(ಪ್ರಾ) ಬೇರೊಂದು ಪ್ರಾಣಿಯ ಚರ್ಮದ ಮೇಲೆ ವಾಸಿಸುವ ಯಾವುದೇ ಪ್ರಾಣಿ. ಅಧಿಜಂತುಕ
epizoon
ಎಪಿಟ್ರೋಕಾಯ್ಡ್
(ಗ) ಸ್ಥಾಯೀ ವಕ್ರರೇಖೆಯ ಪರಿಧಿಯ ಮೇಲೆ ಉರುಳುವ ವಕ್ರದ ಪರಿಧಿ ಮೇಲಿನ ಸ್ಥಿರ ಬಿಂದು ರೇಖಿಸುವ ಪಥ. ರೌಲೆಟ್
epitrochoid
ಎಪಿಡಯಾಸ್ಕೋಪ್
(ತಂ) ಪಾರಕ ವಸ್ತುವೊಂದರ (ಸ್ಲೈಡ್ ಅಥವಾ ಟ್ರಾನ್ಸ್‌ಪೆರೆನ್ಸಿಯಂತಹುದು) ಅಥವಾ ಅಪಾರಕ ವಸ್ತುವಿನ (ಡಯಾಗ್ರಮ್ ಅಥವಾ ಮುದ್ರಿತ ಪುಟದಂತಹುದು) ಹಿಗ್ಗಿಸಿದ ಬಿಂಬವನ್ನು ತೆರೆಯ ಮೇಲೆ ಪ್ರಕ್ಷೇಪಿಸಲು ಅಧ್ಯಾಪಕರು, ಉಪನ್ಯಾಸಕರು ಮುಂತಾದವರು ಬಳಸುವ ದೃಕ್ ಉಪಕರಣ
epidiascope
ಎಪಿಥೀಲಿಯಮ್
(ಪ್ರಾ) ಪ್ರಾಣಿಯ ಒಂದು ಪ್ರಾಥಮಿಕ ಊತಕ. ಕೋಶಗಳು ಒತ್ತಾಗಿರುವುದು ಇದರ ವಿಶಿಷ್ಟ ಲಕ್ಷಣ. ಮಧ್ಯೆ ಯಾವ ವಸ್ತುವೂ ಇರುವುದಿಲ್ಲ; ಶರೀರದ ಕುಳಿಗಳ ಹಾಗೂ ನಾಳಗಳ ಒಳಮೈ ಹಾಗೂ ಹೊರಮೈಗಳನ್ನು ಆವರಿಸಿರುವಂಥದು
epithelium
ಎಪಿಥೀಲಿಯೊಮ
(ವೈ) ಲಾಲಾ ಚರ್ಮದ ಹೊರ ಪೊರೆಯಿಂದ (ಎಪಿಥೀಲಿಯಮ್) ಉತ್ಪತ್ತಿಯಾದ ಒಂದು ಅರ್ಬುದ. ಸಾಮಾನ್ಯವಾಗಿ ಚರ್ಮದ ಕ್ಯಾನ್ಸರ್, ಕೆಲವೊಮ್ಮೆ ಲೋಳೆಪೊರೆಯ ಕ್ಯಾನ್ಸರ್
epithelioma
ಎಪಿಮೆರ್
(ರ) ಪರಮಾಣು ಸರಪಣಿಯ ಕೊನೆಗೆ C ಪರಮಾಣುವಿನ ಮೇಲೆ, Hನ (ಹೈಡ್ರೊಜನ್) ಮತ್ತು OHನ (ಹೈಡ್ರಾಕ್ಸಿಲ್) ಸ್ಥಾನಗಳನ್ನು ಅವಲಂಬಿಸಿ, ರೂಪುಗೊಳ್ಳುವ ಪರಸ್ಪರ ಭಿನ್ನವಾದ ಎರಡು ಪದಾರ್ಥಗಳಲ್ಲಿ ಯಾವುದೇ ಒಂದು
epimer
ಎಪಿಮೆರೀಕರಣ
(ತಂ) ಎಪಿಮೆರ್ ರೂಪುಗೊಳ್ಳುವ ಪ್ರಕ್ರಿಯೆ
epimerisation
ಎಪಿಸ್ಟ್ಯಾಕ್ಸಿಸ್
(ವೈ) ಮೂಗಿನಿಂದ ರಕ್ತಸ್ರಾವ
epistaxis
ಎಪಿಸ್ಟ್ಯಾಸಿಸ್
(ವೈ) ಒಂದು ಜೀನ್‌ನ ಪರಿಣಾಮ ಇನ್ನೊಂದರಿಂದ ಕುಂಠಿತವಾಗುವುದು. ರಕ್ತಸ್ರಾವವನ್ನು ನಿಲ್ಲಿಸುವುದು ಅಥವಾ ನಿಯಂತ್ರಿಸುವುದು
epistasis
ಎಪ್ಸಮ್-ಉಪ್ಪು
(ವೈ) ಭೇದಿ ಉಪ್ಪು. ನೈಸರ್ಗಿಕ ಎಪ್ಸಮ್ ಲವಣ. ನೋಡಿ: ಎಪ್ಸೊಮೈಟ್