logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉಭಯಲಿಂಗರೂಪಿ
(ಜೀ) ಗಂಡು ಮತ್ತು ಹೆಣ್ಣು ಎರಡರ ಲಕ್ಷಣಗಳನ್ನೂ ತೋರುವ ಅಂಗಗಳುಳ್ಳ ಪ್ರಾಣಿ, ವ್ಯಕ್ತಿ. ಮುಖ್ಯವಾಗಿ ಕೀಟಗಳು. ದ್ವಿಲಿಂಗಿ
gynandromorph

ಉಭಯಲಿಂಗಿ
(ಸ) ಒಂದೇ ಕಾಂಡದಲ್ಲಿ ಗಂಡು ಮತ್ತು ಹೆಣ್ಣು ಹೂಗಳನ್ನು ಪ್ರತ್ಯೇಕವಾಗಿ ಬಿಡುವ ಸಸ್ಯ. ದ್ವಿಲಿಂಗಿ
androgyne

ಉಭಯಲಿಂಗಿ
(ಪ್ರಾ) ಸಹಜವಾಗಿಯೇ ಸ್ತ್ರೀ ಮತ್ತು ಪುರುಷ ಜನನಾಂಗಗಳೆರಡೂ ಇರುವ ಪ್ರಾಣಿ. ಉದಾ : ಮಣ್ಣು ಹುಳು (ಸ) ಒಂದೇ ಹೂವಿನಲ್ಲಿ ಪುಂಕೇಸರ ಮತ್ತು ಶಲಾಕೆ ಗಳೆರಡೂ ಇರುವ ಸಸ್ಯ. (ವೈ) ಅಂಡಾಶಯದ ಊತಕ, ವೃಷಣದ ಊತಕ ಎರಡೂ ಉಳ್ಳ ಲೈಂಗಿಕ ಅಂಗವಿರುವ ವ್ಯಕ್ತಿ
hermaphrodite

ಉಭಯವರ್ತಿ
(ಮ) ಅಂತರ್ವರ್ತಿಯ ಹಾಗೂ ಬಹಿರ್ವರ್ತಿಯ ವೈಲಕ್ಷಣ್ಯಗಳನ್ನು ಉಳ್ಳವನು
ambivert

ಉಭಯಹಸ್ತ ಕೌಶಲ
(ವೈ) ನೋಡಿ: ಸವ್ಯಸಾಚಿತ್ವ
ambidexterity

ಉಭಯಾಗ್ರ
(ಗ) ಇದೊಂದು ದ್ವಿಮಡಿ (ಇಮ್ಮಡಿ) ಬಿಂದು. ಇದರಲ್ಲಿ ವಕ್ರರೇಖೆಗೆ ಎಳೆದ ಎರಡು ಸ್ಪರ್ಶಕಗಳು ಐಕ್ಯವಾಗುತ್ತವೆ. ನೋಡಿ: ಬಹುಮಡಿ ಬಿಂದು
cusp

ಉರಗಪಕ್ಷಿ
(ಪ್ರಾ) ಉರಗವರ್ಗ, ಡೈ ಆಪ್ಸಿಡ ಉಪವರ್ಗ, ಟಿರೊಸಾರಿಯ ಗಣದ ಗತವಂಶಿ ಪ್ರಾಣಿಗಳು. ಕೆಳ ಜುರಾಸಿಕ್ ಯುಗದಲ್ಲಿ ಅಸ್ತಿತ್ವಕ್ಕೆ ಬಂದ ಈ ಪ್ರಾಣಿಗಳು ಮಧ್ಯ ಜೀವಿಕಲ್ಪದ ಕೊನೆಯ ವರೆಗೂ ಬಾಳಿದ್ದುದಕ್ಕೆ ಆಧಾರಗಳು ಲಭ್ಯವಿವೆ. (ಸುಮಾರು ೧೭೦ರಿಂದ ೬೫ ಮಿಲಿಯನ್ ವರ್ಷ ಪ್ರಾಚೀನ ಕಾಲ). ದೇಹದ ಪಕ್ಕವನ್ನೂ ತೋಳನ್ನೂ ಸೇರಿಸುವ ಪೊರೆಯ ನೆರವಿನಿಂದ ಹಾರುತ್ತಿದ್ದ ಹಕ್ಕಿಯಂಥ ಸರೀಸೃಪ
pterodactyl

