logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉಷ್ಣ ಪರಿವರ್ತನೆ
(ಭೌ) ಯಾವುದೇ ಪದಾರ್ಥಕ್ಕೆ ಉಷ್ಣ ಒದಗಿಸಿ ಅದನ್ನು ಬೇರೆ ಪದಾರ್ಥವಾಗಿ ಇಲ್ಲವೆ ಪದಾರ್ಥಗಳಾಗಿ ಬೇರ್ಪಡಿಸುವ ಅಥವಾ ಮಾರ್ಪಡಿಸುವ ಪ್ರಕ್ರಿಯೆ. ಉಷ್ಣದ ಜೊತೆ ಬೇರೆ ಒಂದು ಪದಾರ್ಥವನ್ನೂ ಒದಗಿಸಿ ರಾಸಾಯನಿಕ ಪರಿವರ್ತನೆ ಮಾಡಿದರೆ ಅದು ಉಷ್ಣ ಪರಿವರ್ತನೆ ಎನ್ನಿಸದು. ದಹನ (combustion) ಮತ್ತು ಹೈಡ್ರೊಜನೀಕರಣ (hydrogenation) ಉಷ್ಣ ಪರಿವರ್ತನೆಗಳಲ್ಲ. ಕಲ್ಲಿದ್ದಲನ್ನು ವಿವಿಧ ಉಷ್ಣತೆಗಳಲ್ಲಿ ಕಾಸಿ ಪಡೆಯುವ ವಿವಿಧ ಉತ್ಪನ್ನಗಳಿವೆ: ಕೋಕ್, ಕಲ್ಲಿದ್ದಲ ಅನಿಲ, ಕಲ್ಲಿದ್ದಲು ಡಾಮರು ಇತ್ಯಾದಿ. ಈ ಪ್ರಕ್ರಿಯೆಗಳಲ್ಲಿ ಬಳಕೆಯಾಗು ವುದನ್ನು ಉಷ್ಣಪರಿವರ್ತನೆ ಎನ್ನಲಾಗುತ್ತದೆ
pyrolysis

ಉಷ್ಣಪಾರಕ
(ಭೌ) ಉಷ್ಣ (ವಿಕಿರಣ)ವನ್ನು ತನ್ನ ಮೂಲಕ ಹಾಯಗೊಡುವ. ಉಷ್ಣಭೇದ್ಯ. ಬೆಳಕಿನ ಪಾರಕತೆಗೆ ಸದೃಶವಾದ ಗುಣ
diathermic

ಉಷ್ಣ ಬಲವಿಜ್ಞಾನ
(ಭೌ) ಉಷ್ಣಕ್ಕೂ ಶಕ್ತಿಯ ಇತರ ರೂಪಗಳಾದ ವಿದ್ಯುಚ್ಛಕ್ತಿ, ಯಾಂತ್ರಿಕ ಶಕ್ತಿ ಮೊದಲಾದವು ಗಳಿಗೂ ಇರುವ ಸಂಬಂಧವನ್ನು ಕುರಿತ ವಿಜ್ಞಾನ ಶಾಖೆ. ಎರಡು ವ್ಯವಸ್ಥೆಗಳಲ್ಲಿ ಒಂದೊಂದೂ ಮೂರನೆಯ ಒಂದು ವ್ಯವಸ್ಥೆ ಯೊಂದಿಗೆ ಉಷ್ಣ ಸಮತೋಲನ ಸ್ಥಿತಿಯಲ್ಲಿದ್ದರೆ ಆಗ ಅವು ಪರಸ್ಪರ ಉಷ್ಣ ಸಮತೋಲನ ಸ್ಥಿತಿಯಲ್ಲಿರುತ್ತವೆ ಎಂಬುದು ಇದರಲ್ಲಿ ಬರುವ ಜೀರೋತ್ ನಿಯಮ. ಉಷ್ಣ ಮತ್ತು ಕಾಯಗಳ ನಡುವಿನ ಪರಸ್ಪರ ಸಂಬಂಧ, ವಿವಿಧ ಪರಿಸ್ಥಿತಿಗಳಲ್ಲಿ ಉಷ್ಣ ಪ್ರವಾಹದಿಂದ ಆಗುವ ಪರಿಣಾಮ ಮುಂತಾದವುಗಳ ಶಾಸ್ತ್ರೀಯ ಅಧ್ಯಯನ. ಅವಿಪರ್ಯಯಶೀಲವೆಂಬ ವಾಸ್ತವಿಕ ಕ್ರಿಯೆಗಳಿಗೂ ವಿಪರ್ಯಯ ಶೀಲವೆಂಬ ಆದರ್ಶೀಕೃತ ಕ್ರಿಯೆಗಳಿಗೂ ನಡುವೆ ಸ್ಪಷ್ಟ ಮತ್ತು ವ್ಯವಸ್ಥಿತ ವ್ಯತ್ಯಾಸವನ್ನು ಉಷ್ಣಬಲ ವಿಜ್ಞಾನ ಗುರುತಿಸುತ್ತದೆ. ಇದರ ಅಡಿಯಲ್ಲಿ ಕೆಲವು ಮೂಲಭೂತ ನಿಯಮಗಳಿವೆ: ಮೊದಲನೆಯದು, ಶಕ್ತಿ ಸಂರಕ್ಷಣೆಗೆ ಸಂಬಂಧಿಸಿದುದು. ಎರಡನೆಯದು, ನಿಮ್ನ ಉಷ್ಣತೆಯಲ್ಲಿರುವ ಒಂದು ವಸ್ತುವಿನಿಂದ ಉಚ್ಚ ಉಷ್ಣತೆಯಲ್ಲಿರುವ ಇನ್ನೊಂದಕ್ಕೆ ಉಷ್ಣ ತನ್ನಷ್ಟಕ್ಕೇ ಎಂದೂ ಹರಿಯಲಾರದೆಂದು ಹೇಳುತ್ತದೆ. ವಸ್ತುವೊಂದರ ಉಷ್ಣತೆಯು ನಿರಪೇಕ್ಷ ಶೂನ್ಯ ಸಮೀಪಿಸಿದಂತೆ ಅದರ ಎಂಟ್ರಪಿ (ನೋಡಿ)ಯು ಶೂನ್ಯ ಸಮೀಪಿಸುತ್ತದೆ ಎಂದು ಮೂರನೆಯ ನಿಯಮ ತಿಳಿಸುತ್ತದೆ
thermodynamics

