(ಸ) ಬ್ರಾಸಿಕೇಸೀ ಕುಟುಂಬದ, ಬ್ರಾಸಿಕ ಓಲರೇಸಿಯ ಕ್ಯಾಪಿಟೇಟ ಎಂಬ ವೈಜ್ಞಾನಿಕ ಹೆಸರಿನ ಎಲೆ ತರಕಾರಿ ಸಸ್ಯ. ಆಹಾರ ಸಂಗ್ರಹಿಸಿದ ಬಿಳಿ ಎಲೆಗಳು ಒಂದರ ಮೇಲೊಂದು ಕವುಚಿ ಗೆಡ್ಡೆರೂಪ ತಾಳಿರುತ್ತವೆ. ಯೂರೋಪ್ ಏಷ್ಯಗಳಲ್ಲಿ ಬಲು ಹಿಂದಿನಿಂದ ವ್ಯವಸಾಯದಲ್ಲಿದೆ. ಹಸಿ ಕೋಸಿನಲ್ಲಿ ಎ, ಬಿ ಮತ್ತು ಬಿ೨ ವೈಟಮಿನ್‌ಗಳೂ ಅತ್ಯಧಿಕ ಪ್ರಮಾಣದಲ್ಲಿ ‘ಸಿ’ ವೈಟಮಿನ್ನೂ ಇವೆ. ಕ್ಯಾಬೇಜ್
cabbage
ಎಲೆಕ್ಟ್ರಮ್
(ರ) ೧. ಚಿನ್ನ ಬೆಳ್ಳಿಗಳ ಮಿಶ್ರಲೋಹ. (ಶೇ. ೫೫-೮೮ರಷ್ಟು ಚಿನ್ನ). ನಿಸರ್ಗದಲ್ಲಿ ಸಹಜವಾಗಿ ಲಭಿಸುತ್ತದೆ. ೨. ನಿಕಲ್ ಬೆಳ್ಳಿ (ತಾಮ್ರ ಶೇ. ೫೨; ನಿಕಲ್ ಶೇ. ೨೬; ಸತುವು ಶೇ. ೨೨) ಜರ್ಮನ್ ಸಿಲ್ವರ್ ಎಂಬ ಹೆಸರುಂಟು
electrum
ಎಲೆಕ್ಟ್ರಾನ್
(ಭೌ) ಋಣ ವಿದ್ಯುದಾವಿಷ್ಟ ಮೂಲಕಣ. ಆವೇಶ = ೧.೬೦೨೬೬೬೧೦-೧೯ ಕೂಲಂಬ್‌ಗಳು. ರಾಶಿ = ೯.೧೦೯ ೧೦-೩೧ ಕಿಗ್ರಾಂ. ಪರಮಾಣುವಿನ ಮೂಲ ಘಟಕಗಳಲ್ಲೊಂದು. ಪರಮಾಣು ಬೀಜದ ಸುತ್ತ ನಿರ್ದಿಷ್ಟ ಸಂಖ್ಯೆಯಲ್ಲಿದ್ದು ಎಲೆಕ್ಟ್ರಾನ್‌ಗಳು ವಿವಿಧ ಚಿಪ್ಪುಗಳನ್ನು ನೇಯುತ್ತಿರುವಂತೆ ನಿರಂತರವಾಗಿ ಸುತ್ತುತ್ತಿರುತ್ತವೆ. ಈ ಎಲೆಕ್ಟ್ರಾನ್ ವಿನ್ಯಾಸವೇ ಪರಮಾಣುವಿನ ರಾಸಾಯನಿಕ ಗುಣಗಳಿಗೆ ಕಾರಣ. ಘನವಸ್ತುಗಳಲ್ಲಿ ವಿದ್ಯುತ್ ವಾಹಕವಾಗಿ ವರ್ತಿಸುವ ಸ್ಥಿರ ಕಣ. ಇದರ ಪ್ರತಿಕಣ ಪಾಸಿಟ್ರಾನ್. ಎಲೆಕ್ಟ್ರಾನ್‌ನ ಪರ್ಯಾಯ ನಾಮ ನೆಗೆಟ್ರಾನ್. ಇಲೆಕ್ಟ್ರಾನ್. ನೋಡಿ: ಪಾಸಿಟ್ರಾನ್; ಕೂಲಂಬ್
