(ಭೌ) ಯಾವುದೇ ತಪ್ತ ಘನವಸ್ತು ಉತ್ಸರ್ಜಿಸುವ ಗೋಚರ ಬೆಳಕನ್ನು ಅಶ್ರಗದ ಮೂಲಕ ಹಾಯಿಸಿದಾಗ ಆ ಬೆಳಕಿನ ಘಟಕ-ಬಣ್ಣಗಳು ಸುಪರಿಚಿತ ಕಾಮನಬಿಲ್ಲಿನ ತೆರದಲ್ಲಿ ಪ್ರಕಟವಾಗುತ್ತವೆ. ಇದಕ್ಕೆ ಭಿನ್ನವಾಗಿ ಯಾವುದೇ ತಪ್ತ ಅನಿಲವಸ್ತು ಉತ್ಸರ್ಜಿಸುವ ಗೋಚರ ಬೆಳಕು - ಉದಾಹರಣೆಗೆ ಸೋಡಿಯಮ್ ಉರಿದಾಗ ಹೊಮ್ಮುವ ಬೆಳಕು - ಕಾಮನಬಿಲ್ಲಿನ ಬಣ್ಣಗಳ ತೋರಣವಾಗಿ ಒಡೆಯುವುದಿಲ್ಲ. ಬದಲು, ನಿರ್ದಿಷ್ಟ ರೇಖೆಗಳಾಗಿ ಅಥವಾ ಬಣ್ಣದ ಪಟ್ಟಿಗಳಾಗಿ ವಿಭಜಿತವಾಗುತ್ತದೆ. ಅಂದರೆ ಎಲ್ಲ ಬಣ್ಣಗಳನ್ನು ಉತ್ಸರ್ಜಿಸುವುದರ ಬದಲು ಆಯ್ದ ಕೆಲವನ್ನು ಮಾತ್ರ ಉತ್ಸರ್ಜಿಸುತ್ತದೆ. ಉತ್ಸರ್ಜನ ರೋಹಿತದಲ್ಲಿಯ ಪ್ರತಿಯೊಂದು ರೇಖೆಯೂ ನಿರ್ದಿಷ್ಟ ಧಾತುವಿನ ಇಲ್ಲವೇ ಅಣುವಿನ ಕಾರಣವಾಗಿ ಅಲ್ಲಿ ಬಿಂಬಿತವಾಗಿರುತ್ತದೆ. ಎಂದೇ ಬಿಡಿ ರೇಖೆಗಳ ಅಲೆಯುದ್ದಗಳು ಆಯಾ ಧಾತುವಿನ ಅಥವಾ ಅಣುವಿನ ಬೆರಳಚ್ಚುಗಳು. ನೋಡಿ: ಶೋಷಣ ರೋಹಿತ
emission spectrum
ಉತ್ಸರ್ಜನೆ
(ಭೌ) ಪರಮಾಣುಗಳು ಸಾಧಾರಣ ಮಟ್ಟಕ್ಕಿಂತ ಅಧಿಕ ಶಕ್ತಿಯನ್ನು ಹೀರಿಕೊಂಡಾಗ ಅವುಗಳಿಂದ ಎಲೆಕ್ಟ್ರಾನ್‌ಗಳು ವಿಮೋಚನೆಯಾಗುವ ಪ್ರಕ್ರಿಯೆ. ಇದು ಸಂಭವಿಸಲು ಕಾರಣಗಳು : ೧. ಕವಾಟಗಳು, ಕೂಲಿಜ್ ಎಕ್ಸ್-ಕಿರಣ ನಳಿಗೆಗಳು, ಕ್ಯಾಥೋಡ್ ಕಿರಣ ನಳಿಗೆಗಳಲ್ಲಿ ಆಗುವ ಉಷ್ಣಾಯಾನು (ಥರ್ಮಯಾನಿಕ್) ಕ್ಷೋಭೆ. ೨. ಉಚ್ಚಶಕ್ತಿ ಪ್ರಾಥಮಿಕ ಎಲೆಕ್ಟ್ರಾನ್‌ಗಳ ಸಂಘಟ್ಟನೆಯ ಪರಿಣಾಮವಾಗಿ ಎಲೆಕ್ಟ್ರಾನ್‌ಗಳ ದ್ವಿತೀಯಕ ಉತ್ಸರ್ಜನೆ. ೩. ನಿರ್ದಿಷ್ಟ ಶಕ್ತಿಮಟ್ಟಕ್ಕಿಂತ ಮೇಲೆ ಫೋಟಾನುಗಳ ಅವಶೋಷಣೆ ಆದಾಗ ದ್ಯುತಿವಿದ್ಯುತ್ ವಿಮೋಚಿತವಾಗುವುದು. ೪. ಉಚ್ಚ ವಿದ್ಯುತ್ ಕ್ಷೇತ್ರವು ಮಾತೃ ಪರಮಾಣುಗಳಿಂದ ಎಲೆಕ್ಟ್ರಾನ್‌ಗಳನ್ನು ಸುಲಿಯುವುದು
emission
ಉದರ
(ಪ್ರಾ) ಕಶೇರುಕಗಳಲ್ಲಿ ವಕ್ಷಕ್ಕೂ ವಸ್ತಿ ಕುಹರಕ್ಕೂ ನಡುವಿನ ಭಾಗ; ಜಠರ, ಕರುಳು ಇತ್ಯಾದಿಗಳ ನೆಲೆ. ಕೀಟ ಮತ್ತಿತರ ಸಂಧಿಪದಿಗಳಲ್ಲಿ ಒಡಲಿನ ಹಿಂಭಾಗ. ಹೊಟ್ಟೆ
abdomen
ಉದರ ತಲ
(ಪ್ರಾ) ಹೊರಚಾಚು; ಮಧ್ಯಸ್ಥ ಊತ; ಉದರದ ತಳ ಮೈ
