(ಭೌ) ದೀರ್ಘತೆ (ಉದ್ದ), ದ್ರವ್ಯರಾಶಿ ಹಾಗೂ ಕಾಲವನ್ನು ಅಳೆಯಲು ಎ. ಗಿಯೋರ್ಗಿ ೧೯೦೧ರಲ್ಲಿ ಸಿಜಿಎಸ್ ಪದ್ಧತಿಯನ್ನು ಆಧರಿಸಿ ನಿರ್ಮಿಸಿದ ಮತ್ತು ಅಂತರರಾಷ್ಟ್ರೀಯ ವಿದ್ಯುತ್ ತಾಂತ್ರಿಕ ಆಯೋಗ ಅಂಗೀಕರಿಸಿದ ಮೀಟರ್-ಕಿಲೋಗ್ರಾಮ್-ಸೆಕೆಂಡ್‌ಗಳ ಮೆಟ್ರಿಕ್‌ಮಾನ ವ್ಯವಸ್ಥೆ. ೧೯೬೦ರಲ್ಲಿ ಇದಕ್ಕೆ ವಿದ್ಯುತ್ ಪ್ರವಾಹದ ಮಾನ ‘ಆಂಪೇರ್’ನ್ನು ಸೇರಿಸಲಾಯಿತು. ತದನಂತರ ಇದನ್ನು ಎಂಕೆಎಸ್‌ಎ ವ್ಯವಸ್ಥೆ ಎನ್ನಲಾಗುತ್ತಿದೆ
system
ಎಂಜಿನ್
(ತಂ) ಶಕ್ತಿಯನ್ನು ಊಡಿ ಕಾರ್ಯ ಮಾಡಲು ಬಳಸುವ ಯಾಂತ್ರಿಕ ಸಾಧನ. ಉದಾ: ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಮಾರ್ಪಡಿಸುವ ಸಾಧನ
engine
ಎಂಜಿನಿಯರಿಂಗ್
(ತಂ) ತಂತ್ರವಿದ್ಯೆ ಕುರಿತ ಅಧ್ಯಯನ. ನಿಸರ್ಗದಲ್ಲಿಯ ವಸ್ತುಗಳ ಗುಣಗಳನ್ನೂ ಶಕ್ತಿ ಆಕರಗಳನ್ನೂ ಮಾನವನ ಉಪಯೋಗಕ್ಕಾಗಿ ವಿವಿಧ ರಚನೆ, ಯಂತ್ರ ಹಾಗೂ ಉತ್ಪನ್ನಗಳಲ್ಲಿ ಬಳಸುವುದರ ಅಧ್ಯಯನ
engineering
ಎಂಜೈಮ್ ವಿಜ್ಞಾನ
(ರ) ನೋಡಿ: ಕಿಣ್ವ ವಿಜ್ಞಾನ
zymology
ಎಂಟರೊಪೆಪ್ಟಿಡೇಸ್
(ವೈ) ಸಣ್ಣ ಕರುಳಿನ ಮೇಲ್ಭಾಗದಲ್ಲಿ ಲೋಳೆಯಂತಿರುವ ಒಂದು ಕಿಣ್ವ. ಇದು ಪ್ಯಾಂಕ್ರಿಯಾಸ್ ಉತ್ಪಾದಿಸುವ ಟ್ರಿಪ್ಸಿನೊಜೆನ್ ಎಂಬುದು ಟ್ರಿಪ್ಸಿನ್ (ಮೇದೋಜೀರಕ ರಸದ ಮುಖ್ಯ ಜೀರಕ ಕಿಣ್ವ) ಆಗಿ ಪರಿವರ್ತನೆ ಆಗುವುದನ್ನು ಚುರುಕುಗೊಳಿಸುತ್ತದೆ
enteropeptidase
ಎಂಟೆರೋಸೆಪ್ಸಿಸ್
(ವೈ) ಕರುಳಿನಲ್ಲಿ ಬ್ಯಾಕ್ಟೀರಿಯಾ ದಿಂದ ಉಂಟಾಗುವ ನಂಜು/ಕೀವು. ಕರುಳುನಂಜು
enterosepsis
ಎಂಟೆರೋಸ್ಟೋಮಿ
(ವೈ) ಕರುಳಿನಲ್ಲಿರುವ ಪದಾರ್ಥಗಳನ್ನು ವಿಸರ್ಜಿಸಲೋಸುಗ ಕರುಳಿಗೆ ಶಸ್ತ್ರಕ್ರಿಯೆಯಿಂದ ರಚಿಸಿದ ರಂಧ್ರ. ಕರುಳರಂಧ್ರ
enterostomy
ಎಂಟೆಲಿಕಿ
(ಜೀ) ಜೀವಚೈತನ್ಯವಾದದ ಪ್ರಕಾರ ಜೀವಿಗಳಲ್ಲಿ ಅಂತರ್ಗತವಾಗಿದ್ದು ಅವುಗಳ ಅಭಿವರ್ಧನೆಯನ್ನು ನಿಯಂತ್ರಿಸುವ ಬಲ. ಅರಿಸ್ಟಾಟಲ್ ಸಿದ್ಧಾಂತದ ಪ್ರಕಾರ ಅಂತಃಶಕ್ತಿಯ ಪರಿಪೂರ್ಣತಾ ಸಿದ್ಧಿ
entelechy
ಎಂಟ್ರಪಿ
(ಭೌ) ೧. ಒಂದು ವ್ಯೂಹದಲ್ಲಿಯ ಉಷ್ಣಶಕ್ತಿ ಯನ್ನು ಯಾಂತ್ರಿಕ ಶಕ್ತಿಯಾಗಿ ಮಾರ್ಪಡಿಸುವಲ್ಲಿ ಕಾರ್ಯಕ್ಕೆ ಒದಗಿ ಬರದ ಶಕ್ತಿಯ ಪರಿಮಾಣ. ಜಡೋಷ್ಣ ೨. ಅಣು, ಪರಮಾಣು ಮತ್ತಿತರ ಕಣಗಳ ಸಮೂಹ ಅಡ್ಡಾದಿಡ್ಡಿಯಾಗಿ ಚಲಿಸುತ್ತಿರುವಾಗಿನ ಚಲನೆಯ ಪರಿಮಾಣ. (ಗ) ಸಂದೇಶ ಮೊದಲಾದವುಗಳಲ್ಲಿನ ಮಾಹಿತಿ ರವಾನೆಯಾಗುವ ಪ್ರಮಾಣ, ದರ
entropy
ಎಂಡಾರ್ಚ್
(ಸ) ದಾರುವಿನ ಒಂದು ಬಗೆ. ಇದರಲ್ಲಿ ಅಕ್ಷಕೇಂದ್ರದ ಸಮೀಪದಲ್ಲಿ ಇರುವುದು ಆದಿಮದಾರು.