(ಸ) ಉಷ್ಣದ ಆವಶ್ಯಕತೆಯುಳ್ಳ. ಉಷ್ಣದಲ್ಲಿ ಚೆನ್ನಾಗಿ ಬೆಳೆಯುವ, ಅತಿ ಉಷ್ಣತೆಗೂ ಜಗ್ಗದ ಸಸ್ಯ
thermophilic
ಉಷ್ಣಸ್ಫುರದೀಪ್ತಿ
(ಭೌ) ವಸ್ತುವಿನ ಮೇಲೆ ಬೆಳಕಿನ ಕಿರಣ ಇತ್ಯಾದಿ ಕ್ರಿಯೆ ಜರಗಿಸಿದ ಬಳಿಕ ಅದನ್ನು ಕಾಸಿದಾಗ ಅದರಿಂದ ಹೊರಸೂಸುವ ಮಂದ ಮಿನುಗು
thermophosphorescence
ಉಷ್ಣಾನುಕುಂಚನ
(ಸ) ಉಷ್ಣತೆಗೆ ಅನುಗುಣವಾಗಿ ಸಸ್ಯಗಳು ತೋರುವ ಪ್ರತಿಕ್ರಿಯೆ. ಉದಾ: ಅಸಮ ಉಷ್ಣ ವಿಸ್ತರಣೆ ಯಿಂದಾಗಿ ಕಾಂಡ ಬಾಗುವಿಕೆ. ಕ್ರೊಕಸ್, ಟ್ಯೂಲಿಪ್ ಮುಂತಾದ ಸಸ್ಯಗಳಲ್ಲಿ ಹೂ ಅರಳುವಿಕೆಯ ವೇಗ ಉಷ್ಣತೆಯನ್ನು ಅವಲಂಬಿಸಿದೆ
thermonasty
ಉಷ್ಣಾಪಾರಕ
(ಭೌ) ಉಷ್ಣದ ಗಳಿಕೆ/ಸೋರಿಕೆ ಇರದ
adiabatic
ಉಷ್ಣೋತ್ಪತ್ತಿ
(ರ) ಸಹಜ ರಾಸಾಯನಿಕ ಬದಲಾವಣೆಯಿಂದ (ಪ್ರಾಣಿಗಳ ಶರೀರದಲ್ಲಿ) ಉಷ್ಣೋತ್ಪಾದನೆ
thermogenesis
ಉಸಿರು
(ಪ್ರಾ) ಉಚ್ಛ್ವಾಸ ನಿಶ್ವಾಸ ಕ್ರಿಯೆಗಳಲ್ಲಿ ಪರಿಚಲಿಸುವ ವಾಯು
breath
ಉಸಿರುದಾಣಗಳು
(ಸಾ) ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಗಾಳಿ ಚೆನ್ನಾಗಿ ಸಂಚರಿಸಲೆಂದು ನಡುನಡುವೆ ಅಥವಾ ಹತ್ತಿರದಲ್ಲಿ ಬಿಟ್ಟಿರುವ ಬಯಲು ಪ್ರದೇಶಗಳು
lung space
ಉಸಿರೂದಿಕೆ
(ವೈ) (ವೈದ್ಯಕೀಯ ಚಿಕಿತ್ಸೆಯಲ್ಲಿ) ಜೋರಾಗಿ ಉಸಿರು ಊದುವ ಕ್ರಿಯೆ
exsufflation
ಉಸುಕಿನ ನೊಣ
(ಪ್ರಾ) ಡಿಪ್ಟಿರ ಗಣ ಹಾಗೂ ಸೈಕೊಡಿಡೀ ಕುಟುಂಬ ಫ್ಲೆಬೊಟೊಮಸ್ ಜಾತಿಗೆ ಸೇರಿದ ಕೀಟ. ಉಸುಕಿನ ನೊಣ ಜ್ವರವನ್ನು ಉಂಟು ಮಾಡುವ ಕ್ರಿಮಿಯನ್ನು ಹರಡಿ ಸಾಂಕ್ರಾಮಿಕಕ್ಕೆ ಕಾರಣವಾಗು ತ್ತದೆ. ಕಾಲಾ ಆಜಾರ್ ಎಂಬ ರೋಗವನ್ನುಂಟುಮಾಡುತ್ತದೆ. ಎರಡು ರೆಕ್ಕೆಗಳ ಈ ಕೀಟಗಳು ಸರೀಸೃಪ ಹಾಗೂ ಸ್ತನಿ ರಕ್ತವನ್ನಲ್ಲದೆ ಮನುಷ್ಯ ರಕ್ತವನ್ನೂ ಹೀರುವುವು
sand fly
ಉಳುಕು
(ವೈ) ಕೀಲುಗಳ ತಂತುಗಟ್ಟುಗಳಿಗೆ ಪೆಟ್ಟಿನ ಪರಿಣಾಮ ದಿಂದಾಗುವ ಆಘಾತ. ಉಳುಕಿದ ಕೀಲಿನಲ್ಲಿ ನೋವು ಹಾಗೂ ಕ್ರಿಯಾ ವೈಪರೀತ್ಯ ಸಾಮಾನ್ಯ. ಪೆಟ್ಟಿನ ಪ್ರಮಾಣವನ್ನು ಅವಲಂಬಿಸಿರುತ್ತವೆ. ತೀವ್ರ ಪೆಟ್ಟಿನಲ್ಲಿ ತಂತುಗಟ್ಟು ಹರಿದು ಕೀಲು ಸಂಪೂರ್ಣ ನಿಷ್ಪ್ರಯೋಜಕ ವಾಗಬಹುದು. ಹರಡುಗಳೂ, ಕೀಲುಗಳೂ ಉಳುಕುತ್ತಿರುತ್ತವೆ