electron
ಎಲೆಕ್ಟ್ರಾನ್ ಒಲವು
(ಭೌ) ಕೆಲವು ವಸ್ತುಗಳಲ್ಲಿ ವಿಶೇಷತಃ ಉತ್ಕರ್ಷಣಕಾರಕ ಪದಾರ್ಥಗಳಲ್ಲಿ (ಆಕ್ಸಿಡೈಸಿಂಗ್ ಏಜೆಂಟ್ಸ್) ಕಂಡುಬರುವ ಎಲೆಕ್ಟ್ರಾನ್-ಪರಿಗ್ರಹಣ ಪ್ರವೃತ್ತಿ. (ರ) ಋಣಾವಿಷ್ಟ ಅಯಾನ್‌ನಿಂದ ಎಲೆಕ್ಟ್ರಾನನ್ನು ತೆಗೆದು ತಟಸ್ಥ ಪರಮಾಣುವನ್ನು ರೂಪಿಸಲು ಬೇಕಾಗುವ ಶಕ್ತಿ
electron affinity
ಎಲೆಕ್ಟ್ರಾನ್ ಟ್ಯೂಬ್
(ತಂ) ಎಲೆಕ್ಟ್ರಾನ್ ನಳಿಕೆ. ನೋಡಿ : ಟ್ರಯೋಡ್ ಕವಾಟ
electron tube
ಎಲೆಕ್ಟ್ರಾನ್ ದೂಲ ಕಲ್ಲಚ್ಚು
(ತಂ) ಸ್ಕ್ಯಾನಿಂಗ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಎಲೆಕ್ಟ್ರಾನ್ ದೂಲವನ್ನು ಉಪಯೋಗಿಸಿ ಎಲೆಕ್ಟ್ರಾನ್ ಸಂವೇದಿ ಸಾಮಗ್ರಿಗಳ ಮೇಲೆ ನಮೂನೆಗಳನ್ನು ಸೃಷ್ಟಿಸುವ ತಂತ್ರ
electron bean lithography
ಎಲೆಕ್ಟ್ರಾನ್ ಪರಿಗ್ರಹಣ
(ಭೌ) ೧. ಇದೊಂದು ವಿಕಿರಣಪಟು ಪರಿವರ್ತನೆಯ ಪರಿಣಾಮ. ಪರಮಾಣು ಬೀಜವು ಒಳಕಕ್ಷೆಯಲ್ಲಿ ಇರುವ ಒಂದು ಎಲೆಕ್ಟ್ರಾನನ್ನು ಕಬಳಿಸುವ ವಿದ್ಯಮಾನ. ಪರಿಣಾಮವಾಗಿ ಆ ಪರಮಾಣುವಿನ ರಾಶಿ ಬದಲಾಗದು. ಆದರೆ ಪರಮಾಣು ಸಂಖ್ಯೆ ಹಿಂದಿದ್ದುದಕ್ಕಿಂತ ೧ ಕಡಿಮೆಯಾಗುತ್ತದೆ. (ಎಲೆಕ್ಟ್ರಾನ್ ಪರಿಗ್ರಹಣವು ಬೀಜದಲ್ಲಿಯ ಪ್ರೋಟಾನನ್ನು ನ್ಯೂಟ್ರಾನ್ ಆಗಿ ಪರಿವರ್ತಿಸುತ್ತದೆ). ಈ ಬಗೆಯ ಪರಿಗ್ರಹಣ ದೊಂದಿಗೆ ಎಕ್ಸ್-ಕಿರಣ ಫೋಟಾನ್‌ನ ಉತ್ಸರ್ಜನೆಯೂ ಸಂಭವಿಸುತ್ತದೆ. ಏಕೆಂದರೆ ಆಂತರಿಕ ಕಕ್ಷೆಯಲ್ಲಿಯ ತೆರಪಿಗೆ ಬಾಹ್ಯ ಎಲೆಕ್ಟ್ರಾನೊಂದು ಜಿಗಿದು ಬಂದು ಸೇರಿಕೊಳ್ಳುತ್ತದೆ. ೨. ಯಾವುದೇ ದ್ರವ್ಯ ಮಾಧ್ಯಮದ ಮೂಲಕ ಪರಮಾಣುವಾಗಲೀ ಅಯಾನ್ ಆಗಲೀ ಹಾಯುವಾಗ ಅದು ಒಂದು ಅಥವಾ ಹೆಚ್ಚು ಕಕ್ಷಾ ಎಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುವ ಅಥವಾ ಗಳಿಸುವ ಪ್ರಕ್ರಿಯೆ. ೩. ಬಂಧಿತ ಎಲೆಕ್ಟ್ರಾನೊಂದು ಬೀಜದಲ್ಲಿ ಐಕ್ಯವಾಗುವುದರಿಂದ ಆ ಬೀಜ ದಲ್ಲಾಗುವ ವಿಕಿರಣಪಟು ಪರಿವರ್ತನೆ.
electron capture
ಎಲೆಕ್ಟ್ರಾನ್ ಭ್ರಮಣ ಅನುರಣನ
(ಭೌ) ಸೂಕ್ಷ್ಮತರಂಗ ರೋಹಿತದರ್ಶಕ ವಿಜ್ಞಾನದ ಒಂದು ಶಾಖೆ. ಸ್ಫಟಿಕಗಳಲ್ಲಿ ಅಶುದ್ಧತೆಯ ಕೇಂದ್ರಗಳ ಬಗ್ಗೆ, ರಾಸಾಯನಿಕ ಬಂಧದ ಸ್ವರೂಪ ಮತ್ತು ವಿಕಿರಣ ಹಾನಿಯ ಪರಿಣಾಮಗಳ ಬಗ್ಗೆ ಮಾಹಿತಿ ಪಡೆಯಲು ಉಪಯೋಗ
electron spin resonance
ಎಲೆಕ್ಟ್ರಾನ್ ವಿವರ್ತನೆ
(ಭೌ) ಪರಮಾಣು ಗಳಿಂದ ಇಲ್ಲವೇ ಅಣುಗಳಿಂದ ಎಲೆಕ್ಟ್ರಾನ್ ದೂಲ ಹರಡಲ್ಪಡುವುದು ಇಲ್ಲವೇ ಬಗ್ಗಿಸಲ್ಪಡುವುದು. ಬೆಳಕು ಮತ್ತು ಎಕ್ಸ್-ಕಿರಣಗಳಂತೆಯೇ ಎಲೆಕ್ಟ್ರಾನ್‌ಗಳನ್ನೂ ವಿವರ್ತನೆಗೊಳಿಸಬಹುದು ಎಂಬ ಸಂಗತಿ ಈ ಕಣಗಳು ತರಂಗಗಳೋಪಾದಿಯಲ್ಲಿ ಕೂಡ ವರ್ತಿಸಬಲ್ಲವು ಎಂಬುದನ್ನು ತೋರಿಸುತ್ತದೆ
electron diffraction
ಎಲೆಕ್ಟ್ರಾನ್ ವಿಸರ್ಜನ ನಳಿಕೆ
(ಭೌ) ಬಲುಮಟ್ಟಿಗೆ ನಿರ್ದ್ರವ್ಯಗೊಳಿಸಿದ ನಳಿಕೆ. ಇದರೊಳಗೆ ಎರಡು ಅಥವಾ ಹೆಚ್ಚು ಎಲೆಕ್ಟ್ರೋಡ್‌ಗಳಿದ್ದು ಅವುಗಳ ನಡುವೆ ಎಲೆಕ್ಟ್ರಾನ್‌ಗಳು ಹಾಯುತ್ತವೆ