logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎಂಡೊಸ್ಕೆಲಿಟಿನ್
(ಪ್ರಾ) ಕಾರ್ಡೇಟದ ಉಪ ವಿಭಾಗವಾದ ಕ್ರೇನಿಯೇಟ ಅಥವಾ ವರ್ಟಿಬ್ರೇಟದಲ್ಲಿ ದೇಹದ ಒಳಗಿನ ಅಸ್ಥಿಪಂಜರ. ಮೃದ್ವಸ್ಥಿಯಿಂದ ರೂಪಿತವಾಗಿದೆ. ದೇಹಕ್ಕೆ ಆಧಾರವನ್ನು ಒದಗಿಸುತ್ತದೆ. ಅಂತರಸ್ಥಿಪಂಜರ
endoskeleton

ಎಂಡೊಸ್ಕೋಪ್
(ವೈ) ಆಂತರಿಕ ಅಂಗಗಳ ಪ್ರತ್ಯಕ್ಷ ವೀಕ್ಷಣೆಗೆ ಬಳಸುವ ಸಲಕರಣೆ. ಉದಾ: ಜಠರದರ್ಶಕ. ಶ್ವಾಸಕೋಶದರ್ಶಕ. ಅಂತರ್ದರ್ಶಕ
endoscope

ಎಂಡೊಸ್ಪರ್ಮ್
(ಗ) ಬೀಜ ಮೊಳೆತು ಸಸಿಯಾಗುವ ಮೊದಲಹಂತಗಳಲ್ಲಿ ಭ್ರೂಣದ ಪೋಷಣೆಗಾಗಿ ಬಳಕೆಯಾಗುವ ಆಹಾರ ಪದಾರ್ಥ. ಬೀಜದೊಳಗೆ ಸಂಗ್ರಹವಾಗಿರುತ್ತದೆ
endosperm

ಎಂಡೊಸ್ಪೋರ್
(ಸ) ೧. ಬೀಜಕ ಭಿತ್ತಿಯ ಅತ್ಯಂತ ಒಳಪದರ. ೨. ಬ್ಯಾಕ್ಟೀರಿಯ ಕೋಶದೊಳಗೆ ರೂಪುಗೊಳ್ಳುವ ಮತ್ತು ಅತಿರೋಧದ ಗಾಢ ಭಿತ್ತಿ ಇರುವ ಬೀಜಕ. ಅಂತರ್ ಬೀಜಕ. ೩. ಜನಕಕೋಶದ ಒಳಗಡೆ, ಅಥವಾ ಅದರ ಒಳ ದ್ರವ್ಯದ ವಿಭಜನೆಯಿಂದ ಉತ್ಪಾದನೆಯಾಗುವ, ಬೀಜಕ. ಬೀಜದಲ್ಲಿ ಭ್ರೂಣಕ್ಕಾಗಿ ಸಂಗ್ರಹವಾಗಿರುವ ಪೋಷಕ ವಸ್ತುಗಳು
endospore

ಎಂಡೋಟಾಕ್ಸಿನ್
(ಜೀ) ಬ್ಯಾಕ್ಟೀರಿಯಾಂತರ್ಗತ ವಿಷ. ಬ್ಯಾಕ್ಟೀರಿಯಾ ಕೋಶಗಳು ಮಡಿದ ಬಳಿಕ ಇದು ಬಿಡುಗಡೆ ಗೊಳ್ಳುವುದು. ಹೀಗೆ ಅಂತರ್ವಿಷಗಳಿಂದ ಹರಡುವ ರೋಗಗಳಿಗೆ ನಿದರ್ಶನ ವಿಷಮಶೀತಜ್ವರ (ಟೈಫಾಯ್ಡ್) ಮತ್ತು ವಾಂತಿ ಭೇದಿ (ಕಾಲರಾ). ಅಂತರ್ವಿಷ
endotoxin

ಎಂಡೋನ್ಯೂಕ್ಲಿಯೇಸ್
(ಜೀ) ಪಾಲಿ ನ್ಯೂಕ್ಲಿಯೊಟೈಡ್ ಸರಪಳಿಯೊಂದರ ಮಧ್ಯದಲ್ಲಿ ತುಂಡರಿಸುವ ಕಿಣ್ವ. (ರ) ನ್ಯೂಕ್ಲಿಯಿಕ್ ಆಮ್ಲಗಳಲ್ಲಿ ಆಂತರಿಕ ಬಿರುಕಾಗುವ ಪ್ರಕ್ರಿಯೆಯ ವೇಗವನ್ನು ವರ್ಧಿಸುವ ಕಿಣ್ವ
endonuclease

ಎಂತಾಲ್ಪಿ
(ಭೌ) ೧ ಮೋಲ್ ಸಂಯುಕ್ತದಲ್ಲಿ ಉಷ್ಣತೆ, ಒತ್ತಡ ಮತ್ತು ಗಾತ್ರದಿಂದ ಸಂಚಿತವಾಗಿರುವ ಉಷ್ಣ ಶಕ್ತಿ. (heat content) ಇದನ್ನು h ಪ್ರತೀಕದಿಂದ ಸೂಚಿಸುವುದು ರೂಢಿ. ಇದರ ನಿರೂಪಣೆ h=e+pv. ಇಲ್ಲಿ e ಮಂಡಲದ ಆಂತರಿಕ ಶಕ್ತಿ , p ಒತ್ತಡ ಮತ್ತು v ಗಾತ್ರ. ಎಸ್‌ಐ ಮಾನಕದಲ್ಲಿ ೧ ಜೂಲ್
enthalpy

ಎಂಪಿಯೇಮ
(ವೈ) ದೇಹದ ಯಾವುದೇ ಭಾಗದಲ್ಲಿ ಸಂಗ್ರಹವಾಗಿರುವ ಕೀವು. ಮುಖ್ಯವಾಗಿ ಫುಪ್ಪುಸ ಪೊರೆಗಳ (ಪ್ಲೂರ) ನಡುವೆ ಸಂಗ್ರಹವಾಗಿರುವ ಕೀವಿಗೆ ಈ ಶಬ್ದ ಹೆಚ್ಚು ಅನ್ವಯವಾಗುತ್ತದೆ. ಒಳಕೀವು
empyema

ಎಂಫಿಸೇಮ
(ವೈ) ೧. ದೇಹದ ಸಂಯೋಜಕ ಊತಕಗಳ ನಡುವೆ ಅಸಹಜವಾಗಿ ಸಂಗ್ರಹವಾಗಿರುವ ಗಾಳಿ ಅಥವಾ ಅನಿಲ. ೨. ಶ್ವಾಸಕೋಶದ ಬೇರೂರಿದ ರೋಗ. ಗಾಳಿ ಗೂಡುಗಳು ಅಸಹಜವಾಗಿ ಉಬ್ಬಿ ನಮ್ಯತೆಯನ್ನು ಕಳೆದುಕೊಳ್ಳು ವುದರಿಂದ ಆಕ್ಸಿಜನ್ ಹಾಗೂ ಕಾರ್ಬನ್ ಡೈ ಆಕ್ಸೈಡ್‌ಗಳ ವಿನಿಮಯ ಏರುಪೇರಾಗಿ ಉಸಿರಾಟ ಕಷ್ಟವಾಗುತ್ತದೆ. ವಾತಶೋಫ
emphysema

ಎಎಂಯು
(atomic mass unit) (ಭೌ) ಪರಮಾಣು ರಾಶಿ ಏಕಮಾನದ ಸಂಕ್ಷಿಪ್ತ ರೂಪ
amu


logo