logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎನ್‌ಸ್ಟಟೈಟ್
(ಭೂವಿ) ಆರ್ಥೊರಾಂಬಿಕ್ ವ್ಯವಸ್ಥೆಯ ಪೈರಾಕ್ಸಿನ್ ಖನಿಜಗಳಲ್ಲೊಂದು. ರಾಸಾಯನಿಕ ಸಂಯೋಜನೆ MgSiO3. ಇದೊಂದು ಶಿಲಾರೂಪಕ ಖನಿಜ
enstatite

ಎನ್‌ಹೈಡ್ರೈಟ್
(ಭೂವಿ) ನೀರು ತುಂಬಿರುವ ಚಿಕ್ಕ ಗುಳ್ಳೆಗಳಿಂದ ಕೂಡಿರುವ ಯಾವುದೇ ಖನಿಜ. ಜಲಯುಕ್ತ. ನೋಡಿ: ಅನ್‌ಹೈಡ್ರೈಟ್
enhydrite

ಎನಿಮ
(ವೈ) ೧. ಗುದದ್ವಾರದೊಳಗೆ ದ್ರವವನ್ನು ತುಂಬಿ ಮಲ ವಿಸರ್ಜನೆಯನ್ನು ಮಾಡಿಸುವ ಕ್ರಿಯೆ. ಹೀಗೆ ಮಾಡುವುದರಿಂದ ಮಲಬದ್ಧತೆ ಕಳೆಯಬಹುದು. ಆಹಾರಾಂಶಗಳನ್ನು ಪೂರೈಸಬಹುದು. ಔಷಧಗಳನ್ನು ನೀಡಬಹುದು. ಎಕ್ಸ್-ಕಿರಣ ಅಪಾರದರ್ಶಕ ವಸ್ತು ಗಳನ್ನು ತುಂಬಿ ಚಿತ್ರಗಳನ್ನು ತೆಗೆಯಬಹುದು. ಸಾಧನಗಳನ್ನು ತೂರಿಸಿ ಅಧ್ಯಯನ ನಡೆಸಬಹುದು. ೨. ದ್ರವ ಚಿಮ್ಮಲು ಬಳಸುವ ಪಿಚಕಾರಿ. ಸಿರಂಜು. ೩. ಇದಕ್ಕೆ ಉಪಯೋಗಿಸುವ ದ್ರವ
enema

ಎನ್ಯಾಮೆಲ್
(ತಂ) ರಾಳವನ್ನು ಎಣ್ಣೆಯೊಂದಿಗೆ ಅರೆದು ತಯಾರಿಸಿದ ಬಣ್ಣ. ಲಿನ್‌ಸೀಡ್ ಎಣ್ಣೆಯನ್ನು ಚೈನಾವುಡ್ ಎಣ್ಣೆಯ ಜೊತೆಗೆ ಕೆಲವು ಗಂಟೆ ಕಾಲ ೩೦೦0 ಸೆ. ಉಷ್ಣತೆಯಲ್ಲಿ ಕಾಸಿದಾಗ ಎಣ್ಣೆ ಮಂದವಾಗುತ್ತದೆ ಮತ್ತು ಲೇಪನಯೋಗ್ಯವಾಗುತ್ತದೆ. (ವೈ) ಹಲ್ಲಿನ ಮೇಲಿನ ಗಡುಸಾದ, ನಯವಾದ ಮತ್ತು ಹೊಳೆಯುವ ಕ್ಯಾಲ್ಸಿಯಮ್‌ಯುಕ್ತ ಪದರ
enamel

ಎನ್ಸೆಫಲೈಟಿಸ್
(ವೈ) ಮಿದುಳ ಪದಾರ್ಥದ ಊತ. ಸಾಮಾನ್ಯವಾಗಿ ವೈರಸ್‌ನಿಂದ ಉಂಟಾಗುತ್ತದೆ
encephalitis

ಎನ್ಸೆಫಾಲೊಗ್ರಫಿ
(ವೈ) ಮಿದುಳಿನ ಎಕ್ಸ್- ಕಿರಣ ಚಿತ್ರೀಕರಣ. ಮಿದುಳು ಮತ್ತು ಮಿದುಳು ಬಳ್ಳಿಯಲ್ಲಿಯ ದ್ರವವನ್ನು ತೆಗೆದು ಆದರ ಸ್ಥಳದಲ್ಲಿ ವಾಯು ಅಥವಾ ಆಕ್ಸಿಜನ್ ತುಂಬಿ ಚಿತ್ರ ತೆಗೆಯುವುದು. ಮಸ್ತಿಷ್ಕಚಿತ್ರಣ. ಈ ತಪಾಸಣೆಯನ್ನು ಈಗ ಅನುಸರಿಸುತ್ತಿಲ್ಲ
encephalography

ಎಪಾಕ್ಸಿಯಲ್
(ಜೀ) ಜೀವಿಯ ಅಕ್ಷ ಪ್ರದೇಶದ ಮೇಲೆ ಅಥವಾ ಹಿಂದೆ ಇರುವಂಥ
epaxial

ಎಪಿಕಾರ್ಡಿಯಮ್
(ವೈ) ಹೃದಯದ ಹೊರ ಪೊರೆ. ಕಶೇರುಕಗಳ ಹೃದಯವನ್ನು ಆವರಿಸಿರುವ ರಕ್ತಸಾರ ಪೊರೆ
epicardium

ಎಪಿಕಾರ್ಪ್
(ಸ) ಫಲದ ಸಿಪ್ಪೆಯ ಅತ್ಯಂತ ಹೊರಪದರ
epicarp

ಎಪಿಗ್ಯಾಮಿಕ್
(ಸಾ) ಭಿನ್ನಲಿಂಗಿ ಸಂಗಾತಿಯನ್ನು ಆಕರ್ಷಿಸುವ (ಗುಣ) ಉದಾ: ಆಕರ್ಷಕ ಬಣ್ಣ
epigamic


logo