logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉರಿಶೀತ
(ವೈ) ಮೂಗು ಹಾಗೂ ಗಂಟಲಿನ ಲೋಳೆ ಪೊರೆಯ ಸೋಂಕಿನ ಕಾರಣವಾಗಿ ಸೀನು, ಸಿಂಬಳ ಸುರಿತ, ಗಂಟಲು ಕೆರೆತ ಮುಂತಾದ ಅಹಿತಕರ ಅನುಭವಗಳು
catarrh

ಉರುಗೊರಲು
(ವೈ) ನೋಡಿ : ಟಾರ್ಟಿಕೋಲಿಸ್
wryneck

ಉರುವಲು
(ಭೌ) ನೋಡಿ: ಇಂಧನ
fuel

ಉರುಳು
(ತಂ) ವಿಮಾನ ಅಥವಾ ಅಂಥದೇ ಕಾಯ ತನ್ನ ದೀರ್ಘ ಅಕ್ಷದ ಸುತ್ತ ನಡೆಸುವ ಆವರ್ತಕ ಅಥವಾ ಆಂದೋಲಕ ಚಲನೆ. ಹೊರಳು
roll

ಉರುಳುಹಕ್ಕಿ
(ಪ್ರಾ) ಕಾರಸೈಯಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ೧೬ ಪ್ರಭೇದಗಳಿವೆ. ಕೀಟಾಹಾರಿಗಳು. ಹಾರುವಾಗ ಗಾಳಿಯಲ್ಲಿ ದೇಹವನ್ನು ಉರುಳಿಸುವುದರಿಂದ ಇವಕ್ಕೆ ಈ ಹೆಸರು. ಕೊರೇಸಿಯಸ್ ಇಂಡಿಕ ವನ್ನು ಭಾರತದ ಬ್ಲೂ ಜೇ ಎಂದು ಕರೆಯುತ್ತಾರೆ
roller bird

ಉರುಳೆ
(ಗ) ನೋಡಿ : ಸಿಲಿಂಡರ್
cylinder

ಉರುಳೆ
(ಎಂ) ಮಣ್ಣಿನ ಮತ್ತು ರಸ್ತೆಯ ಪದರುಗಳನ್ನು ಸಮರ್ಪಕವಾಗಿ ಅಡಕಿಸಲು ಬಳಸುವ ದುಂಡು ಆಕೃತಿಯ ಉಪಕರಣ; ಇವುಗಳನ್ನೇ ಚಕ್ರಗಳಾಗಿ ಹೊಂದಿರುವ ಯಂತ್ರ ಗಳನ್ನು ಯಾಂತ್ರಿಕ ಉರುಳೆ ಎನ್ನುತ್ತಾರೆ. ಈಚೆಗೆ ಅಣೆಕಟ್ಟುಗಳ ನಿರ್ಮಾಣದಲ್ಲಿ ಕಾಂಕ್ರೀಟನ್ನು ಅಡಕಿಸಲು ಉರುಳೆಗಳನ್ನು ಬಳಸುತ್ತಾರೆ. ಇದರ ತೂಕ ಸುಮಾರು ೧೦ ಟನ್ನು
roller

ಉರ್ಚುವಿಕೆ
(ಪ್ರಾ) ನೋಡಿ: ಪೊರೆಬಿಡುವಿಕೆ
ecdysis

ಉಲ್ಕಾಪಿಂಡ
(ಖ) ಗ್ರಹಗಳ ನಡುವಿನ ಆಕಾಶದಿಂದ ಬಿದ್ದು ಭೂಮಿ ತಲಪಿದ, ಅಂತರಿಕ್ಷ ಮೂಲದ, ಖನಿಜಯುತ ಸಮಷ್ಟಿ. ಇವುಗಳಲ್ಲಿ ಎರಡು ವಿಧ. ಒಂದು, ಶಿಲೆಗಳನ್ನು ರೂಪಿಸುವ ಸಿಲಿಕೇಟ್‌ಗಳನ್ನು ಒಳಗೊಂಡಿರು ವಂತಹವು. ಉದಾ : ಕಾಂಡ್ರೈಟ್, ಏರಲೈಟ್; ಇನ್ನೊಂದು, ಹೆಚ್ಚಾಗಿ ಕಬ್ಬಿಣ ಹೊಂದಿರುವವು. ಅತ್ಯಂತ ದೊಡ್ಡ ಉಲ್ಕಾಪಿಂಡ ೧೦೦ ಟನ್ ತೂಗಬಹುದು; ಪ್ರತಿ ದಿನವೂ ಸುಮಾರು ಒಂದು ಮಿಲಿಯನ್ ಉಲ್ಕಾಪಿಂಡಗಳು ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತವೆ ಮತ್ತು ಸುಮಾರು ೧೦ ಟನ್ ಉಲ್ಕಾಪಿಂಡ ಸಾಮಗ್ರಿ ಭೂಮಿಯ ಮೇಲ್ಮೈ ಮೇಲೆ ಬೀಳುತ್ತದೆ. ನೋಡಿ : ಉಲ್ಕೆ, ಬೋಲೈಡ್
meteorite

ಉಲ್ಕಾಶ್ಮ
(ಭೂವಿ) ಶಿಲಾ ಉಲ್ಕಾಪಿಂಡಗಳ ಸಾಮಾನ್ಯ ನಾಮ, ಕಬ್ಬಿಣ ಉಲ್ಕಾಪಿಂಡಗಳಿಂದ ಭಿನ್ನ
aerolite


logo