logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉಷ್ಣತರಂಗ
(ಭೌ) ಕೆಂಪು ಬಣ್ಣದ ಅಲೆಯುದ್ದಕ್ಕಿಂತ ನೀಳ ಅಲೆಯುದ್ದವಿರುವ ವಿಕಿರಣ ಭಾಗ, ಬರಿಗಣ್ಣಿಗೆ ಅಗೋಚರ, ಇದು ಅವಗೆಂಪು ವಿಕಿರಣ. (ಸಾ) ಬೇಸಗೆಯಲ್ಲಿ ಬಿಸಿಲ ಝಳ ಅಸಹನೀಯವಾದಾಗ ಉಷ್ಣತರಂಗ ಬಡಿದಿದೆ ಎನ್ನಲಾಗುತ್ತದೆ
heat wave

ಉಷ್ಣತಾಮಾಪಕ
(ಭೌ) ತಾಪಮಾಪಕ. ನೋಡಿ: ಥರ್ಮಾಮೀಟರ್
thermometer

ಉಷ್ಣತೆ
(ಭೌ) ವಸ್ತುವಿನಲ್ಲಿಯ ಅಣು, ಪರಮಾಣು ಅಥವಾ ಅಯಾನ್‌ಗಳ ಚಲನ ಶಕ್ತಿ. (ಇದು ಉಷ್ಣ) ಮಟ್ಟದ ಸೂಚಕ. ಎರಡು ವಸ್ತುಗಳ ನಡುವೆ ಉಷ್ಣ ವರ್ಗಾವಣೆಯನ್ನು ನಿಯಂತ್ರಿಸುವ ಆಯಾ ವಸ್ತುವಿನ ಗುಣ ಅದರ ಉಷ್ಣತೆ: ಹೆಚ್ಚು ಉಷ್ಣತೆಯ ವಸ್ತುವಿನಿಂದ ಕಡಿಮೆ ಉಷ್ಣತೆಯದಕ್ಕೆ ಉಷ್ಣ ಹರಿಯುತ್ತದೆ. (ವೈ) ಆರೋಗ್ಯಸ್ಥಿತಿಯಲ್ಲಿರುವ ವ್ಯಕ್ತಿಯ ದೇಹೋಷ್ಣತೆ ಸುಮಾರು ೩೭0 ಸೆ. (೯೮.೪0 ಫ್ಯಾರನ್‌ಹೈಟ್)
temperature

ಉಷ್ಣ ದಕ್ಷತೆ
(ಭೌ) ಉಷ್ಣ ಎಂಜಿನ್‌ನಲ್ಲಿ ಆ ಎಂಜಿನ್ ಮಾಡಿದ ಕಾರ್ಯಕ್ಕೂ ಅದಕ್ಕೆ ಉಗಿ/ಇಂಧನದ ಮೂಲಕ ಊಡಿದ ಉಷ್ಣದ ಯಾಂತ್ರಿಕ ಸಮಾನಕ್ಕೂ ನಡುವಿನ ದಾಮಾಷಾ
thermal efficiency

ಉಷ್ಣದ ಪರಿಮಾಣ
(ಭೌ) ಉಷ್ಣಶಕ್ತಿಯ ಅಳತೆ : ಕ್ಯಾಲರಿ. ೧ ಗ್ರಾಮ್ ನೀರಿನ ಉಷ್ಣತೆಯನ್ನು ೧0 ಸೆ.ನಷ್ಟು ಏರಿಸಲು ಬೇಕಾಗುವ ಉಷ್ಣದ ಪರಿಮಾಣವೇ ಕ್ಯಾಲರಿ
quantity of heat

ಉಷ್ಣದ ಯಾಂತ್ರಿಕ ಸಮಾನ
(ಭೌ) H ಏಕಮಾನಗಳಷ್ಟು ಉಷ್ಣಶಕ್ತಿಯು W ಏಕಮಾನಗಳಷ್ಟು ಯಾಂತ್ರಿಕ ಶಕ್ತಿಯಾಗಿ ಪೂರ್ಣ ಪರಿವರ್ತನೆಗೊಂಡರೆ ಆಗ W=jh. ಇಲ್ಲಿ j ಉಷ್ಣದ ಯಾಂತ್ರಿಕ ಸಮಾನ. ಇದೊಂದು ಸ್ಥಿರಾಂಕ = ೪.೧೮೫ ಜೂಲ್/ಕ್ಯಾಲರಿ
mechanical equivalent of heat

ಉಷ್ಣದೀಪ್ತಿ
(ಭೌ) ಯಾವುದೇ ಅಲೆಯುದ್ದದ ವಿಕಿರಣವನ್ನು ಹೀರಿಕೊಂಡ ಒಂದು ಪದಾರ್ಥ ಅದನ್ನು ಹ್ರಸ್ವತರ ವಿಕಿರಣವಾಗಿ ಉತ್ಸರ್ಜಿಸುವುದು
calorescence

ಉಷ್ಣದ್ಯುತಿಮಾಪಕ
(optical pyrometer) (ಭೌ) ಕುಲುಮೆಗಳಲ್ಲಿನ ಅತಿ ಹೆಚ್ಚಿನ ಉಷ್ಣತೆಗಳನ್ನು ಅಳೆಯಲು ಬಳಸುವ ಉಪಕರಣ. ಉಷ್ಣ ವಿಕಿರಣದ ವರ್ಣವನ್ನು ಅಂದಾಜು ಮಾಡಿ (ಸಾಮಾನ್ಯವಾಗಿ ಕೆಂಪುಬಣ್ಣದ ತೀವ್ರತೆ) ಅಥವಾ ವಿಕಿರಣದ ವರ್ಣವನ್ನು ಪ್ರಜ್ವಲಿಸುವ ತಂತುವಿನ ವರ್ಣ ದೊಂದಿಗೆ ಹೋಲಿಸುವ ಮೂಲಕ ಅದು ಈ ಕಾರ್ಯ ಎಸಗುತ್ತದೆ
pyrophotometer

ಉಷ್ಣಧಾರಕತೆ
(ಭೌ) ವ್ಯವಸ್ಥೆಯ ಉಷ್ಣತೆಯನ್ನು ೧0ಸೆನಷ್ಟು ಹೆಚ್ಚಿಸಲು ಅವಶ್ಯವಾದ ಉಷ್ಣಶಕ್ತಿ. ಎಸ್‌ಐ ಏಕಮಾನ jk-1
thermal capacity

ಉಷ್ಣಪಟ್ಟಿ
(ಭೂವಿ) ಪರ್ವತ ಪ್ರದೇಶದಲ್ಲಿ ಉನ್ನತಿ ಯೊಂದಿಗೆ ಸಂಭವಿಸುವ ಉಷ್ಣತಾ ವ್ಯತ್ಯಯದ ಪರಿಣಾಮವಾಗಿ ಸಸ್ಯ ಸಮುದಾಯದಲ್ಲಿ ಪ್ರಕಟವಾಗುವ ಕ್ಷಿತಿಜೀಯ ಮಾರ್ಪಡಿಕೆ. ಅಂದರೆ ಒಂದೊಂದು ಮಟ್ಟದಲ್ಲಿ ಗಿಡ ಮರಗಳ ಒಂದೊಂದು ಪಟ್ಟಿ ಬೆಳೆದಿರುತ್ತದೆ
thermal belt


logo