(ಭೌ) ೩೦೦ರಿಂದ ೩೦೦೦ ಮೆಗಾಹರ್ಟ್ಸ್ ವ್ಯಾಪ್ತಿಯಲ್ಲಿರುವ ರೇಡಿಯೊ ಆವೃತ್ತಿಗಳು. ಇವುಗಳ ಅಲೆಯುದ್ದಗಳು ೧೦ ಸೆಂಮೀನಿಂದ ೧ ಮೀ. ವ್ಯಾಪ್ತಿಯಲ್ಲಿರುತ್ತವೆ
ultrahigh frequency
ಉಚ್ಚಾರಣಾ ವಿಜ್ಞಾನ
(ಸಾ) ನೋಡಿ : ಫೊನೆಟಿಕ್ಸ್
phonetics
ಉಚ್ಚಾರಣೆ
(ಮವಿ) ಗಟ್ಟಿಯಾಗಿಯೂ ಸ್ಫುಟ ವಾಗಿಯೂ ಓದುವುದು. ಮಾತುಗಳನ್ನು ಅಥವಾ ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದು. ವಾಕ್‌ಸ್ಫುಟತೆ. ಸ್ಪಷ್ಟೋಚ್ಚಾರ
articulation
ಉಚ್ಛ್ವಸನ
(ವೈ) ಶ್ವಾಸಕಾಂಗಗಳೊಳಕ್ಕೆ ಗಾಳಿಯನ್ನು ಸೆಳೆದುಕೊಳ್ಳುವ ಕ್ರಿಯೆ. ವಿರುದ್ಧ ಕ್ರಿಯೆ ನಿಶ್ವಸನ
inspiration
ಉಚ್ಛ್ವಸಿಸು
(ವೈ) ಗಾಳಿ, ಅನಿಲ ಮೊದಲಾದವನ್ನು ಶ್ವಾಸಕೋಶಗಳ ಒಳಕ್ಕೆ ಸೇದಿಕೊ
inhale
ಉಚ್ಛ್ರಾಯ
(ಖ) ಖಗೋಳ ಕಾಯವು ತನ್ನ ದೈನಂದಿನ ಚಲನೆಯಲ್ಲಿ ಯಾವುದೋ ಸ್ಥಳದ ಮಧ್ಯಾಹ್ನ ರೇಖೆಯನ್ನು ದಾಟುವ ಬಿಂದು. ನೆತ್ತಿಗೆರೆ ಅಡ್ಡಹಾಯುವುದು
culmination
ಉಚ್ಛ್ವಾಸಕ
(ಪ್ರಾ) ಅನಿಲ ಅಥವಾ ದ್ರವವನ್ನು ಒಳಕ್ಕೆ ಹೀರಿಕೊಳ್ಳುವ ಕ್ರಿಯೆಗೆ ಸರಿಹೋಗುವಂತೆ ರಚಿತವಾದ ಅಂಗ. ಉದಾ: ಕೆಲವು ಮೃದ್ವಂಗಿಗಳಲ್ಲಿನ ಹೀರುನಳಿಕೆ
inhalant
ಉಜ್ಜುಗಾಯ
(ವೈ) ೧. ಆಘಾತದ ಪರಿಣಾಮವಾಗಿ ಚರ್ಮ ಅಥವಾ ಲೋಳೆ ಪೊರೆಯಲ್ಲಿ ತರಚು ಆಗುವ ಗಾಯ; ೨. ಸುರೂಪಿಕಾ ಶಸ್ತ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿಯೇ ಮಾಡುವ ತರಚು ಗಾಯ
abrasion
ಉಜ್ಜ್ವಲತಾಂಕ
(ಖ) ಆಕಾಶಕಾಯಗಳ ಉಜ್ಜ್ವಲತೆ ಯನ್ನು - ಅಂದರೆ ಕಣ್ಣಿಗೆ ಕಾಣುವ ಪ್ರಕಾಶವನ್ನು - ಪ್ರಮಾಣೀಕರಿಸಲು ಬಳಸುವ ಮಾನಕ. ಕ್ರಿ.ಪೂ. ೨ನೇ ಶತಮಾನದಲ್ಲಿ ಬಾಳಿದ್ದ ಗ್ರೀಕ್ ಖಗೋಳ ವಿಜ್ಞಾನಿ ಹಿಪ್ಪಾರ್ಕಸ್ ಗೋಚರ ನಕ್ಷತ್ರಗಳನ್ನು ಅವುಗಳ ಉಜ್ವಲತಾನುಸಾರ ಆರು ವರ್ಗಗಳಲ್ಲಿ ಅಳವಡಿಸಿದ; ಗೋಚರತೆ- ಅಗೋಚರತೆ ಅಂಚಿನಲ್ಲಿ ಇರುವ ನಕ್ಷತ್ರಗಳಿಗೆ ಉಜ್ಜ್ವಲತಾಂಕ ೬ನ್ನೂ ಉಜ್ಜ್ವಲತಮ ನಕ್ಷತ್ರ ಲುಬ್ಧಕಕ್ಕೆ ಉಜ್ಜ್ವಲತಾಂಕ ೧ನ್ನೂ ನಿಗದಿ ಮಾಡಿದ. ಉಳಿದವುಗಳಿಗೆ ೧ ಮತ್ತು ೬ರ ನಡುವಿನ ಅಂಕಗಳನ್ನು ನಿಗದಿಸಿದ. ಈ ಅನುಭವಜನ್ಯ ಮಾನಕವನ್ನು ಆಧರಿಸಿ ಇಂದಿನ ಸುಧಾರಿತ ಮಾನಕವಿದೆ: ಉಜ್ಜ್ವಲತಾಂಕ ೬ ಇರುವ ತಾರೆಯ ಉಜ್ಜ್ವಲತೆ ೧, ೫ರದು ೨.೫೧೨, ೪ರದು ೨.೫೧೨೨=೬.೩೦೧, ೩ರದು ೨.೫೧೨೩=೧೫.೮೫೧, ೨ರದು ೨.೫೧೨೪= ೩೯.೮೧೮, ೧ರದು ೨.೫೧೨೫=೧೦೦.೦೨೦, ಸೊನ್ನೆಯದರದು ೨.೫೧೨೬=೨೫೧.೨೫೭, ಉಜ್ಜ್ವಲತಾಂಕ -೧ರ ತಾರೆಯ ಉಜ್ಜ್ವಲತೆ ೨.೫೧೨೭= ೬೩೧.೧೫೭, ಇತ್ಯಾದಿ. ಲುಬ್ಧಕದ ಉಜ್ಜ್ವಲತಾಂಕ -೧.೫೮, ಸೂರ್ಯನದು -೨೬.೯. ನೋಡಿ: ಕಾಂತಿ, ಕಾಂತಿಮಾನ