logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉಪಲಕ್ಷಣ
(ವೈ) ಶರೀರದಲ್ಲಿ ಯಾವುದೇ ರೋಗವಿದ್ದಾಗ, ಆ ರೋಗಕ್ಕೆ ಕಾರಣವಲ್ಲದ, ಆ ರೋಗದ ಪರಿಣಾಮವಲ್ಲದ ಒಂದು ಲಕ್ಷಣ
apiphenomenon

ಉಪವರ್ಗ
(ಜೀ) ಜೀವವೈಜ್ಞಾನಿಕ ವರ್ಗೀಕರಣದಲ್ಲಿ ವರ್ಗಕ್ಕಿಂತ (class) ಕೆಳಗಿರುವ ಮತ್ತು ಗಣಕ್ಕಿಂತ (order) ಮೇಲಿರುವ ವಿಭಾಗ
subclass

ಉಪವಿಷಮಶೀತ ಜ್ವರ
(ವೈ) ವಿದೇಶಗಳಲ್ಲಿ ಸ್ವಲ್ಪ ವಿರಳವಾದ ಆದರೆ ಭಾರತದಲ್ಲಿ ಕಂಡುಬರುವ ಜಠರ ಹಾಗೂ ಕರುಳಿಗೆ ಸಂಬಂಧಿಸಿದ ಸೋಂಕಿನ ಫಲವಾಗಿ ತಲೆದೋರುವ ಜ್ವರ. ಜ್ವರ, ಹೊಟ್ಟೆನೋವು, ಭೇದಿ ಹಾಗೂ ತಲೆನೋವು ಇದರ ಮುಖ್ಯ ಲಕ್ಷಣಗಳು. ಕೆಲವು ಸಲ ಸೋಂಕಿನ ಫಲವಾಗಿ ಕರುಳು ತೂತಾಗಿ ಗಂಭೀರ ಸ್ಥಿತಿ ಏರ್ಪಡಬಹುದು. ಈ ಜ್ವರಕ್ಕೆ ಕಾರಣ ಸಾಲ್ಮೊನೆಲ್ಲ ಪ್ಯಾರಟೈಫಿ (ಎ ಮತ್ತು ಬಿ ನಮೂನೆಯವು). ಈ ಸೋಂಕು ನಿಯಂತ್ರಣಕ್ಕೆ ಈಗ ಉತ್ತಮ ಔಷಧಗಳಿವೆ. ನೋಡಿ : ವಿಷಮಶೀತ ಜ್ವರ
paratyphoid

ಉಪಶಾಖೆ
(ಸ) ಪ್ರಧಾನಕಾಂಡದ ಪಕ್ಕದಲ್ಲಿ ಕವಲೊಡೆದ ಕೊಂಬೆ
offshoot

ಉಪಶ್ವಸನಿಗಳು
(ಪ್ರಾ) ಶ್ವಸನಿಯ ಕವಲಗಳು
bronchia

ಉಪಸಾಮ್ರಾಜ್ಯ
(ವೈ) ಪ್ರಾಣಿ ಮತ್ತು ಸಸ್ಯ ಸಾಮ್ರಾಜ್ಯದ ವಿಂಗಡಣೆಯಲ್ಲಿಯ ಉಪವಿಭಾಗ
subkingdom

ಉಪಾಕ್ಷೀಯ
(ಭೌ) ದೃಕ್ ವ್ಯವಸ್ಥೆಯ ಅಕ್ಷಕ್ಕೆ ಸಮಾಂತರವಾಗಿರುವ ಕಿರಣ ಪಥ
paraxial

ಉಪಾಪಚಯ
(ವೈ) ಜೀವದ್ರವ್ಯ ಪರಿಣಾಮ. ಜೀವಿಯಲ್ಲಿ ಅಥವಾ ಜೀವಕೋಶದಲ್ಲಿ ಸರಳ ಆಹಾರಾಂಶಗಳು ಜೊತೆಗೂಡಿ ಸಂಕೀರ್ಣ ಅಣುಗಳು ರೂಪುಗೊಂಡು ದೇಹ ನಿರ್ಮಾಣದಲ್ಲಿ ಪಾಲುಗೊಳ್ಳುವ ಕಾರ್ಯ. ಇದು ಅನಬಾಲಿಸಂ=ಉಪಚಯ. ಸಂಶ್ಲೇಷಣೆ. ಸಂಕೀರ್ಣ ಅಣುಗಳು ರಾಸಾಯನಿಕವಾಗಿ ಸರಳ ಅಣುಗಳಾಗಿ ಪರಿವರ್ತಿತವಾಗಿ ದೇಹದ ಅಥವಾ ಕೋಶದ ಕೆಲಸ ಕಾರ್ಯಗಳಿಗೆ ಶಕ್ತಿ ಬಿಡುಗಡೆಯಾಗುವ ಪ್ರಕ್ರಿಯೆ. ಇದು ಕೆಟಬಾಲಿಸಂ=ಅಪಚಯ. ವಿಶ್ಲೇಷಣೆ. ಈ ಕ್ರಿಯೆಗಳು ಒಟ್ಟೊಟ್ಟಿಗೆ ದೇಹದಲ್ಲಿ ನಡೆಯುತ್ತ ಇರುತ್ತವೆ. ಇವನ್ನು ಒಟ್ಟಿಗೆ ಸೂಚಿಸುವ ಪದ ಮೆಟಬಾಲಿಸಂ = ಉಪಾಪಚಯ. ನೋಡಿ: ಉಪಚಯ, ಅಪಚಯ
metabolism

ಉಪಾಪಚಯ ರೋಗಗಳು
(ವೈ) ದೇಹ ನಿರ್ಮಾಣದಲ್ಲಿ ಭಾಗಿಯಾಗುವ ಆಹಾರಾಂಶಗಳೆಂದರೆ ಪ್ರೋಟೀನ್, ಕಾರ್ಬೊಹೈಡ್ರೇಟ್, ನೀರು, ನ್ಯೂಕ್ಲಿಯಿಕ್ ಆಮ್ಲಗಳು ಹಾಗೂ ಲಿಪಿಡ್ಡುಗಳು. ಇವುಗಳ ಉಪಾಪಚಯ ಕ್ರಿಯೆಗಳಲ್ಲಿ ನ್ಯೂನತೆಗಳು ತಲೆದೋರಿದಾಗ ಹಲವು ರೋಗಲಕ್ಷಣಗಳು ಕಂಡುಬರುತ್ತವೆ. ಇದಕ್ಕೆ ಒಂದು ಸಾಮಾನ್ಯ ಉದಾಹರಣೆಯೆಂದರೆ ಡಯಾಬಿಟಿಸ್ ಅಥವಾ ಮಧುಮೇಹ
metabolic diseases

ಉಪಾಪಚಯಜ
(ವೈ) ಉಪಾಪಚಯ ಪ್ರಕ್ರಿಯೆಯಲ್ಲಿ ಭಾಗವಹಿಸುವ, ಅದರಿಂದ ಉತ್ಪಾದಿತವಾದ ವಸ್ತು. ಉಪಾಪಚಯಕ
metabolite


logo