logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉತ್ಕೇಂದ್ರೀಯ ಕೋಣಿಕಾಂತರ
(ಖ) ಗ್ರಹಕಕ್ಷೆಯಲ್ಲಿ ಗ್ರಹವನ್ನು ಕೇಂದ್ರಕ್ಕೆ ಸೇರಿಸುವ ರೇಖೆ ಮತ್ತು ಅಪಪುರ ರೇಖೆ ನಡುವೆ ಗ್ರಹದ ಚಲನ ದಿಶೆಯಲ್ಲಿ ಅಳೆದ ಕೋನ. ನೋಡಿ: ಕೋಣಿಕಾಂತರ
eccentric anomaly

ಉತ್ತರಗಾಮಿಗಳು
(ಭೂ) ಸಮತಲ ಭೂಪಟದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಸರಿಯುವ ಅಕ್ಷಾಂಶ ರೇಖೆಗಳು
northings

ಉತ್ತರದಾಯಿತ್ವ
(ಸಾ) ಪ್ರಯೋಗ ಅಥವಾ ವೀಕ್ಷಣೆ ಮುಗಿದ ಬಳಿಕ ಫಲಿತಾಂಶ ಒಪ್ಪಿಸುವ ಪರಿ
accountability

ಉತ್ತರದೀಪ್ತಿ
(ಖ) ಸೂರ್ಯಾಸ್ತಮಾನದ ಬಳಿಕ ಪಶ್ಚಿಮಾಕಾಶದಲ್ಲಿ ಕಾಣುವ ಬೆಳಕು. ಸಂಜೆ ಬೆಳಕು. ಬೆಳಕಿನ ಆಕರ ಮರೆಯಾದ ಬಳಿಕವೂ ಕಾಣುವ ಬೆಳಕು (ಭೌ) ವಿದ್ಯುತ್ಪ್ರವಾಹವನ್ನು ಅನಿಲದ ಮೂಲಕ ಹರಿಸಿ ನಿಲ್ಲಿಸಿದ ನಂತರವೂ ಸೂಸುವ ಬೆಳಕು
afterglow

ಉತ್ತರ ಧ್ರುವಪ್ರಭೆ
(ಗ) ನೋಡಿ: ಧ್ರುವಪ್ರಭೆ
aurora borealis

ಉತ್ತರ ಪ್ರಭೆ
(ಖ) ನೋಡಿ : ಧ್ರುವಪ್ರಭೆ
northern lights

ಉತ್ತರ ಬೆಳಕು
(ಖ) ಉತ್ತರ ದಿಕ್ಕಿನಿಂದ ಬರುವ ಸೂರ್ಯನ ಬೆಳಕು. ಕಾರ್ಖಾನೆಗಳ ವಿಶಾಲ ಹಜಾರಗಳಿಗೆ ನೆರಳುಂಟುಮಾಡದ ಬೆಳಕನ್ನು ಉತ್ತರ ದಿಕ್ಕಿನಿಂದ ಪಡೆಯುತ್ತಾರೆ. ಇದಕ್ಕೆ ವಿಶೇಷ ಚಾವಣಿಗಳನ್ನು ಬಳಸುತ್ತಾರೆ. ದಕ್ಷಿಣಾರ್ಧ ಗೋಲದಲ್ಲಿ ದಕ್ಷಿಣ ಬೆಳಕು ಈ ಅನುಕೂಲವನ್ನು ಒದಗಿಸುತ್ತದೆ
north light

ಉತ್ತರ ಶೀತವಲಯ
(ಭೂ) ಉತ್ತರ ಅಕ್ಷಾಂಶ ೬೬0೩೩’ನಿಂದ ೯೦0ವರೆಗಿನ ಭೂಪ್ರದೇಶ. ನೋಡಿ: ವಲಯಗಳು
arctic zone

ಉತ್ತರೋತ್ತರ
(ಗ) ಅನುಕ್ರಮವಾಗಿ ಬರುವ. ಆಕಾಶ ಅಥವಾ ಕಾಲದಲ್ಲಿ ಒಂದರ ತರುವಾಯ ಒಂದು ಬರುವ, ವಿಶೇಷ ವಾಗಿ ನೇರವಾಗಿ, ಮಧ್ಯೆ ಮಧ್ಯೆ ಸ್ಥಳ ಅಥವಾ ನಿಲುಗಡೆಗಳಿಲ್ಲದೆ, ಪುಂಖಾನುಪುಂಖವಾಗಿ
successive

ಉತ್ತಲನ
(ಪ್ರಾ) ಅಂಗೈ, ಅಂಗಾಲು ಮೇಲ್ಮುಖ ಮಾಡುವುದು. ಹೋಲಿಸಿ : ಅವತಾನನ
supination


logo