(ಭೌ) ಯಾವುದೇ ಕಾಯದಲ್ಲಿ ಎಲೆಕ್ಟ್ರಾನ್‌ಗಳ ಆಧಿಕ್ಯದ ಪರಿಣಾಮ. ನೋಡಿ: ಋಣಾವೇಶ. ಧನವಿದ್ಯುತು
negative electricity
ಋಣವಿದ್ಯುದ್ದ್ವಾರ
(ಭೌ) ನೋಡಿ : ಕ್ಯಾಥೋಡ್
cathode
ಋಣಾತ್ಮಕ
(ಗ) ಸೊನ್ನೆಗಿಂತ ಕಡಿಮೆ ಮೌಲ್ಯವಿರುವ, ಹಿಂಭಾಗದಲ್ಲಿ ‘-’ ಎಂಬ ಚಿಹ್ನೆ ಇರುವ ಸಂಖ್ಯೆ ಅಥವಾ ಮೊತ್ತ. (ಭೌ) ಧನಾತ್ಮಕ ಅನ್ನುವುದಕ್ಕೆ ವಿರುದ್ಧ ದಿಶೆಯಲ್ಲಿ ಮಾಡಿದ ಅಳತೆ, ಚಲನೆ ಅಥವಾ ಬದಲಾವಣೆ. ಋಣ ವಿದ್ಯುದಾವೇಶ. ಛಾಯಾಚಿತ್ರದಲ್ಲಿ ಸಹಜ ವಸ್ತುವಿನ ಅಥವಾ ದೃಶ್ಯದ ಬೆಳಕು-ನೆರಳುಗಳು ಅದಲುಬದಲಾಗಿರುವ ಚಿತ್ರ
negative
ಋಣಾವೇಶ
(ಭೌ) ಎಲೆಕ್ಟ್ರಾನ್‌ಗಳಲ್ಲಿ ನಿಹಿತವಾಗಿರುವ ವಿದ್ಯುದಾವೇಶದ ಒಂದು ಮಾದರಿ. ಉಣ್ಣೆಯಿಂದ ಉಜ್ಜುವುದರಿಂದ ಇದನ್ನು ರಾಳ ವಸ್ತುವಿನಲ್ಲಿ ಉಂಟುಮಾಡಬಹುದು
negative charge
ಋತುಗಳು
(ಖ) ಕ್ರಾಂತಿವೃತ್ತದ ಮೇಲೆ ಸೂರ್ಯನ ನಾಲ್ಕು ನಿರ್ದಿಷ್ಟ ಸ್ಥಾನಗಳನ್ನು ಅನುಸರಿಸಿ ಭೂಮಿಯಲ್ಲಿ ಪ್ರಕಟವಾಗುವ ವರ್ಷದ ನಾಲ್ಕು ಸಹಜ ವಿಭಾಗಗಳು - ವಸಂತ, ಗ್ರೀಷ್ಮ (ಬೇಸಿಗೆ) ಹಾಗೂ ಶರತ್, ಶಿಶಿರ (ಚಳಿ). ಭೂಮಿಯಲ್ಲಿ ಸ್ಥಳದ ಅಕ್ಷಾಂಶವನ್ನು ಅವಲಂಬಿಸಿ ಇನ್ನಷ್ಟು ವಿಭಾಗಗಳು ಏರ್ಪಡುತ್ತವೆ. ಭಾರತ ಕುರಿತಂತೆ ಮಾರ್ಚ್ ೨೨-ಜೂನ್ ೨೧ರ ತನಕ ವಸಂತ ಋತು, ಜೂನ್ ೨೨-ಸೆಪ್ಟೆಂಬರ್ ೨೨ರ ತನಕ ಗ್ರೀಷ್ಮಋತು, ಸೆಪ್ಟೆಂಬರ್ ೨೩-ಡಿಸೆಂಬರ್ ೨೧ರ ತನಕ ಶರದೃತು ಮತ್ತು ಡಿಸೆಂಬರ್ ೨೨- ಮಾರ್ಚ್ ೨೧ರ ತನಕ ಶಿಶಿರ ಋತು. ಇವು ಸೌರಋತುಗಳು. ಭಾರತೀಯ ಚಾಂದ್ರಮಾನ ಕ್ರಮದಲ್ಲಿ ಆರು ಋತುಗಳಿವೆ. ಇವು: ಚೈತ್ರ, ವೈಶಾಖ - ವಸಂತ; ಜ್ಯೇಷ್ಠ, ಆಷಾಢ - ಗ್ರೀಷ್ಮ; ಶ್ರಾವಣ, ಭಾದ್ರಪದ - ವರ್ಷ; ಆಶ್ವಯುಜ, ಕಾರ್ತೀಕ - ಶರತ್; ಮಾರ್ಗಶಿರ, ಪುಷ್ಯ - ಹೇಮಂತ; ಮಾಘ, ಫಾಲ್ಗುಣ - ಶಿಶಿರ
seasons
ಋತುಧರ್ಮವಿಜ್ಞಾನ
(ಭೂ) ವಾಯುಗುಣಕ್ಕೆ ಸಂಬಂಧಿಸಿದಂತೆ ಪ್ರಕೃತಿ ದೃಶ್ಯಗಳು ಅಥವಾ ಘಟನೆಗಳು ಆವರ್ತವಾಗುವ ಕಾಲಗಳನ್ನು ಕುರಿತ ಶಾಸ್ತ್ರ
phenology
ಋತು ಪ್ರವಾಸ
(ಪ್ರಾ) ಹವೆಯ ಏರಿಳಿತಗಳಿಗೆ ಅನುಸಾರವಾಗಿ ಜನ ಮತ್ತು ಜಾನುವಾರು, ಮುಖ್ಯವಾಗಿ ಕುರಿ ಮಂದೆ, ಪರ್ವತ ಪ್ರದೇಶ ಮತ್ತು ತಪ್ಪಲಿನ ಹುಲ್ಲುಗಾವಲು ಇವುಗಳ ನಡುವೆ ಆಶ್ರಯಕ್ಕಾಗಿ ಸ್ಥಳಾಂತರವಾಗುವುದು
transhumance
ಋತುಬಂಧ
(ವೈ) ಸ್ತ್ರೀಯರಲ್ಲಿ ಋತುಸ್ರಾವ (ಮುಟ್ಟು) ಸಹಜವಾಗಿ ಹಾಗೂ ಅಂತಿಮವಾಗಿ ನಿಂತು ಹೋಗುವುದು. ಇದು ಸಾಮಾನ್ಯವಾಗಿ ನಡು ವಯಸ್ಸಿನಲ್ಲಿ (೪೫ ಹಾಗೂ ೫೦ರ ನಡುವೆ) ಸಂಭವಿಸುತ್ತದೆ