logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎಲೆಕ್ಟ್ರಾನ್ ವೋಲ್ಟ್
(ಭೌ) ಚರಕಣಗಳಲ್ಲಿ ನಿಹಿತವಾಗಿರುವ ಶಕ್ತಿಯ ಸಾರ್ವತ್ರಿಕ ಏಕಮಾನ. ಪ್ರತೀಕ eV. ೧.೬೦೨ ೧೦-೧೯ ಜೂಲ್‌ಗಳಿಗೆ ಸಮ. ನಿರ್ದ್ರವ್ಯತೆಯಲ್ಲಿ ೧ ವೋಲ್ಟ್ ವಿಭವ ವ್ಯತ್ಯಾಸದ ಮೂಲಕ ಹಾದುಹೋಗುವಾಗ ಪಡೆದು ಕೊಳ್ಳುವ ಶಕ್ತಿಯ ಏಕಮಾನ. ಫೋಟಾನ್‌ನ ಶಕ್ತಿಯ ಏಕಮಾನ. ರೇಡಿಯಾಲಜಿಯಲ್ಲಿ ಬಳಕೆ. ಸಾವಿರ ಅಥವಾ ಮಿಲಿಯನ್ ಎಲೆಕ್ಟ್ರಾನ್ ವೋಲ್ಟ್‌ಗಳಲ್ಲಿ ವ್ಯಕ್ತಪಡಿಸಲಾಗುತ್ತದೆ
electron volt

ಎಲೆಕ್ಟ್ರಾನ್ ಸೂಕ್ಷ್ಮದರ್ಶಕ
(ಭೌ) ದ್ಯುತಿ ಸೂಕ್ಷ್ಮದರ್ಶಕದಲ್ಲಿ ಬೆಳಕಿನ ಕಿರಣದಂಡ ಹೇಗೋ ಹಾಗೆ ಈ ಸೂಕ್ಷ್ಮದರ್ಶಕದಲ್ಲಿ ಎಲೆಕ್ಟ್ರಾನ್ ಕಿರಣದಂಡವನ್ನು ಬಳಸಲಾಗುತ್ತದೆ. ಎಲೆಕ್ಟ್ರಾನ್ ದಂಡವನ್ನು ಎಲೆಕ್ಟ್ರಾನ್ ಮಸೂರದ ಮೂಲಕ ಪ್ರತಿದೀಪ್ತ ತೆರೆಯ ಮೇಲೆ ನಾಭೀಕರಿಸಿದಾಗ ಸೂಕ್ಷ್ಮ ವಸ್ತುವಿನ ಬೃಹತ್ ಬಿಂಬ ಅದರ ಮೇಲೆ ಪಡಿಮೂಡುತ್ತದೆ. ಎಲೆಕ್ಟ್ರಾನ್ ತರಂಗಗಳ ಅಲೆಯುದ್ದ ಬೆಳಕಿನ ಅಲೆಯುದ್ದಕ್ಕಿಂತ ಸಾಕಷ್ಟು ಕಿರಿದಾಗಿರುವುದರಿಂದ ಈ ಉಪಕರಣವು ದ್ಯುತಿ ಸೂಕ್ಷ್ಮದರ್ಶಕಕ್ಕೆ ಹೋಲಿಸಿದಂತೆ ಅತ್ಯಂತ ಹೆಚ್ಚಿನ ಪೃಥಕ್ಕರಣ ಸಾಮರ್ಥ್ಯ ಪಡೆದಿರುತ್ತದೆ
electron microscope

ಎಲೆಕ್ಟ್ರಾನಿಕ್ ಸಂಕೇತಗಳು
(ತಂ) ೧. ಪರ್ಯಾಯ ವಿದ್ಯುತ್. ೨. ಅರ್ತ್. ೩. ಕೋಶ. ೪. ಸ್ವಿಚ್. ೫. ಕೂಡಿಸಿದ ತಂತಿಗಳು. ೬. ಕೂಡಿಸದ ತಂತಿಗಳು. ೭. ಫ್ಯೂಸ್. ೮. ರೆಸಿಸ್ಟರ್ (ರೋಧಕ). ೯. ಚರರೋಧಕ. ೧೦. ಸುರುಳಿ ತಂತಿ. ೧೧. ಆಮ್ಮೀಟರ್. ೧೨. ವೋಲ್ಟ್ ಮೀಟರ್. ೧೩. ಅಂಪ್ಲಿಫೈಯರ್ (ಪ್ರವರ್ಧಕ). ೧೪. ಕೆಪಾಸಿಟರ್. ೧೫. ಆನೋಡ್. ೧೬. ಡಯೋಡ್. ೧೭. ಟ್ರಾನ್ಸಿಸ್ಟರ್. ೧೮. ಟ್ರಾನ್ಸ್‌ಫಾರ್ಮರ್
electronic symbols

