(ಸ) ಲೆಗ್ಯೂಮಿನೋಸೀ ಕುಟುಂಬ, ಪ್ಯಾಪಿಲಿಯೊನೇಸೀ ಉಪಕುಟುಂಬಕ್ಕೆ ಸೇರಿದ ದ್ವಿದಳ ಧಾನ್ಯ. ಫ್ಯಾಸಿಯೊಲಸ್ ಮುಂಗೊ ವೈಜ್ಞಾನಿಕ ನಾಮ. ತೊಗರಿ, ಅವರೆ, ಹೆಸರು ಬೇಳೆಗಳಂತೆಯೇ ಇದೂ ಆಹಾರದಲ್ಲಿ ಪ್ರೋಟೀನ್ ಆವಶ್ಯಕತೆಯನ್ನು ಪೂರೈಸುತ್ತದೆ
black gram
ಉದ್ಧರಣ
(ತಂ) ಅದಿರಿನಿಂದ ಲೋಹವನ್ನು ಪ್ರತ್ಯೇಕಿಸುವ ಕ್ರಿಯೆ
extraction
ಉದ್ಭೇದಕ
(ಸ) ಮೊದಲು ಅಧಃಸ್ತರದಲ್ಲಿ ವಿಕಾಸ ಗೊಂಡು ಅನಂತರ ಹೊರಹೊಮ್ಮಿ ಹರಡುವ ಗುಣವುಳ್ಳದ್ದು
erumpent
ಉದ್ಯಾನ
(ಸ) ಅಲಂಕಾರಕ್ಕಾಗಿ ಗಿಡ ಮೊದಲಾದವನ್ನು ಬೆಳೆಸಿ ಆವರಣ ಹಾಕಿದ ಸಾರ್ವಜನಿಕ ವಿಹಾರ ಪ್ರದೇಶ
park
ಉದ್ರೇಚನೆ
(ಭೌ) ಕಾಸುವುದು, ವಿಕಿರಣಕ್ಕೊಳ ಪಡಿಸುವುದು ಅಥವಾ ಎಲೆಕ್ಟ್ರಾನ್‌ಗಳ ತಾಡನೆ, ಇವುಗಳ ಪರಿಣಾಮವಾಗಿ ಪರಮಾಣುವಿನ ಎಲೆಕ್ಟ್ರಾನ್‌ಗಳಲ್ಲೊಂದನ್ನು ಅಥವಾ ಅನೇಕವನ್ನು ನ್ಯೂಕ್ಲಿಯಸ್‌ನಿಂದ ಹೆಚ್ಚು ದೂರವಿರುವ ಕಕ್ಷೆಗಳಿಗೆ ಚಲಿಸುವಂತೆ ಮಾಡಿ ಪರಮಾಣುವನ್ನು ಅದರ ಸಹಜ ಶಕ್ತಿಮಟ್ಟದಿಂದ ಹೆಚ್ಚು ಉನ್ನತ ಮಟ್ಟಕ್ಕೆ ಏರಿಸುವುದು. (ಜೀ) ಯಾವುದೇ ಪ್ರತಿಕ್ರಿಯೆ ಉಂಟುಮಾಡುವುದು; ಯಾವುದೇ ಪ್ರತಿಕ್ರಿಯೆಯನ್ನು ಚಾಲನೆಗೆ ತರುವುದು / ಉತ್ತೇಜನ ನೀಡುವುದು
excitation
ಉದ್ವೇಗ
(ವೈ) ಕೆಲಸದ ಒತ್ತಡ, ಅವ್ಯಕ್ತ ಭಯ, ಅನಾರೋಗ್ಯ ಸ್ಥಿತಿ ಮುಂತಾದವುಗಳಿಂದಾಗಿ ಮನಸ್ಸಿನಲ್ಲಿ ಮೂಡುವ ತಳಮಳ
tension
ಉನ್ನತಕೋನ
(ಗ) ವೀಕ್ಷಕ-ಕ್ಷಿತಿಜೀಯ (OA) ಮತ್ತು ವೀಕ್ಷಕ-ವಸ್ತು (OP) ರೇಖೆಗಳ ನಡುವಿನ ಕೋನ AOP. ನೋಡಿ: ಅವನತಕೋನ
angle of elevation
ಉನ್ನತರಾಶಿ
(ಪ) ೩೦೦೦-೭೦೦೦ ಮೀ ಎತ್ತರದಲ್ಲಿ ತೇಲು ತ್ತಿರುವ ಬೂದು/ನೀಲಿ ಬಣ್ಣದ ಪದರ ಮೋಡಗಳ ವ್ಯಾಪಕ ಸೇರಿಕೆ
altocumulus
ಉನ್ನತಿ
(ಖ) ಕ್ಷಿತಿಜ/ಹಾರಿಜ/ದಿಗಂತದಿಂದ ಆಕಾಶ ಕಾಯದ ಕೋನದೂರ (ಗ) ಜ್ಯಾಮಿತೀಯ ಆಕೃತಿಯ ಶೃಂಗದಿಂದ ಪಾದಕ್ಕೆ/ಆಧಾರಕ್ಕೆ/ತಳಕ್ಕೆ ಎಳೆದ ಲಂಬ. (ಭೂ) ಸಮುದ್ರ ಮಟ್ಟದಿಂದ ಸ್ಥಳದ ಎತ್ತರ. ಲಂಬದೂರ. ಎತ್ತರ. ಔನ್ನತ್ಯ
altitude
ಉನ್ನತಿಭಯ
(ಮ) ಎತ್ತರ ಸ್ಥಳದಲ್ಲಿರಲು ಅಂಜಿಕೆ. ಒಂದು ಬಗೆಯ ಭಯ ವಿಕಾರ. ಔನ್ನತ್ಯ ಭೀತಿ