logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಊರ್ಧ್ವಗಾಮಿ ಮಾರುತ
(ಪವಿ) ವಾತಾವರಣದ ತಳಪದರದಲ್ಲಿಯ ವಾಯು ಹಗಲು ವೇಳೆ ನೆಲದ ಕಾವಿನಿಂದ ಕಾದು ಹಗುರಾಗಿ ಮೇಲಿನ ಪದರಗಳತ್ತ ಸಾಗುವ, ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ಕಂಡುಬರುವ ಸ್ಥಳೀಯ ವಿದ್ಯಮಾನ
analbatic wind

ಊರ್ಧ್ವಭಂಗ
(ಭೂವಿ) ಹೆಚ್ಚು ಕಡಿಮೆ ಲಂಬದ ಉದ್ದಕ್ಕೂ ಶಿಲಾಶ್ರೇಣಿಗಳ ಕ್ಷಿತಿಜೀಯ ಪಲ್ಲಟ. (ಸ್ತರ)ಭಂಗ
tear fault

ಊರ್ಧ್ವ ಮಾರ್ಗ
(ಭೂವಿ) ಮಲಿನವಾಯುವನ್ನು ಗಣಿಯಿಂದ ಹೊರನೂಕಲು ಅನುವಾಗುವ ತೆರಪು
upcast

ಊರ್ಧ್ವಾಂಕ
(ಗ) ಬಿಂದುವಿನ y-ನಿರ್ದೇಶಕ. ಕೋಟಿ. ನೋಡಿ : ಕ್ಷಿತಿಜಾಂಕ
ordinate

ಊರ್ವಸ್ಥಿ
(ವೈ) ನೋಡಿ : ಫೀಮರ್
femur

ಊಸರವಳ್ಳಿ
(ಪ್ರಾ) ನೋಡಿ : ಗೋಸುಂಬೆ
chameleon

ಋಜುಗತಿ
(ಖ) ನೋಡಿ: ಮಾರ್ಗಚಲನೆ
direct motion

ಋಜುಗೊಳಿಸುವಿಕೆ
(ಸಾ) ನೇರ್ಪಡಿಸುವಿಕೆ, ತಿದ್ದುವಿಕೆ
rectification

ಋಜುವರ್ಣದ
(ತಂ) ನೀಲ ಹಾಗೂ ನೇರಿಳೆ ಬೆಳಕುಗಳಲ್ಲದೆ ಹಸುರು ಬೆಳಕಿಗೂ ಸಂವೇದಿಯಾಗಿದ್ದು ಬಣ್ಣಗಳ ಸರಿಯಾದ ನಿಷ್ಕೃಷ್ಟ ನಿರೂಪಣೆ ನೀಡುವ (ಛಾಯಾಚಿತ್ರ ಫಿಲ್ಮ್)
orthochromatic

ಋಣ ದ್ವಿಪದ ವಿತರಣೆ
(ಸಂ) ಯಾವುದೇ ಕೈ-ಎಸಕದಲ್ಲಿ ಗೆಲುವು/ಸೋಲು ತರಹದ ಎರಡು ಫಲಿತಗಳು ಸಾಧ್ಯವಿದ್ದು ಒಟ್ಟು ನಿಖರವಾಗಿ r ಗೆಲುವು ದೊರಕಲು ಬೇಕಾಗುವ ಕೈ ಎಸೆತಗಳ ಸಂಖ್ಯೆ x ಯಾದೃಚ್ಛಿಕ; ಯಾವುದೇ ಕೈ ಎಸಕದಲ್ಲಿ ಗೆಲುವಿನ ಸಂಭವತೆ p ಆಗಿದ್ದು, ಕೈ ಎಸಕಗಳು ಪರಸ್ಪರ ಸ್ವತಂತ್ರವಾಗಿದ್ದರೆ x ನ ಸಂಭವತಾ ವಿತರಣೆ ಇದಕ್ಕೆ ಪಾಸ್ಕಲ್ ವಿತರಣೆ ಎಂದೂ ಹೆಸರಿದೆ
negative binomial distribution


logo