ಉಷ್ಣಬೈಜಿಕ ಕ್ರಿಯೆ
(ಭೌ) ಲಘು ಧಾತುಗಳು ಅತ್ಯುಚ್ಚ ಉಷ್ಣತೆಯಲ್ಲಿರುವ ಅನಿಲದ ವಿವಿಧ ಘಟಕಗಳಾಗಿರುವಾಗ ಅವುಗಳ ಬೀಜಗಳ ನಡುವೆ ಸಂಭವಿಸುವ ಬೈಜಿಕ ಸಂಲಯನ ಕ್ರಿಯೆ
thermonuclear reaction

ಉಷ್ಣಯುಗ್ಮ
(ಭೌ) ಉಷ್ಣ ವಿದ್ಯುತ್ ಸಾಧನ. ಇದರಲ್ಲಿ ಸದೃಶವಲ್ಲದ ಎರಡು ವಾಹಕಗಳಿವೆ. ಇವನ್ನು ಇವುಗಳ ಕೊನೆಗಳಲ್ಲಿ ಕೂಡಿಸಿದೆ. ಈ ಎರಡು ಕೂಡಿಕೆಗಳ ನಡುವೆ ಉಂಟಾಗುವ ಉಷ್ಣ ವಿದ್ಯುತ್ ವೋಲ್ಟೇಜ್ ಇವುಗಳ ಉಷ್ಣತಾ ವ್ಯತ್ಯಯಕ್ಕೆ ಅನುಪಾತೀಯವಾಗಿರುವುದು. ಹಾಗಾಗಿ ಒಂದು ಕೂಡಿಕೆಯನ್ನು ಗೊತ್ತಾದ ನಿರ್ದಿಷ್ಟ ಉಷ್ಣತೆಯಲ್ಲಿಟ್ಟು ಇನ್ನೊಂದರಲ್ಲಿಯ ಉಷ್ಣತೆಯನ್ನು ಅಳೆಯಬಹುದು
thermocouple

ಉಷ್ಣ ರಸಾಯನವಿಜ್ಞಾನ
(ರ) ರಾಸಾಯನಿಕ ಕ್ರಿಯೆಗಳಲ್ಲಿಯೂ ಸ್ಥಿತಿ ವ್ಯತ್ಯಯಗಳಲ್ಲಿಯೂ ಪ್ರಕಟವಾಗುವ ಉಷ್ಣ ವ್ಯತ್ಯಯಗಳ ಮಾಪನೆ, ವ್ಯಾಖ್ಯಾನ ಮತ್ತು ವಿಶ್ಲೇಷಣೆ ಮಾಡುವ ರಸಾಯನ ವಿಜ್ಞಾನ ಶಾಖೆ
thermochemistry

ಉಷ್ಣರಾಸಾಯನಿಕ
(ರ) ಉನ್ನತ ಉಷ್ಣತೆಯಲ್ಲಿ ರಾಸಾಯನಿಕ ಕ್ರಿಯೆ ಜರಗಿಸುವುದು
pyrochemical

ಉಷ್ಣವಹನ
(ಭೌ) ವಸ್ತುವಿನಿಂದ ಪ್ರೇಷಿತ ವಾದ ಉಷ್ಣ ಪರಿಮಾಣವನ್ನು ಆ ವಸ್ತುವಿನ ಮೇಲ್ಮೈಗಳಲ್ಲಿಯ ಉಷ್ಣತಾ ವ್ಯತ್ಯಾಸದಿಂದ ಭಾಗಿಸಿದಾಗ ದೊರೆಯುವ ಲಬ್ಧ
thermal conductance

ಉಷ್ಣವಾಹಕತೆ
(ಭೌ) ಅಣುವಿನಿಂದ ಅಣುವಿಗೆ ಸಾಗುವುದರಿಂದಾಗಿ ಉಷ್ಣವು ಪದಾರ್ಥದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗುವುದು
thermal conductance

ಉಷ್ಣವಾಹಕ ಸಾಮರ್ಥ್ಯ
(ಭೌ) ಯಾವುದೇ ಮೇಲ್ಮೈಯ ಅಡ್ಡಕ್ಕೆ ಏಕಮಾನ-ಸಲೆ ಏಕಮಾನ-ಕಾಲ ದಲ್ಲಿ ಪ್ರವಹಿಸುವ ಉಷ್ಣ ಪರಿಮಾಣವನ್ನು ಆ ಮೇಲ್ಮೈಗೆ ಲಂಬ ದಿಶೆಯಲ್ಲಿ ದೂರದೊಂದಿಗೆ ಉಷ್ಣತಾ ವ್ಯತ್ಯಯ ದರದ ಋಣ ಮೌಲ್ಯದಿಂದ ಭಾಗಿಸಿದಾಗ ದೊರೆಯುವ ಲಬ್ಧ
thermal conductivity


logo