(ಭೂವಿ) ಭೂವೈಜ್ಞಾನಿಕ ಕಾರಣಗಳಿಂದಾಗಿ ನೆಲದ ಮಟ್ಟ ಎತ್ತರವಾಗುವುದು. ನೋಡಿ: ಪುನರುಜ್ಜೀವನ
uplift
ಉತ್ಥಾಪಕ ಬಲ
(ಎಂ) ಭೂಮಿಯ ಗುರುತ್ವಾಕರ್ಷಣ ಬಲವನ್ನು ಪ್ರತಿರೋಧಿಸಲು, ವಿಮಾನದ ಎಂಜಿನ್ನಿನ ಕಾರ್ಯಾಚರಣೆಯ ಫಲವಾಗಿ, ವಿಮಾನದ ಮೇಲೆ ಗಾಳಿಯು ಪ್ರಯೋಗಿಸುವ ಮೇಲ್ಮುಖ ಬಲ
lift
ಉತ್ಪತನ
(ರ) ದ್ರವರೂಪಕ್ಕೆ ಬಾರದೆ ಘನ ವಸ್ತು ಅನಿಲ ಸ್ಥಿತಿಗೆ ಪರಿವರ್ತನೆಗೊಳ್ಳುವುದು. ಅನಿಲ ಸ್ಥಿತಿಯಿಂದ ಮತ್ತೆ ತಂಪು ಮಾಡಿ ಘನ ಸ್ಥಿತಿಗೆ ತರುವುದು. ಕರ್ಪೂರೀಕರಣ
sublimation
ಉತ್ಪತ್ತಿ
(ಸಾ) ಯಾವುದೇ ವಿದ್ಯಮಾನ ಜರಗುವ ಅಥವಾ ಜೀವಿ ಅಸ್ತಿತ್ವಕ್ಕೆ ಬರುವ ಪ್ರಕ್ರಿಯೆಯ ಆರಂಭ ಬಿಂದು ಅಥವಾ ಆ ಪ್ರಕ್ರಿಯೆ
genesis
ಉತ್ಪನ್ನ
(ಸಾ) ನೈಸರ್ಗಿಕ ವಿಧಾನಗಳಿಂದ ಉತ್ಪಾದಿಸಿದ ಅಥವಾ ಯಂತ್ರಗಳನ್ನು ಬಳಸಿ ತಯಾರಿಸಿದ ಪದಾರ್ಥಗಳು. (ರ) ರಾಸಾಯನಿಕ ಕ್ರಿಯೆಯಲ್ಲಿ ಪರಿವರ್ತಕಗಳು ಕ್ರಿಯೆಯ ನಂತರ ಉಂಟುಮಾಡುವ ಸಂಯುಕ್ತ
product
ಉತ್ಪರಿವರ್ತಿ
(ಜೀ) ನೋಡಿ : ವಿಕೃತ
mutant
ಉತ್ಪ್ಲವನ
(ಭೌ) ನೋಡಿ : ಆರ್ಕಿಮಿಡೀಸ್ ತತ್ತ್ವ
upthrust
ಉತ್ಪಾಟಿಸು
(ಭೂವಿ) ಶಿಲಾರಸವನ್ನು (ಲಾವ) ಭೂಮಿ ಒಳಗಿಂದ ಹೊರದೂಡು. (ತಂ) ಲೋಹ, ಪ್ಲಾಸ್ಟಿಕ್ ಮುಂತಾದವನ್ನು ಅಚ್ಚಿಗೆ ತುಂಬಿಸಿ ಕಂಬಿ, ಕೊಳವೆ, ತಗಡು, ಹಾಳೆ ರೂಪದಲ್ಲಿ ಹೊರ ತೆಗೆಯುವುದು
extrude
ಉತ್ಪಾದಿಸು
(ಸಾ) ೧. ಬೆಳಕು, ವಿದ್ಯುತ್, ಶಕ್ತಿ, ಬಲ ಇತ್ಯಾದಿಗಳನ್ನು ಅಸ್ತಿತ್ವಕ್ಕೆ ತರು. ೨. ಮನಃಸ್ಥಿತಿಯನ್ನು ವಿಕಾಸ ಗೊಳಿಸು. ೩. ಜೀವಿಗಳಿಗೆ ಜನ್ಮ ನೀಡು. (ಗ) ಚಲಿಸುತ್ತಿರುವುದು ಎಂದು ಭಾವಿಸಿದ ಬಿಂದುವಿನಿಂದ ಗೆರೆಯನ್ನು, ಕ್ಷೇತ್ರವನ್ನು, ಘನಾಕೃತಿಯನ್ನು ರಚಿಸು