logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉನ್ನತಿಮಾಪಕ
(ಭೌ) ಭೂಮಟ್ಟದಿಂದ ಅಥವಾ ಸಮುದ್ರ ಮಟ್ಟದಿಂದ ಸ್ಥಳದ ಉನ್ನತಿ ಯನ್ನು ಅಳೆಯುವ ಉಪಕರಣ. ಎತ್ತರ ದೊಂದಿಗೆ ವಾಯುಮಂಡಲ ಒತ್ತಡ ದಲ್ಲಿ ಕಂಡುಬರುವ ಕುಸಿತವನ್ನು ಗಮನಿಸಿ ಸ್ಥಳದ ಉನ್ನತಿಯನ್ನು ಲೆಕ್ಕ ಮಾಡುವ ನಿರ್ದ್ರವ ವಾಯುಭಾರಮಾಪಕ. ಮುಖ್ಯವಾಗಿ ವಿಮಾನ ಗಳಲ್ಲಿ ಬಳಕೆ. ಹಾರುವ ಮುನ್ನ ವಿಮಾನದಲ್ಲಿನ ಈ ಮಾಪಕವನ್ನು ಸಮುದ್ರ ಮಟ್ಟದ ವಾತಾವರಣ ಒತ್ತಡಕ್ಕೆ ಅನುಗೊಳಿಸ ಲಾಗಿರುತ್ತದೆ. ವಿಮಾನ ಮೇಲೇರಿದಂತೆ ವಾತಾವರಣದ ಒತ್ತಡದಲ್ಲ್ಲಿ ಆಗುವ ಕುಸಿತವನ್ನು ಈ ಮಾಪಕ ದಾಖಲಿಸುತ್ತದೆ. ಅದರ ಆಧಾರದ ಮೇಲೆ ವಿಮಾನದ ಎತ್ತರವನ್ನು ಲೆಕ್ಕಹಾಕಬಹುದು
altimeter

ಉನ್ಮಂಡಲಗಳು
(ಖ) ಧ್ರುವ ಬಿಂದುಗಳನ್ನೂ (ಉತ್ತರ ಮತ್ತು ದಕ್ಷಿಣ ಧ್ರುವಗಳು) ಅಯನ ಬಿಂದುಗಳನ್ನೂ (ಉತ್ತರ ಮತ್ತು ದಕ್ಷಿಣ ಅಯನ ಬಿಂದುಗಳು) ಒಳಗೊಂಡಿರುವ ಮಹಾವೃತ್ತ. ಇದು ಅಯೋನ್ಮಂಡಲ (solstitial colure). ಧ್ರುವ ಬಿಂದು ಗಳನ್ನೂ, ವಿಷುವದ್ಬಿಂದುಗಳನ್ನೂ (ವಸಂತ ಮತ್ತು ಶರದ್ ವಿಷುವಗಳು) ಒಳಗೊಂಡಿರುವ ಮಹಾವೃತ್ತ. ಇದು ವಿಷುವೋನ್ಮಂಡಲ (equinoctial colure)
colures

ಉನ್ಮಾದ
(ವೈ) ಯಾವುದೇ ಕೆಲಸ ಮಾಡುವುದರಲ್ಲಿ ಅಥವಾ ಯಾವುದೇ ವಿಚಾರಕ್ಕೆ ಸಂಬಂಧಿಸಿ ಮಿತಿಮೀರಿದ ಉತ್ಸಾಹ ಅಥವಾ ಗೀಳು ತೋರುವ ಒಂದು ಬಗೆಯ ಅಪಸಾಮಾನ್ಯ ಮನೋಸ್ಥಿತಿ. ಈ ಸ್ಥಿತಿಯಲ್ಲಿ ರೋಗಿಯ ಮನಸ್ಸಿನಲ್ಲಿ ವಿಚಾರಗಳು ಅತಿ ಶೀಘ್ರವಾಗಿ ಹರಿಯುತ್ತಿರುತ್ತವೆ. ಫಲವಾಗಿ ಒಳನೋಟ ಇಲ್ಲವೇ ವಿವೇಚನೆ ನಷ್ಟವಾಗಿರುತ್ತದೆ. ಬುದ್ಧಿವಿಕಲ್ಪ. ಮನೋವಿಕಾರ
mania

