logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎಂಡಾಸ್ಮೋಸಿಸ್
(ಸ) ನಾಳದ ಹೊರಗಿನಿಂದ ಒಳಕ್ಕೆ ಪರಾಸರಣ ಕ್ರಿಯೆ. ಅರೆಪಾರಕ ಪೊರೆಯ ಮೂಲಕ ದ್ರವ ಹೊರಗಡೆಯಿಂದ ಒಳಗಡೆಗೆ ಜಿನುಗುವುದು. ಅಂತಃಪರಾಸರಣ
endosmosis

ಎಂಡೈಸಿಸ್
(ಪ್ರಾ) ಪ್ರಾಣಿ ಅಭಿವರ್ಧನೆಯಲ್ಲಿ ನಿರ್ಮೋಚನ ಕ್ರಿಯೆಯಿಂದ ಹೊರಪೊರೆ ವಿಸರ್ಜಿಸಲ್ಪಟ್ಟು ಅಲ್ಲಿ ಹೊಸ ಪೊರೆ ಮೈದಳೆಯುವ ಕ್ರಿಯೆ
endysis

ಎಂಡೊಟ್ರೋಫಿಕ್
(ಜೀ) ಆಂತರಿಕವಾಗಿ ಪೋಷಣೆ ಪಡೆಯುವ; ಆತಿಥೇಯ ಸಸ್ಯದ ಬೇರಿನ ತೊಗಟೆ ಮೇಲೆ ಪರೋಪಜೀವಿಯಾಗಿ ಬೆಳೆಯುವ ಕೆಲವು ಬೂಷ್ಟುಗಳಿಗೆ ಅನ್ವಯ. ಪರಾಂತಃಪೋಷಿತ
endotrophic

ಎಂಡೊಥೀಲಿಯಮ್
(ಜೀ) ಕುಹರಕ್ಕೆ ಅಸ್ತರಿಯಾಗಿ, ಮೇಲ್ಮೈಯ ಆವರಣವಾಗಿ, ಸಾಮಾನ್ಯವಾಗಿ ಸ್ರಾವಕವಾಗಿಯೂ, ಇರುವ ಕೋಶಗಳ ಅತಿ ತೆಳುಪದರ. (ವೈ) ಹೃದಯ ಮತ್ತು ರಕ್ತನಾಳಗಳನ್ನು ಅಸ್ತರಿಸಿರುವ ಕೋಶ ಪದರ: ಅಂತಃಸ್ತರ
endothelium

ಎಂಡೊಥೀಸಿಯಮ್
(ಸ) ಅಪ್ರಬುದ್ಧ ಪರಾಗಾಶಯದ ಮೂರು ಪದರಗಳ ಪೈಕಿ ನಡುವಿನದು; ಪ್ರಬುದ್ಧ ಪರಾಗಾಶಯದ ಆಂತರಿಕ ಪದರ
endothecium

ಎಂಡೊಪ್ಲಾಸ್ಮ್
(ಜೀ) ಜೀವಂತಕೋಶಗಳ ಜೀವ ದ್ರವ್ಯಗಳ ಕೇಂದ್ರಭಾಗ. ಸೂಕ್ಷ್ಮಕಣಗಳಿಂದಾಗಿದೆ. ಸಾಧಾರಣ ವಾಗಿ ಇದರ ತರಲತೆ ಬಹಿರ್‌ದ್ರವ್ಯದ ತರಲತೆಗಿಂತ ಹೆಚ್ಚು. ನೋಡಿ : ಪ್ರೋಟೊಪ್ಲಾಸ್ಮ್. ಜೀವದ್ರವ್ಯ
endoplasm

ಎಂಡೊಫೈಟ್
(ಸ) ಯಾವುದೇ ಸಸ್ಯದೊಳಗೆ ಬೆಳೆದಿರುವ ಆದರೆ ಪರೋಪಜೀವಿಯಲ್ಲದ ಇನ್ನೊಂದು ಸಸ್ಯ. ಅಂತಸ್ಸಸ್ಯ. ಒಳಸಸ್ಯ
endophyte

ಎಂಡೊಮಾರ್ಫಿಸಮ್
(ಭೂವಿ) ನಾಡ ಶಿಲೆಯನ್ನು ಅಥವಾ ಅದರ ತುಣುಕುಗಳನ್ನು ಅಗ್ನಿಶಿಲೆಯು ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ ಕಬಳಿಸಿದಾಗ ಅಗ್ನಿಶಿಲೆಯಲ್ಲಿ ಸಂಭವಿಸುವ ಬದಲಾವಣೆಗಳು
endomorphism

ಎಂಡೊಮೆಟ್ರಿಯಮ್
(ಪ್ರಾ) ಗರ್ಭಾಶಯದ ಒಳಮೈಯನ್ನು ಆವರಿಸಿರುವ ಲೋಳೆಪೊರೆ
endometrium

ಎಂಡೊಲಿಂಫ್
(ವೈ) ಕಶೇರುಕಗಳ ಶ್ರವಣ ನಾಳಗಳಲ್ಲಿ ತುಂಬಿರುವ ಪಾರಕ, ನಸು ಹಳದಿ ದ್ರವ. ಕರ್ಣಾಂತರ್ದ್ರವ
endolymph


logo