logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉಷ್ಣವಿಚ್ಛೇದನೆ
(ರ) ಒಂದು ಬಗೆಯ ಪೆಟ್ರೋಲಿಯಮ್ ಸಂಸ್ಕರಣ ಪ್ರಕ್ರಿಯೆ. ಇದರಲ್ಲಿ ಕ್ರಿಯಾ ವರ್ಧಕಗಳ ನೆರವಿಲ್ಲದೆ ಉಷ್ಣಾನ್ವಯದಿಂದ ಮಾತ್ರ ಹೈಡ್ರೊ ಕಾರ್ಬನ್ ಅಣುಗಳ ವಿಘಟನೆ, ಪುನರಳವಡಿಕೆ ಅಥವಾ ಸಂಯೋಜನೆ ಮಾಡಲಾಗುವುದು
thermal cracking

ಉಷ್ಣವಿದ್ಯುತ್ತು
(ಭೌ) ಉಷ್ಣಯುಗ್ಮ ಸಾಧನ ವನ್ನು ಬಳಸಿಕೊಂಡು ಉಷ್ಣಶಕ್ತಿಯಿಂದ ಉತ್ಪಾದಿಸಿದ ವಿದ್ಯುತ್ತು
thermoelectricity

ಉಷ್ಣ ವಿಭಜನೆ
(ರ) ನಿರ್ದಿಷ್ಟ ರಾಸಾಯನಿಕ ಸಂಯುಕ್ತವನ್ನು ಕಾಸಿ ಅದರಿಂದ ಎರಡು ಅಥವಾ ಅನೇಕ ಧಾತು ಅಥವಾ ಸಂಯುಕ್ತಗಳನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ
thermal decomposition

ಉಷ್ಣ ವಿಯೋಜನೆ
(ರ) ಉಷ್ಣತೆಯ ಪ್ರಭಾವದಡಿ ಕೆಲವೊಂದು ಅಣುಗಳು ವಿಯೋಜನೆಗೊಳ್ಳುವುವು. ವಿಪರ್ಯಯವಾಗಿ ವಿಭಜನೆಯಲ್ಲಿ ಉತ್ಪನ್ನವಾದ ಪದಾರ್ಥಗಳು ಕಡಿಮೆ ಉಷ್ಣತೆಯಲ್ಲಿ ಸಂಯೋಗಗೊಂಡು ಮೂಲ ಪದಾರ್ಥ ವನ್ನು ಉತ್ಪತ್ತಿ ಮಾಡುತ್ತವೆ
thermal dissociation

ಉಷ್ಣ ವಿಶ್ಲೇಷಣೆ
(ರ) ಲೋಹಗಳಿಗೆ ಉಷ್ಣವನ್ನು ಕ್ರಮಬದ್ಧವಾಗಿ ಊಡಿದಾಗ ಇಲ್ಲವೇ ಅವುಗಳಿಂದ ಉಷ್ಣವನ್ನು ಕ್ರಮಬದ್ಧವಾಗಿ ಬಸಿದಾಗ ಅವುಗಳ ಉಷ್ಣತೆಗೂ ಅವುಗಳಲ್ಲಾಗುವ ರಾಚನಿಕ ವ್ಯತ್ಯಯಗಳಿಗೂ ನಡುವಿನ ಸಂಬಂಧದ ಅಧ್ಯಯನ
thermal analysis

ಉಷ್ಣ ಸಂಕ್ರಮಣ ಸ್ತರ
(ಸಾವಿ) ಸರೋವರದಲ್ಲಿ ಆಧಿಸ್ತರ ಮತ್ತು ಕೆಳಸ್ತರಗಳ ನಡುವಿನ ಮಧ್ಯಸ್ತರ. ಇಲ್ಲಿ ಉಷ್ಣತೆ ಯಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ. ೧ ಮೀ ಆಳ ಹೆಚ್ಚಾದಂತೆ ೧0 ಸೆ ಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ.
thermocline

ಉಷ್ಣ ಸಂದೀಪ್ತಿ
(ಭೌ) ಅಯಾನೀಕಾರಕ ವಿಕಿರಣಕ್ಕೆ ಒಡ್ಡಿದುದರ ಪರಿಣಾಮವಾಗಿ ಘನ ಪದಾರ್ಥದೊಳಗೆ ಸೆರೆಹಿಡಿಯಲ್ಪಟ್ಟಿದ್ದ ಮುಕ್ತ ಎಲೆಕ್ಟ್ರಾನ್‌ಗಳು ಆ ಪದಾರ್ಥದ ಉಷ್ಣತೆ ಯನ್ನು ಹೆಚ್ಚಿಸಿದಾಗ, ಪರಸ್ಪರ ಒಂದುಗೂಡಿ ಆಗುವ ಫೋಟಾನ್ ಗಳ ಉತ್ಸರ್ಜನೆ. ಪಳೆಯುಳಿಕೆಗಳ ಕಾಲ ನಿರ್ಧಾರದಲ್ಲಿ ಬಳಕೆ
thermoluminiscence

ಉಷ್ಣ ಸಂವಹನ
(ರ) ಉಷ್ಣಶಕ್ತಿ ಸಂಗ್ರಹ ಆಗಿರುವ ವಸ್ತು (ಅನಿಲ ಅಥವಾ ದ್ರವ) ಒಂದು ನೆಲೆಯಿಂದ ಇನ್ನೊಂದು ನೆಲೆಗೆ ವಾಸ್ತವ ಭೌತ ಚಲನೆಯ ಮೂಲಕ ಸಾಗಿದಾಗ ಆಗುವ ಉಷ್ಣ ವರ್ಗಾವಣೆ
thermal convection

ಉಷ್ಣ ಸಂಸ್ಕರಣೆ
(ತಂ) ಲೋಹ, ಮಿಶ್ರ ಲೋಹ ಮುಂತಾದ ಪದಾರ್ಥಗಳಿಗೆ ಉದ್ದಿಷ್ಟ ಗುಣಗಳನ್ನು ನೀಡಲು ಅವನ್ನು ಪರ್ಯಾಯವಾಗಿ ಕಾಸುವ ಹಾಗೂ ತಂಪು ಮಾಡುವ ಕ್ರಿಯೆಗೆ ಒಳಪಡಿಸುವುದು
heat treatment

ಉಷ್ಣಸ್ಥಿರ
(ರ) ಉಷ್ಣದಿಂದ ವಿಘಟನೆ ಹೊಂದದ ಪದಾರ್ಥ
thermostable


logo