logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎರಕ ಹೊಯ್ಯುವುದು
(ತಂ) ದ್ರವ ಲೋಹಗಳನ್ನು ಮರಳಿನ ಅಥವಾ ಲೋಹದ ಅಚ್ಚಿಗೆ ಹೊಯ್ದು ಆ ಆಕಾರದಲ್ಲಿ ಘನೀಭವಿಸಲು ಬಿಡುವ ಪ್ರಕ್ರಿಯೆ
casting

ಎರಿತ್ರೈಟ್
(ಭೂವಿ) ಜಲಾಂಶವುಳ್ಳ ಕೋಬಾಲ್ಟ್ ಆರ್ಸನೇಟ್. ಮಂದ ಕೆಂಪು ಹರಳುಗಳ ಅಥವಾ ಗಡಸು ಹೊರ ಮೈಯುಳ್ಳ ಖನಿಜಗಳ ರೂಪದಲ್ಲಿ ಕಂಡುಬರುತ್ತದೆ. ಇದಕ್ಕೆ ಕೋಬಾಲ್ಟ್ ಬ್ಲೂಮ್ ಎಂಬ ಹೆಸರೂ ಇದೆ. CO3(AsO4)2. 8H2O
erythrite

ಎರಿತ್ರೊಮೆಲಾಲ್ಜಿಯ
(ವೈ) ಅವಯವಗಳು ಅದರಲ್ಲೂ ಮುಖ್ಯವಾಗಿ ಪಾದಗಳು ಕೆಂಪಾಗಿ, ಬಿಸಿಯಾಗಿ, ಉರಿಯುತ್ತಾ, ತೀವ್ರವಾಗಿ ನೋಯುವ ಸ್ಥಿತಿ. ಇದು ಬೆಳೆಯು ತ್ತಿರುವ ಬೇರೆ ಯಾವುದಾದರೂ ರೋಗದ ಲಕ್ಷಣವಾಗಿರ ಬಹುದು ಇಲ್ಲವೇ ಕೆಲವು ಔಷಧಗಳ ಪಾರ್ಶ್ವ-ಪರಿಣಾಮ ಆಗಿರಬಹುದು. ಇದನ್ನು ಮಿಶೆಲ್ ರೋಗ ಎನ್ನಲಾಗುತ್ತದೆ
erythromelalgia

ಎರಿಲ್
(ಸ) ಬೀಜದ ಮೇಲಿನ ಹೊರಬೆಳೆತ
aril

ಎರೆ
(ಸಾ) ಪ್ರಾಣಿಯನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಒಡ್ಡುವ ಆಮಿಷ
bait

ಎರೆಚೀಲ
(ಪ್ರಾ) ಹಕ್ಕಿಗಳು ತಾವು ತಿಂದುದನ್ನು ಜಠರಕ್ಕೆ ಸಾಗಿಸುವ ಮೊದಲು ಜೀರ್ಣಕಾರ್ಯಕ್ಕೆ ಅನುಕೂಲವಾಗುವಂತೆ ಅದನ್ನು ಮಾರ್ಪಡಿಸಲು ಇಟ್ಟುಕೊಳ್ಳುವ ಗಂಟಲ ಕೊಳವೆಯಲ್ಲಿಯ ಸಂಚಿಯಂಥ ಅಂಗ (ಕ್ರಾಪ್)
ingluvies

ಎರೆಹುಳು
(ಪ್ರಾ) ಅನೆಲಿಡ ವಿಭಾಗ, ಅಲಿಗೊ ಕೀಟ ವರ್ಗ, ಲುಂಬ್ರಿಸಿಡೀ ಕುಟುಂಬಕ್ಕೆ ಸೇರಿದ ಲುಂಬ್ರಿಕಸ್ ಜಾತಿಯ ನೆಲಹುಳು. ನೆಲದೊಳಕ್ಕೆ ಕೊರೆದು, ಮಣ್ಣಿನಲ್ಲಿ ಇರುವ ಸಾವಯವ ಪದಾರ್ಥವನ್ನು ತಿಂದು, ಅದನ್ನು ಫಲವಂತ ಗೊಬ್ಬರವನ್ನಾಗಿ ಮಾಡುತ್ತದೆ. ಜೊತೆಗೆ, ಮಣ್ಣಿನೊಳಕ್ಕೆ ಗಾಳಿ ಸಂಚಾರವನ್ನು ಸುಗಮ ಗೊಳಿಸುತ್ತದೆ. ಎಂದೇ ಇದಕ್ಕೆ ರೈತ ಮಿತ್ರ ಎಂಬ ಹೆಸರು ಬಂದಿದೆ
earthworm

ಎರ್ಗಟ್
(ಸ) ರೈ ಮೊದಲಾದ ಧಾನ್ಯಗಳಿಗೆ ತಗಲುವ ಒಂದು ಶಿಲೀಂಧ್ರ ರೋಗ. ಔಷಧಕ್ಕಾಗಿ ಬಳಸುವ, ಎರ್ಗಟ್ ರೋಗ ಹತ್ತಿದ ರೈ ಕಾಳು
ergot

ಎರ್ಗೊಸ್ಟಿರಾಲ್
(ರ) C28H43OH. ಸ್ಫಟಿಕ ರೂಪದ, ನೀರಿನಲ್ಲಿ ವಿಲೀನವಾಗದ ಅಪರ್ಯಾಪ್ತ ಸ್ಟಿರಾಲ್. ರೋಗ ತಗಲಿದ ರೈ ಬೀಜ (ಆರ್ಗಾಟ್), ಹುದುಗು, ಬೂಷ್ಟುಗಳಲ್ಲಿ ಕಂಡುಬರುತ್ತದೆ. ಎಲೆಕ್ಟ್ರಾನ್‌ಗಳಿಂದ ಕ್ರಿಯಾಶೀಲವಾಗಿಸಿ ಅಥವಾ ಅತಿನೇರಿಳೆ ಕಿರಣಗಳಿಂದ ಬೆಳಗಿಸಿ ಇದನ್ನು D2 ವೈಟಮಿನ್‌ಆಗಿ ಪರಿವರ್ತಿಸಬಹುದು
ergosterol

ಎರ್ಬಿಯಮ್
(ರ) ಇಟ್ರಿಯಮ್ ಉಪಗುಂಪಿನ ವಿರಳ ಧಾತುಗಳ ಪೈಕಿ ಒಂದು. ವೇಲೆನ್ಸಿ ೩. ಲೋಹರೂಪಿ. ಪ್ರತೀಕ er. ಪಸಂ ೬೮. ಪತೂ ೧೬೭.೨೬. ದ್ರಬಿಂ. ೧೪೯೭0 ಸೆ.
erbium


logo