(ಪ್ರಾ) ಆರ್ತ್ರಾಪೊಡ ವಿಭಾಗ, ಇನ್ಸೆಕ್ಟ ವರ್ಗ, ಟೆರಿಗೋಟ ಉಪವರ್ಗ ಮತ್ತು ಎಕ್ಸೊಟೆರಿಗೋಟ ಗುಂಪಿನ ಒಂದು ಕೀಟ ಗಣ. ಹುಟ್ಟಿ ಬೇಗ ಸಾಯುವ ಮೇಫ್ಲೈ ಈ ಗಣದ ಒಂದು ಕೀಟ
ephemeroptera
ಎಬೊನೈಟ್
(ತಂ) ವಿದ್ಯುನ್ನಿರೋಧಕ ಕಠಿಣ ಪದಾರ್ಥ. ರಬ್ಬರಿನಿಂದ ತಯಾರಿತವಾದುದು
ebonite
ಎಮರಿ
(ಭೂವಿ) ಕುರಂದ ಮತ್ತು ಮ್ಯಾಗ್ನೆಟೈಟ್ ಅಥವಾ ಹೀಮಟೈಟ್ ಖನಿಜಗಳ ನಿಕಟ ಚೂರ್ಣೀಕೃತ ಮಿಶ್ರಣ. ಮೋಹ್ ಕಾಠಿಣ್ಯಾಂಕ ೯. ಅಪಘರ್ಷಕವಾಗಿ ಉಪಯೋಗ. ರಾಸಾಯನಿಕ ಪ್ರತೀಕ Al2O3. ಮರಳು ಕಾಗದ ಮತ್ತು ಉಜ್ಜುಗೊರಡುಗಳ ತಯಾರಿಕೆಯಲ್ಲಿ ಬಳಕೆ
emery
ಎಮಲ್ಶನ್
(ರ) ಒಂದು ದ್ರವದಲ್ಲಿ ಇನ್ನೊಂದರ ಕಲಿಲ ದ್ರಾವಣ. ವೈದ್ಯಕೀಯದಲ್ಲಿ ಬಳಕೆ. (ಭೌ) ದ್ಯುತಿ ಸಂವೇದೀ ಪದಾರ್ಥ. ಕೆಮರಾ ಫಲಕಗಳಿಗೂ ಫಿಲ್ಮ್‌ಗಳಿಗೂ ಇದನ್ನು ಲೇಪಿಸುತ್ತಾರೆ. ನೋಡಿ : ಕಲಿಲ ದ್ರಾವಣ
emulsion
ಎಮಲ್ಸಿಫಿಕೇಶನ್
(ರ) ಎಮಲ್ಶನ್‌ಆಗಿ ಮಾಡುವುದು. ಎಮಲ್ಸೀಕರಣ
emulsification
ಎಮ್ಮೆ
(ಪ್ರಾ) ಆರ್ಟಿಯೊಡ್ಯಾಕ್ಟಿಲ ವರ್ಗ ಹಾಗೂ ಬೋವಿಡೀ ಕುಟುಂಬಕ್ಕೆ ಸೇರಿದ ಸೀಳುಗೊರಸಿನ ಮೆಲಕು ಹಾಕುವ ಸ್ತನಿ. ಬ್ಯುಬೇಲಸ್ ಬ್ಯುಬಾಲಿಸ್ ವೈಜ್ಞಾನಿಕ ನಾಮ. ಭಾರತ, ಆಫ್ರಿಕಗಳ ಮೂಲವಾಸಿ. ಹಾಲು ಕೊಡುವ ಸಾಕುಪ್ರಾಣಿ
buffalo
ಎಮ್ಮೆಟ್ರೋಪಿಯ
(ವೈ) ಕಣ್ಣಿನ ವಕ್ರೀಕರಣ ವ್ಯವಸ್ಥೆಯ ಸಹಜ ಸ್ಥಿತಿ. ನೇತ್ರ ಮಸೂರದ ಮೇಲೆ ಬೀಳುವ ಬೆಳಕಿನ ಸಮಾಂತರ ಕಿರಣಗಳನ್ನು ಇದು ಅಕ್ಷಿಪಟದ ಮೇಲೆ ನಾಭೀಕರಿಸುತ್ತದೆ - ಕಣ್ಣು ಶ್ರಾಂತಸ್ಥಿತಿಯಲ್ಲಿದ್ದಾಗ
emmetropia
ಎರಕ ಉಕ್ಕು
(ತಂ) ಯಂತ್ರ ಕ್ರಿಯೆಯಿಂದ ಆಕಾರ ರೂಪಿಸದೆ ಎರಕ ಹೊಯ್ದ ಉಕ್ಕು
cast steel
ಎರಕ ಸಾಲೆ
(ತಂ) ಅಚ್ಚುಗಳಲ್ಲಿ ಎರಕ ಹೊಯ್ದು ಲೋಹ ಅಥವಾ ಗಾಜಿನ ಪದಾರ್ಥಗಳನ್ನು ತಯಾರಿಸುವ ಕರ್ಮಾಗಾರ