ಉಪಕರಣ
(ತಂ) ವೀಕ್ಷಿತ ವಸ್ತುವಿನ ಯಾವುದೇ ಪ್ರಮಾಣದ ಮೌಲ್ಯ ಅಳೆಯುವ, ಕೆಲವು ವೇಳೆ ದಾಖಲಿಸುವ ಹಾಗೂ ನಿಯಂತ್ರಿಸುವ ಸಾಧನ
instrument

ಉಪಕಾಂಡ
(ಸ) ಪ್ರಧಾನ ಕಾಂಡದಿಂದ ಹೊರಟು ನೆಲವೂರಿ ಬೇರು ಬಿಡುವ ಹಂಬು. ಬೇರು ಬಿಟ್ಟ ಒಂದೊಂದು ಗಂಟುಗಳಿಂದಲೂ ಹೊಸ ಗಿಡಗಳು ಹುಟ್ಟಿಕೊಳ್ಳುತ್ತವೆ. ಅವರೆ ಜಾತಿಯ ಹಲವು ಗಿಡಗಳಲ್ಲಿ ಈ ಪ್ರವೃತ್ತಿ ಕಂಡುಬರುತ್ತದೆ
runner

ಉಪಕುಲ
(ಸ) ಸಸ್ಯವರ್ಗೀಕರಣದಲ್ಲಿ ಅನೇಕ ಪರಸ್ಪರ ಸಂಬಂಧಿತ ಕುಲಗಳಿರುವ ಕುಟುಂಬದ ಒಂದು ವಿಭಾಗ
tribe

ಉಪಗಣ
(ಜೀ) ಜೀವವೈಜ್ಞಾನಿಕ ವರ್ಗೀಕರಣ ವಿಭಾಗದಲ್ಲಿ ಗಣ ಮತ್ತು ಕುಟುಂಬದ ನಡುವೆ ಇರುವ ದರ್ಜೆ
suborder

ಉಪಗಣ
(ಗ) ಗಣ (set) Bಯ ಎಲ್ಲ ಧಾತುಗಳೂ (elements) ಗಣ Aಯ ಧಾತುಗಳಾಗಿದ್ದರೆ ಆಗ ಗಣ B ಗಣ Aಯ ಉಪಗಣ. A={a,b,c,d,e} ಮತ್ತು B={a,b,c} ಆಗಿದ್ದರೆ ಆಗ ಗಣ B, ಗಣ Aಯ ಒಂದು ಉಪಗಣ. ಪ್ರತೀಕ ಗಳಲ್ಲಿ B   A. ಶೂನ್ಯಗಣ ಎಲ್ಲ ಗಣಗಳ ಉಪಗಣ
subset

ಉಪಚಯ
(ವೈ) ದೇಹದೊಳಗೆ ಸರಳ ಅಣುಗಳು ಶಕ್ತಿ ಹೂಡಿಕೆಯೊಂದಿಗೆ ಸಂಕೀರ್ಣ ಅಣುಗಳಾಗಿ ಮಾರ್ಪಡುವ ಒಂದು ಉಪಾಪಚಯಕ ಪ್ರಕ್ರಿಯೆ. ನೋಡಿ: ಅಪಚಯ. ಉಪಾಪಚಯ
anabolism

ಉಪಚಯಕ
(ವೈ) ಉಪಚಯದಲ್ಲಿ, ಸಂವರ್ಧನ ಕ್ರಿಯೆಯಲ್ಲಿ ಭಾಗವಹಿಸುವ ಪದಾರ್ಥ
anabolite


logo