೂ ಹರಿಯುವುವು. ಇವನ್ನು ಕ್ರಮವಾಗಿ ಕೆಟಫಾರೆಸಿಸ್ ಮತ್ತು ಅನಫಾರೆಸಿಸ್ ಎಂದು ಕರೆಯುವುದುಂಟು. ಎಲೆಕ್ಟ್ರೋ ಫೊರೆಸಿಸ್ ಕ್ರಿಯೆಯನ್ನು ಪ್ರೋಟೀನ್, ನ್ಯೂಕ್ಲಿಯಿಕ್ ಆಮ್ಲ, ಎನ್‌ಜೈಮ್ ಇತ್ಯಾದಿಗಳ ಮಿಶ್ರಣಗಳ ಅಧ್ಯಯನದಲ್ಲಿ ವಿಸ್ತೃತವಾಗಿ ಬಳಸಲಾಗುತ್ತದೆ. ವೈದ್ಯಕೀಯದಲ್ಲಿ ಇದನ್ನು ಶರೀರದ ತರಲಗಳಲ್ಲಿ ಇರುವ ಪ್ರೋಟೀನ್ ಅಂಶವನ್ನು ನಿರ್ಧರಿಸಲು ಬಳಸಲಾಗುತ್ತದೆ
electrophoresis
ಎಲ್ಲೆ
(ಸಾ) ಗಡಿ. ಸರಹದ್ದು. ಸೀಮಾರೇಖೆ
border
ಎಲ್ಬೊ
(ತಂ) ಎರಡು ಕೊಳವೆಗಳನ್ನು ಜೋಡಿಸಲು ಬಳಸುವ ಲಂಬಕೋನಾಕೃತಿಯ ಕೊಳವೆ (ವೈ) ಮೊಣಕೈ
elbow
ಎಲ್ಯುಟ್ರೀಕರಣ
(ರ) ದ್ರವದ ಮೂಲಕ ಕಣಗಳು ಭಿನ್ನ ದರಗಳಲ್ಲಿ ಬೀಳುತ್ತಿರುವುದನ್ನು ಆಧರಿಸಿ ಗಾತ್ರರೀತ್ಯ, ಹಗುರ ಹಾಗೂ ಭಾರ ಕಣಗಳನ್ನು ಬೇರ್ಪಡಿಸುವ ಪ್ರಕ್ರಿಯೆ. ಧಾವ ಪೃಥಕ್ಕರಣ
elutriation
ಎವೆ
(ಪ್ರಾ) ಕಣ್ಣಿಗೆ ರಕ್ಷಣೆಯಾಗಿ ಕಣ್ಣು ರೆಪ್ಪೆಗಳ ಅಂಚಿನಲ್ಲಿರುವ ಕೂದಲ ಸಾಲು
eyelash
ಎವೆಯೂತ
(ವೈ) ಎವೆಯಂಚು ಗಡಸಾಗುವ ಕಣ್ಣೆವೆಯ ಉರಿಯೂತ. ಉಜ್ಜುವುದು ಇತ್ಯಾದಿ ಕ್ರಿಯೆಗಳ ಪರಿಣಾಮವಾಗಿ ಚರ್ಮದ ಮೇಲೆ ಉಂಟಾಗುವ ದಪ್ಪ, ಗಡಸು ಊತ
tylosis
ಎವೊಸೆಟ್
(ಪ್ರಾ) ಕಾರಡ್ರೈಯಿಫಾರ್ಮೀಸ್ ಗಣ ರೀಕರ್ವಿರಾಸ್ಟ್ರಿಡೀ ಕುಟುಂಬಕ್ಕೆ ಸೇರಿದ, ರೀಕರ್ವಿರಾಸ್ಟ್ರ ಜಾತಿಯ ಉದ್ದಕಾಲಿನ ನೀರು ಹಕ್ಕಿ. ಕೊಕ್ಕು ಮೇಲ್ಮೊಗವಾಗಿ ಡೊಂಕಿರುವುದು ಇದರ ವಿಶಿಷ್ಟ ಲಕ್ಷಣ. ನೀರಿನಲ್ಲಿ ನಡೆಯಲು ಅನುವಾಗುವ ಜಾಲಪಾದವಿದೆ
avocet
ಎಷೆರಿಯ ಕೋಲಿ
(ವೈ) ಇದು ಒಂದು ಬ್ಯಾಕ್ಟೀರಿಯ. ಇದನ್ನು ಸಂಕ್ಷಿಪ್ತವಾಗಿ ಇ. ಕೋಲಿ ಎಂದು ಕರೆಯುವುದುಂಟು. ಇದು ಮಾನವನ ಕರುಳಿನಲ್ಲಿ ಕೂಡುಜೀವಿಯಾಗಿ ವಾಸಿಸುತ್ತದೆ. ಅಕಸ್ಮಾತ್ ಮಾನವನ ಮೂತ್ರನಾಳವನ್ನು ಪ್ರವೇಶಿಸಿದರೆ, ಅಲ್ಲಿ
escheria coli
ಎಸಳು
(ಸ) ಅಗಲವಾಗಿ ವಿಸ್ತರಿಸಿಕೊಂಡಿರುವ ಎಲೆಯ ಅಥವಾ ದಳದ ತೆಳ್ಳನೆಯ ಭಾಗ. ಅಲಗು