logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎಎಸ್‌ಸಿಐಐ ASCII
(ಕಂ) ನೋಡಿ: ಪ್ರತೀಕ ಸಂಕೇತ

ಎಕ್‌ಬಾಲಿಕ್
(ವೈ) ಗರ್ಭಾಶಯವನ್ನು ಪ್ರಬಲವಾಗಿ ಸಂಕುಚಿಸಿ ಪ್ರಸವ/ಗರ್ಭಸ್ರಾವವನ್ನು ತ್ವರೆಗೊಳಿಸುವ ಔಷಧ ವಸ್ತು
ecbolic

ಎಕ್ಸ್‌ಟ್ರಿನ್ಸಿಕ್
(ಭೌ) ಮಲಿನ ಪದಾರ್ಥಗಳಿಂದಾಗಿ ವಿದ್ಯುತ್‌ವಹನ ಗುಣಗಳನ್ನು ಪಡೆಯುವ (ಅರೆವಾಹಕಗಳು). (ಪ್ರಾ) ಕಶೇರುಕಗಳಲ್ಲಿ ಮುಂಡದಿಂದ ನಡುಕಟ್ಟಿನವರೆಗೆ ಹಬ್ಬಿರುವ (ಅನುಬಂಧಿತ ಸ್ನಾಯು). ಬಹಿಸ್ಥ
extrinsic

ಎಕ್ಸ್‌ಪ್ಲಾಂಟೇಶನ್
(ಜೀ) ಜೀವಂತ ಊತಕ ಅಥವಾ ಅಂಗದಿಂದ ಹೊರತೆಗೆದ ಒಂದು ಭಾಗವನ್ನು ಕೃತಕ ಮಾಧ್ಯಮದಲ್ಲಿ ಬೆಳೆಸುವುದು. ಕರ್ತೋತಕ. ಹೊರನಾಟಿ
explantation

ಎಕ್ಸ್‌ಹಲೇಶನ್
(ಭೂವಿ) ವಿಕಿರಣಪಟು ಧಾತುಗಳ ಕ್ಷಯದಿಂದುಂಟಾದ ವಿಕಿರಣಪಟು ಅನಿಲಗಳು ಮಣ್ಣಿನ/ಸಡಿಲ ಬಂಡೆ ಮೇಲ್ಮೈಯಿಂದ ನಿರ್ಗಮನ (ವೈ) ನಿಶ್ವಾಸ, ಬಿಟ್ಟ ಉಸಿರು
exhalation

ಎಕಪ್ನಿಯ
(ವೈ) ಅಕ್ಷರಶಃ ‘ಧೂಮರಹಿತ’, ಅಂದರೆ ಕಾರ್ಬನ್ ಡೈಆಕ್ಸೈಡ್ ಇರದ ಸ್ಥಿತಿ ಎಂದಾಗುತ್ತದೆ. ಆದರೆ ಇದೊಂದು ತಪ್ಪು ಬಳಕೆ. ವಾಸ್ತವವಾಗಿ ರಕ್ತದಲ್ಲಿ ಸಹಜ ಪ್ರಮಾಣಕ್ಕಿಂತ ಕಡಿಮೆ ಇರುವ ಕಾರ್ಬನ್ ಡೈಆಕ್ಸೈಡ್ ಸ್ಥಿತಿಯನ್ನು ಸೂಚಿಸಲು ಈ ಶಬ್ದವನ್ನು ಬಳಸಲಾಗುತ್ತದೆ
acapnia

ಎಕರೆ
(ಭೂ) ವಿಸ್ತೀರ್ಣದ ಒಂದು ಮಾನ = ೧೦ ಚದರ ಚೈನ್‌ಗಳು (೧ ಚೈನ್ = ೬೬ ಅಡಿಗಳು) ಅಥವಾ ೪೮೪೦ ಚದರ ಗಜಗಳು = ೦.೪೦೪೭ ಹೆಕ್ಟೇರ್ = ಸುಮಾರು ೪೦೫೦ ಚದರ ಮೀ
acre

ಎಕಿಮೋಸಿಸ್
(ವೈ) ಚರ್ಮದ ಕೆಳಗೆ ಅಥವಾ ಲೋಳೆಪೊರೆಯಡಿಯಲ್ಲಿ ರಕ್ತಸ್ರಾವವಾಗಿ, ಊದಿಕೊಂಡು, ಚರ್ಮದ ಮೇಲೆ ರೂಪುಗೊಳ್ಳುವ ಊದಾ ಬಣ್ಣದ ಕಲೆ
ecchymosis

ಎಕೊಸೌಂಡರ್
(ಸಾ) ಸಾಗರ ತಳಕ್ಕೆ ಪ್ರೇಷಿಸಿದ ಧ್ವನಿ ಪ್ರತಿಧ್ವನಿಯಾಗಿ ಮರಳುವವರೆಗಿನ ಅವಧಿಯನ್ನು ದಾಖಲಿಸಿ ಸಾಗರದ ಆಳವನ್ನು ಕಂಡುಹಿಡಿಯುವ ಸಾಧನ. ಸಾಗರಾಂತರ್ಗತ ವಸ್ತುಗಳ ಬಗೆಗಿನ ವಿವರಗಳನ್ನು ಇದರಿಂದ ತಿಳಿಯಬಹುದು. ಪ್ರತಿಧ್ವನಿ ಗಭೀರತಾಮಾಪಕ
echosounder

ಎಕ್ಕಿದ ದಾರ
(ತಂ) ಎಕ್ಕುವ ಸಲಕರಣೆಯಿಂದ ಹಿಂಜಿ ನೂತ ದಾರ
carded yarn


logo