ಉರಿಮೂತ್ರ
(ವೈ) ನೋವಿನಿಂದ ಕೂಡಿದ ಕಷ್ಟಕರ ಮೂತ್ರ ವಿಸರ್ಜನೆ. ಅನೇಕ ಮೂತ್ರರೋಗಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ. ಮೂತ್ರನಾಳದಲ್ಲಿರುವ ಸೋಂಕು, ಮೂತ್ರನಾಳಗಳ ಮಾರ್ಗದೋಷಗಳು, ಶುಕ್ಲ ಗ್ರಂಥಿಯ ಅತಿವೃದ್ಧಿ, ಅರ್ಬುದ, ಹುಣ್ಣು ಇವೆಲ್ಲ ಪುರುಷರಲ್ಲಿ ಮೂತ್ರಬಂಧಕ್ಕೆ ಕಾರಣವಾಗಬಹುದು. ಸ್ತ್ರೀಯರಲ್ಲಿ ಗರ್ಭಕೋಶದ ತೊಂದರೆಗಳು, ಕೀವು, ಗರ್ಭಕೊರಳ ಅರ್ಬುದ ಇತ್ಯಾದಿಗಳಲ್ಲಿ ಕಂಡುಬರುತ್ತದೆ. ಕೆಲವು ಔಷಧಗಳು ಹಾಗೂ ನೀರಿನ ಕೊರತೆ ಮೂತ್ರ ಕಟ್ಟಿಗೆ ಕಾರಣವಾಗಬಹುದು
dysuria

ಉರಿಯೂತ
(ವೈ) ದೇಹಭಾಗದಲ್ಲಿ ಪೆಟ್ಟು ಅಥವಾ ಸೋಂಕಿನಿಂದ ರಕ್ತ ಕಟ್ಟಿ ನೋವು ಉರಿಗಳಿಂದ ಕೂಡಿದ ಊತ. ಜೀವಂತ ಊತಕವು ಗಾಯಕ್ಕೆ ಅಥವಾ ಸೋಂಕಿಗೆ ತೋರುವ ಪ್ರತಿಕ್ರಿಯೆ. ಬಾಧೆಗೆ ಒಳಗಾದ ಭಾಗ ಕೆಂಪಾಗಿ, ಬಿಸಿಯಾಗಿ, ನೋವಿನಿಂದ ಕೂಡಿ ಊದಿರುತ್ತದೆ. ರಕ್ತನಾಳಗಳು ಮಿತಿಮೀರಿ ರಕ್ತದಿಂದ ತುಂಬಿಕೊಳ್ಳುವುದು, ದುಗ್ಧರಸ ಹೊರಹರಿದು ರಕ್ತಕೋಶಗಳ ಒಳಕ್ಕೆ ಸೇರಿಕೊಳ್ಳುವುದು ಈ ಕೆಂಪಿಗೆ ಮತ್ತು ಉರಿಯೂತಕ್ಕೆ ಕಾರಣ
inflammation

ಉರಿವೇದನೆ
(ವೈ) ಶರೀರದ ಯಾವುದೇ ಭಾಗದಲ್ಲಿ ನರಕ್ಕೆ ಧಕ್ಕೆ ಉಂಟಾದಾಗ ಆ ಭಾಗದ ಚರ್ಮದಲ್ಲಿ ತಲೆದೋರುವ ಉಗ್ರ ಉರಿನೋವು. ವಿಶೇಷವಾಗಿ ಪಾದತಲದಲ್ಲಿ ಅಥವಾ ಅಂಗೈಯಲ್ಲಿ ಮಾನಸಿಕ ಇಲ್ಲವೇ ಜೈವಿಕ ಮೂಲದ ಉರಿ ನೋವು
causalgia


logo