logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎಕ್ಕಿದ ಹತ್ತಿ
(ತಂ) ಮೆತ್ತೆ , ಹಾಸಿಗೆಗಳಿಗೆ ಬಳಸುವ ಹತ್ತಿ. (ವೈ) ಶಸ್ತ್ರಚಿಕಿತ್ಸೆ, ಅಂಗ ಪ್ರಸಾದನಗಳಲ್ಲಿ ಬಳಸುವ ಸಂಸ್ಕರಿಸಿದ ಹತ್ತಿ
cotton wool

ಎಕ್ಕುವುದು
(ತಂ) ನೇಯುವ ಮುನ್ನ ಹತ್ತಿ ಉಣ್ಣೆ ಮೊದಲಾದವನ್ನು ಹಣಿಗೆ ಮೂಲಕ ಹಾಯಿಸಿ ಎಳೆಗಳ ಗೋಜಲನ್ನು ಚೊಕ್ಕಗೊಳಿಸಿ ಬಿಡಿ ಎಳೆಗಳಾಗಿ ವಿಂಗಡಿಸುವುದು
carding

ಎಕ್ಸಾಲ್ಟೇಶನ್
(ಭೌ) ಸಂಯುಕ್ತವೊಂದರ ಅಣು ರಚನೆಯಲ್ಲಿ ವೈಪರೀತ್ಯದಿಂದಾಗಿ ಪ್ರಕಟವಾಗುವ ಅಸಾಮಾನ್ಯ ಉಚ್ಚ ವಕ್ರೀಭವನ
exaltation

ಎಕ್ಸೊಪ್ತಾಲ್ಮಿಯ
(ವೈ) ಕಣ್ಣು ಗುಡ್ಡೆ ಅಸಹಜವಾಗಿ ಹೊರಹೊಮ್ಮಿರುವುದು ಅಥವಾ ಉಬ್ಬಿರುವುದು
exophthalmia

ಎಕ್ಸೋಪತಿಕ್
(ವೈ) ಹೊರಗಿನ ಯಾವುದೇ ಕಾರಣ ದಿಂದಾಗಿ ದೇಹದಲ್ಲಿ ಉಂಟಾದ (ರೋಗ)
exopathic

ಎಚ್ಚು
(ತಂ) ಲೋಹ, ಕಲ್ಲು ಅಥವಾ ಗಾಜನ್ನು ಕೊರೆಯ ಬಲ್ಲ ಶಕ್ತಿಯುಳ್ಳ ಆಮ್ಲದಂಥ ರಾಸಾಯನಿಕ ಪದಾರ್ಥವನ್ನು ಬಳಸಿ ಕೊಂಡು ಆ ವಸ್ತುಗಳ ಮೇಲ್ಮೈ ಮೇಲೆ ಚಿತ್ರ ಕೊರೆಯುವ ತಂತ್ರ
etch

ಎಡಿಪಿ ADP
(ಕಂ) ನೋಡಿ : ಸ್ವಚಾಲಿತ ದತ್ತಸಂಸ್ಕರಣೆ

ಎಣ್ಣೆ ಸ್ಟವ್
(ತಂ) ಎಣ್ಣೆಯನ್ನು ಉರುವಲಾಗಿ ಬಳಸುವ ಒಲೆ. ಅಡುಗೆ ಮಾಡಲು ಬಳಕೆ
oil stove

ಎತ್ತರ ಭೂಮಿ
(ಭೂವಿ) ತಗ್ಗು ಪ್ರದೇಶದ ಪಕ್ಕದಲ್ಲಿ ಪ್ರಮುಖವಾಗಿ ಎದ್ದುಕಾಣುವಂತೆ ಇರುವ ಯಾವುದೇ ವಿಶಾಲ ವಾದ ಎತ್ತರದ ಇಲ್ಲವೇ ಪರ್ವತೀಯ ಪ್ರದೇಶ. ಪ್ರಸ್ಥಭೂಮಿ
highland

ಎತ್ತು ಪಂಪು
(ತಂ) ನೀರು ಅಥವಾ ಇನ್ನಾವುದೇ ದ್ರವವನ್ನು ಕೆಳಮಟ್ಟದಿಂದ ಮೇಲಕ್ಕೆ ಎತ್ತುವ ರೇಚಕ
lift pump


logo