venter
ಉದರದರ್ಶಕ
(ಪ್ರಾ) ಉದರದೊಳಗೆ ನೋಡಲು ಹಾಗೂ ಶಸ್ತ್ರಕ್ರಿಯೆ ನಡೆಸಲು ನೆರವಾಗುವ ಸಾಧನ. ಮೂರು ರೀತಿಯ ಕೊಳವೆಗಳಿರುತ್ತವೆ. ಒಂದು ಕೊಳವೆಯಲ್ಲಿ ಒಂದು ಪುಟ್ಟ ಕ್ಯಾಮರ ಹಾಗೂ ಬೆಳಕಿನ ಮೂಲ ಇರುತ್ತದೆ. ಉಳಿದೆರಡು ಕೊಳವೆಗಳಲ್ಲಿ ಇಕ್ಕಳ, ಚಾಕು, ಕತ್ತರಿ ಇತ್ಯಾದಿ ಗಳನ್ನು ತೂರಿಸಿ ಶಸ್ತ್ರಕ್ರಿಯೆಯನ್ನು ಮಾಡಲು ಅನು ಕೂಲವಿರುತ್ತದೆ. ಉದರದ ೩ ಕಡೆ ಮೂರು ಸಣ್ಣ ರಂಧ್ರ ಕೊರೆದು ಅದರ ಮೂಲಕ ಈ ಸಾಧನಗಳನ್ನು ತೂರಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸಬಹುದು. ಈ ಸಾಧನ ಉಪಯುಕ್ತ ವಾದದ್ದು. ಉದರವನ್ನು ಸೀಳಿ ಶಸ್ತ್ರಚಿಕಿತ್ಸೆ ನಡೆಸುವ ಕಷ್ಟವನ್ನು ಸಾಕಷ್ಟು ತಪ್ಪಿಸಿದೆ. ನೋವನ್ನು ಕನಿಷ್ಠಗೊಳಿಸಬಹುದು. ಬೇಗ ಗುಣವಾಗುತ್ತದೆ. ಉದರದ ಮೇಲೆ ಕಲೆಯುಳಿಯುವುದಿಲ್ಲ. ಲ್ಯಾಪರೊಸ್ಕೋಪ್
laparoscope
ಉದರಸಂಚಿ
(ಪ್ರಾ) ನೋಡಿ: ಕೋಷ್ಠಸ್ತನಿ
marsupial
ಉದ್ದ
(ಗ) ಮೂರು ಆಯಾಮಗಳ ಪೈಕಿ ಒಂದು. ಉಳಿದ ಎರಡು: ಎತ್ತರ (ಆಳ), ಅಗಲ (ದಪ್ಪ). ನೀಳ. ದೀರ್ಘತೆ (ಕಂ) ಪದದಲ್ಲಿರುವ ಬೈಟ್‌ಗಳ ಸಂಖ್ಯೆ ಅಥವಾ ಕ್ಷೇತ್ರ (ದಾಖಲೆಯೊಂದರ ಪೂರ್ವ ನಿರ್ಧರಿತ ವಿಭಾಗ)ದಲ್ಲಿಯ ಕಾಲಮ್‌ಗಳ/ಸ್ಪೇಸ್‌ಗಳ ಸಂಖ್ಯೆ. (ಸಾ) ಘನವಸ್ತುವಿನ ಮೂರು ಆಯಾಮಗಳಲ್ಲಿ ಒಂದು. ಉಳಿದ ಎರಡು ಆಯಾಮಗಳು (ನೋಡಿ) ಅಗಲ ಮತ್ತು ದಪ್ಪ (ಆಳ)
length
ಉದ್ದಸಾಲು
(ಗ) ಒಂದು ಮಾತೃಕೆ (ಮ್ಯಾಟ್ರಿಕ್ಸ್) ಅಥವಾ ನಿರ್ಧಾರಕ (ಡಿಟರ್ಮಿನೆಂಟ್) ಇವುಗಳಲ್ಲಿ ಮೇಲಿಂದ ಕೆಳಗೆ ಒಂದು ಸಾಲಿನಲ್ಲಿ ಜೋಡಿಸಲಾದ ಸಂಖ್ಯಾಗಣ. ಉದಾ : ಎಂಬ ಎರಡನೇ ದರ್ಜೆಯ ಮಾತೃಕೆಯಲ್ಲಿ ೩, ೨, ಮತ್ತು -೧, ೫ ಎಂಬುವು ಕ್ರಮವಾಗಿ ಒಂದನೆಯ ಮತ್ತು ಎರಡನೆಯ ಉದ್ದಸಾಲುಗಳು
column
ಉದ್ದೀಪಕ
(ವೈ) ದೇಹದಲ್ಲಿ/ಅಂಗದಲ್ಲಿ ಕ್ರಿಯೆಯನ್ನು ತಾತ್ಕಾಲಿಕವಾಗಿ ಉದ್ರೇಕಗೊಳಿಸುವ ಪದಾರ್ಥ. ಉತ್ತೇಜಕ
stimulant
ಉದ್ದೀಪನೆ
(ಜೀ) ಶಬ್ದ, ಬೆಳಕು, ಉಷ್ಣ ಅಥವಾ ಒತ್ತಡವನ್ನು ಗುರುತಿಸಬಲ್ಲ ಜೀವಿಯ ಗ್ರಾಹಕಾಂಗದ ಸಾಮರ್ಥ್ಯ