logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎತ್ತು ಯಂತ್ರ
(ತಂ) ನೋಡಿ : ವಿಂಚ್
winch

ಎತ್ತು ಸೇತುವೆ
(ತಂ) ಹೊಳೆಗೆ ಅಡ್ಡವಾಗಿ ಜೋಡಿಸಿರುವ ಚರಸೇತುವೆ. ಒಂದು ಕೊನೆ ಖಾಲಿ. ಇನ್ನೊಂದು ಕೊನೆಗೆ ಜಗ್ಗು ತೂಕ ಲಗತ್ತಿಸಿದೆ. ಇದು ಅಲ್ಲೇ ಕೆಳಗಿರುವ ಗುಂಡಿಯಲ್ಲಿ ವಿರಮಿಸಿದಾಗ ಸೇತುವೆ ಎದ್ದು ನಿಂತಿರುವುದು. ತೂಕವನ್ನು ಮೇಲಕ್ಕೆ ಎತ್ತಿದಾಗ ಸೇತುವೆ ಕೆಳಕ್ಕೆ ಬಾಗಿ ಖಾಲಿ ಕೊನೆಯು ದಂಡೆಯ ಎದುರಂಚಿನ ಮೇಲೆ ತಂಗುತ್ತದೆ. ಆಗ ಸೇತುವೆಯು ಉಪಯೋಗಕ್ಕೆ ಲಭ್ಯವಾಗುತ್ತದೆ. ಸೇತುವೆಯು ಎರಡು ದಂಡೆಗಳಿಗೂ ಭದ್ರವಾಗಿ ಲಗತ್ತಿಸಲ್ಪಟ್ಟು ಮಧ್ಯಭಾಗ ಸಮಸನ್ನೆಯ ನೆರವಿನಿಂದ ಇಬ್ಭಾಗವಾಗಿ ಮೇಲಕ್ಕೆ ಏರುವ ಅಥವಾ ಕೆಳಕ್ಕೆ ಇಳಿಯುವ ವ್ಯವಸ್ಥೆ ಕೂಡ ಇರಬಹುದು
bascule bridge

ಎತ್ಮಾಯಿಡ್
(ವೈ) ಜರಡಿಯಂತಿರುವ. ವಂದರಿಯಂತೆ ಇರುವ. ನೋಡಿ : ಜಾಲರಾಸ್ಥಿ
ethmoid

ಎಥನಾಲ್
(ರ) ಈಥೈಲ್ ಆಲ್ಕಹಾಲ್, c2h5oh ನಿರ್ವರ್ಣ ದ್ರವ. ನೀರಿನೊಂದಿಗೆ ಬೆರೆಯುತ್ತದೆ. ಕುಬಿಂ ೭೮.೫೦0 ಸೆ. ಸಕ್ಕರೆಗಳ ಕಿಣ್ವನದಿಂದ ತಯಾರಿಕೆ. ಮದ್ಯಪಾನೀಯಗಳ ಕ್ರಿಯಾಶೀಲ ಘಟಕ. ಇಂಧನವಾಗಿ ಹಾಗೂ ಇತರ ಆರ್ಗ್ಯಾನಿಕ್ (ಕಾರ್ಬನಿಕ) ಸಂಯುಕ್ತಗಳ ತಯಾರಿಕೆಯಲ್ಲಿ ಬಳಕೆ
ethanol

ಎಥಿಲೀನ್
(ರ) ಒಲಿಫೀನ್ಸ್ ಗುಂಪಿಗೆ ಸೇರಿದ ಅನಿಲ. c2h4. ಮಧುರ ವಾಸನೆಯ, ನಿರ್ವರ್ಣದ, ಜ್ವಲೀಯ ಅನಿಲ. ಕುಬಿಂ -೧೦೩.೯0 ಸೆ. ಅರಿವಳಿಕೆಯಾಗಿ ಹಾಗೂ ಪಾಲಿಥೀನ್ ತಯಾರಿಕೆಯಲ್ಲಿ ಬಳಕೆ
ethylene

ಎದೆ
(ಸಾ) ಮಡಿಲು, ವಕ್ಷಸ್ಥಲ
bosom

ಎದೆಯುರಿ
(ವೈ) ಜಠರದಲ್ಲಿ, ಅನೇಕ ವೇಳೆ ಅನ್ನನಾಳ ದಲ್ಲಿ, ಉಂಟಾಗುವ ಉರಿ. ಅಜೀರ್ಣ ವ್ಯಾಧಿ ಇದ್ದಾಗ ಜಠರಕ್ಕೂ ಅನ್ನನಾಳಕ್ಕೂ ಆಮ್ಲ ಬಂದು ಇಂಥ ಉರಿತ ಉಂಟಾಗುತ್ತದೆ. ಕೆಲವು ವೇಳೆ ಹುಳಿತೇಗು ಬರುವುದೂ ಉಂಟು
heart burn

ಎದೆ ವಿಗ್ರಹ
(ಸಾ) ಮನುಷ್ಯನ ಎದೆ ಮತ್ತು ಅದರ ಮೇಲಿನ ದೇಹಭಾಗವಿರುವ ಪ್ರತಿಮೆ ಅಥವಾ ಚಿತ್ರ. ವಕ್ಷ ಪ್ರತಿಮೆ
bust

ಎದೆಸಿರೆ ಬಿಗಿತ
(ವೈ) ಎದೆ ಪ್ರದೇಶದಲ್ಲಿ ಕಂಡುಬರುವ ಸಹಿಸಲು ಆಗದ ಉಗ್ರ ಸ್ವರೂಪದ ಬೇನೆ ಅಥವಾ ಒತ್ತಡ. ಇದಕ್ಕೆ ಕಾರಣ ಹೃದಯದ ಸ್ನಾಯುವಿಗೆ ಆಗುವ ಆಕ್ಸಿಜನ್ನಿನ ಕೊರತೆ. ಹೃದಯ ಸ್ನಾಯುವಿಗೆ ರಕ್ತ ಪೂರೈಸುವ ಮುಕುಟ ಧಮನಿ (ಕಾರೋನರಿ ಆರ‍್ಟರಿ)ಗಳ ಒಳಭಾಗದಲ್ಲಿ ಕೊಬ್ಬಿನಂಶ ಸಂಗ್ರಹವಾಗಿ ಅದರ ವ್ಯಾಸ ಕುಗ್ಗುತ್ತದೆ, ಹೃದಯಕ್ಕೆ ರಕ್ತಪೂರೈಕೆ ಕಡಿಮೆಯಾಗುತ್ತದೆ. ದೈಹಿಕ ಶ್ರಮ ಕಾರ್ಯಗಳಲ್ಲಿ ತೊಡಗಿದಾಗ ಈ ಶೂಲೆ ಹೆಚ್ಚು ಕಂಡುಬರುತ್ತದೆ. ಹೃತ್ಸೆರೆಬಿಗಿತ. ಎದೆ ಶೂಲೆ
angina pectoris

ಎನ್‌ಕೋಡಿಂಗ್
(ಕಂ) ಸಂಕೇತೀಕರಣ. ಒಂದು ಸಂಕೇತ ರೂಪದಿಂದ ಇನ್ನೊಂದು ರೂಪಕ್ಕೆ ಮಾಹಿತಿಯ ಪರಿವರ್ತನೆ
encoding


logo