(ವೈ) ಮೂಗು, ಗಂಟಲು, ಶ್ವಾಸನಾಳ ಅಥವಾ ಶ್ವಾಸಕೋಶಗಳ ಸ್ರಾವಗಳಿಂದ ಕೂಡಿದ ಮತ್ತು ಉಗಿಯುವ ಪದಾರ್ಥ. ಜೊಲ್ಲು, ಲೋಳೆ, ಕೀವು, ಸೂಕ್ಷ್ಮ ಜೀವಿಗಳು, ರಕ್ತ ಇತ್ಯಾದಿಗಳಿಂದಲೂ ಕೂಡಿರಬಹುದು
sputum
ಉಗ್ಗು
(ವೈ) ಇದು ಭಾಷೆಗೆ ಮತ್ತು ಮನಸ್ಸಿಗೆ ಸಂಬಂಧಿಸಿದ ಒಂದು ತೊಂದರೆ. ೧. ಮಾತನಾಡುವಾಗ ಹಿಂಜರಿಕೆ, ತಪ್ಪು ಉಚ್ಚಾರ, ಪುನರಾವರ್ತನೆ, ತಡವರಿಸುವುದು ಕಂಡುಬರಬಹುದು. ಕಾರಣ ಮಾನಸಿಕ ಉದ್ವೇಗ, ಮುಜುಗರ ಅಥವಾ ವಿಷಯದ ಬಗ್ಗೆ ಅಪರಿಚಿತತೆ. ೨. ಕೆಲವು ಅಕ್ಷರಗಳನ್ನು (ಮುಖ್ಯವಾಗಿ ಲ, ರ, ಸ) ತಪ್ಪಾಗಿ ಅಥವಾ ಒಂದರ ಬದಲು ಮತ್ತೊಂದನ್ನು ಉಪಯೋಗಿ ಸುವುದು. ‘ಸ್ಟಟ್ಟರಿಂಗ್’ ಎಂಬ ಮತ್ತೊಂದು ಅವಸ್ಥೆಯಿದೆ. ಇದು ಸ್ಟಾಮರಿಂಗ್‌ಗಿಂತ ಭಿನ್ನವಾದದ್ದು. ಇಲ್ಲಿಯೂ ಸಹ ವ್ಯಕ್ತಿ ಉಗ್ಗುತ್ತಾನೆ. ಆದರೆ ಉಗ್ಗಿಗೆ ಭಾಷಾ ತೊಂದರೆಯಿರುವುದಿಲ್ಲ. ಧ್ವನ್ಯಂಗಗಳ ಹೊಂದಾಣಿಕೆಯಲ್ಲಿ ತೊಂದರೆಯಿರುತ್ತದೆ. ಆತಂಕದಿಂದ ಸಮಸ್ಯೆ ಬಿಗಡಾಯಿಸಬಹುದು. ಬಿಕ್ಕಲು. ಗುಕ್ಕು. ನತ್ತು.
(ತಂ) ಲೋಹಗಳನ್ನು ಕತ್ತರಿಸುವ ಯಂತ್ರಮುಟ್ಟುಗಳಲ್ಲಿ ಬಳಸುವ ಗಡಸು ಉಕ್ಕು. ತಗ್ಗಿನ ಕೆಂಗಾವಿನಲ್ಲೂ ಗಡಸುತನವನ್ನು ಉಳಿಸಿಕೊಂಡೇ ಇರುವುದರಿಂದ ಇದನ್ನು ಉನ್ನತ ವೇಗದಲ್ಲಿ ಚಲಿಸುವ ಲೇತ್ ಇತ್ಯಾದಿಗಳಲ್ಲಿ ಬಳಸಲಾಗುವುದು. ಇದರಲ್ಲಿ ಸಾಮಾನ್ಯವಾಗಿ ೧೨-೧೮% ಟಂಗ್‌ಸ್ಟನ್, ೫% ಕ್ರೋಮಿಯಮ್, ೦.೪-೦.೭% ಕಾರ್ಬನ್ ಮತ್ತು ಅಲ್ಪ ಪ್ರಮಾಣ ಗಳಲ್ಲಿ ವೆನೇಡಿಯಮ್, ಮಾಲಿಬ್ಡಿನಮ್ ಇತ್ಯಾದಿಗಳಿರುತ್ತವೆ
high speed steel
ಉಚ್ಚ ಪರಿಬಂಧ
(ಗ) ನೋಡಿ: ಪರಿಬಂಧಿತ
upper bound
ಉಚ್ಚ ಪರಿಮಿತಿ
(ಗ) ಚರದ ವ್ಯಾಪ್ತಿಯನ್ನು ನಿರ್ಧರಿಸುವ ಎರಡು ಕೋನಗಳಿಗೆ ಅದರ ಪರಿಮಿತಿಗಳೆಂದು ಹೆಸರು. ಉದಾಹರಣೆಗೆ 0 < x < 100 ಎಂದಿರುವಾಗ x ಚರದ ಪರಿಮಿತಿಗಳು ೦ ಮತ್ತು ೧೦೦. ಈ ಪೈಕಿ ಕೆಳಗಿನದು (೦) ನೀಚ, ಮೇಲಿನದು (೧೦೦) ಉಚ್ಚ ಪರಿಮಿತಿ. ನೋಡಿ: ಪರಿಮಿತಿ
upper limit
ಉಚ್ಚಬಿಂದು
(ಖ) ನೋಡಿ: ಅಪಕೇಂದ್ರ
apocentre
ಉಚ್ಚಬಿಂದು
(ಗ) ಚಲಪರಿಣಾಮವುಳ್ಳದ್ದರ ಏಳು ಬೀಳುಗಳ ವಿವರವನ್ನು ಚಿತ್ರಿಸುವ ವಕ್ರರೇಖೆಯ ಅಥವಾ ದಾಖಲೆ ಇಟ್ಟಿರುವ ಮೊತ್ತಗಳ ಉಚ್ಚ ಬಿಂದು. ಶೃಂಗ
peak
ಉಚ್ಚ ಮಹಾಸಿರೆ
(ವೈ) ದೇಹದ ಮೇಲ್ಭಾಗದಿಂದ ಆಕ್ಸಿಜನ್ ಕೊರತೆಯಿರುವ ರಕ್ತವನ್ನು ಹೃದಯದೆಡೆಗೆ ಸಾಗಿಸುವ ಪ್ರಮುಖ ರಕ್ತನಾಳ
vena cava superior
ಉಚ್ಚ ವೋಲ್ಟೇಜ್
(ಭೌ) ಸಾಮಾನ್ಯವಾಗಿ ೬೫೦ ಅಥವಾ ಹೆಚ್ಚು (ಸಾವಿರಾರು) ವೋಲ್ಟ್‌ಗಳ (ವಿದ್ಯುದ್ಬಲ)