ಎಲೆಕ್ಟ್ರಾನಿಕ್ಸ್
(ಭೌ) ನಿರ್ದ್ರವ್ಯತೆ, ಅನಿಲ ಅಥವಾ ಅರೆವಿದ್ಯುತ್ ವಾಹಕಗಳ ಮೂಲಕ ಎಲೆಕ್ಟ್ರಾನ್‌ಗಳ ಪ್ರವಹನ ತತ್ತ್ವಗಳನ್ನು ಆಧರಿಸಿ ರೂಪುಗೊಂಡಿರುವ ವಿಜ್ಞಾನ ವಿಭಾಗ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನ ಒಂದು ವಿಶಿಷ್ಟ ವಿಭಾಗ. ನಿರ್ದ್ರವ್ಯ ನಳಿಕೆ, ಅನಿಲಪೂರಿತ ನಳಿಕೆ, ಟ್ರಾನ್ಸಿಸ್ಟರ್ ಮೊದಲಾದವು ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಸೇರುತ್ತವೆ. ವಿದ್ಯುತ್ ಮೋಟಾರ್. ಪ್ರಜ್ವಲಿತ ದೀಪ ಮೊದಲಾದವು ಸೇರುವುದಿಲ್ಲ. ಆಧುನಿಕ ತಂತ್ರವಿದ್ಯೆಯ ಆಧಾರ ಸ್ತಂಭ, ಕಂಪ್ಯೂಟರ್‌ನ ಹೂರಣ, ಆಕಾಶಯಾನದ ಬೆನ್ನೆಲುಬು. ಇಲೆಕ್ಟ್ರಾನಿಕ್ಸ್
electronics

ಎಲೆಕ್ಟ್ರೊಎನ್ಸೆಫೆಲೊಗ್ರಾಮ್
(ವೈ) ವಿದ್ಯುನ್ಮಸ್ತಿಷ್ಕಲೇಖ. ನೋಡಿ : ಇಇಜಿ
electroencephalogram

ಎಲೆಕ್ಟ್ರೊಕಾರ್ಡಿಯೊಗ್ರಾಮ್
(ವೈ) ವಿದ್ಯುತ್ ಹೃಲ್ಲೇಖ. ನೋಡಿ : ಇಸಿಜಿ
electrocardiogram

ಎಲೆಕ್ಟ್ರೊವೇಲೆನ್ಸ್
(ರ) ಈ ರಾಸಾಯನಿಕ ಬಂಧ ದಲ್ಲಿ ಒಂದು ಪರಮಾಣುವಿನಿಂದ ಇನ್ನೊಂದಕ್ಕೆ ಒಂಟಿ ಎಲೆಕ್ಟ್ರಾನ್ ವರ್ಗಾಯಿಸಲ್ಪಡುತ್ತದೆ. ಫಲಿತ ಅಯಾನ್‌ಗಳು ಸ್ಥಾಯೀ ವಿದ್ಯುತ್ ಆಕರ್ಷಣೆಯಿಂದ ಒಗ್ಗೂಡಿರುತ್ತವೆ. ವಿದ್ಯುತ್ ಸಂಯೋಗ ಸಾಮರ್ಥ್ಯ
electrovalence

ಎಲೆಕ್ಟ್ರೊಸೋಲ್
(ಭೌ) ನೀರಿನೊಳಗಿರುವ ಲೋಹ ತುಣುಕುಗಳ ನಡುವೆ ವಿದ್ಯುತ್ ಕಿಡಿಗಳನ್ನು ಹಾಯಿಸಿದಾಗ ದೊರೆಯುವ ಕಲಿಲ ದ್ರಾವಣ
electrosol

ಎಲೆಕ್ಟ್ರೋಡ್
(ಭೌ) ೧. ಅರೆವಾಹಕದಲ್ಲಿ ಎಲೆಕ್ಟ್ರಾನ್‌ಗಳ ಅಥವಾ ರಂಧ್ರಗಳ ಉತ್ಸರ್ಜಕ ಇಲ್ಲವೇ ಸಂಗ್ರಾಹಕ. ೨. ವಿದ್ಯುತ್ತನ್ನು ದ್ರವದೊಳಗೆ ಒಯ್ಯುವ ಅಥವಾ ಅದರಿಂದ ಹೊರ ಸಾಗಹಾಕುವ (ಎಲೆಕ್ಟ್ರೊಲೈಟ್ ಕೋಶದಲ್ಲಿಯಂತೆ) ವಾಹಕ. ೩. ಕೋಶ, ಉಷ್ಣಾಯಾನು ಕವಾಟ, ಅರೆವಾಹಕ ಸಾಧನ ಇತ್ಯಾದಿಗಳಲ್ಲಿ ಎಲೆಕ್ಟ್ರಾನ್‌ಗಳನ್ನು ಉತ್ಸರ್ಜಿಸುವ ಅಥವಾ ಸಂಗ್ರಹಿಸುವ ವಾಹಕ. ಆನೋಡ್ ಧನಾತ್ಮಕ ಎಲೆಕ್ಟ್ರೋಡ್ ಹಾಗೂ ಕ್ಯಾಥೋಡ್ ಋಣಾತ್ಮಕ ಎಲೆಕ್ಟ್ರೋಡ್
electrode

ಎಲೆಕ್ಟ್ರೋಡ್ ವಿಭವ
(ಭೌ) ಎಲೆಕ್ಟ್ರೋಡ್ ತನ್ನ ಅಯಾನುಗಳಿರುವ ದ್ರಾವಣದ ಸಂಪರ್ಕದಲ್ಲಿ ಸಮತೋಲ ತಲುಪಿದಾಗ ಉಂಟಾಗುವ ವಿದ್ಯುದ್ವಿಭವ. ಇದರ ನಿರಪೇಕ್ಷ ಮೌಲ್ಯವನ್ನು ಅಳೆಯುವುದು ಅಸಾಧ್ಯ. ಈ ನಿರ್ಧಾರಕ್ಕೆ ಬೇರೊಂದು ಪ್ರಮಾಣಕ ಎಲೆಕ್ಟ್ರೋಡ್ ಅಗತ್ಯ. ನೋಡಿ: ಹೈಡ್ರೊಜನ್ ಎಲೆಕ್ಟ್ರೋಡ್
electrode potential


logo