(ಪ್ರಾ) ಕಾಜ್ಯುಯರಿಫಾರ್ಮೀಸ್ ಗಣ, ಡ್ರಾಮಿಸಿಯೈಡೀ ಕುಟುಂಬ ಹಾಗೂ ಡ್ರೊಮೇಯಸ್ ಜಾತಿಗೆ ಸೇರಿದ, ಉಷ್ಟ್ರಪಕ್ಷಿಯನ್ನು ಹೋಲುವ, ಆಸ್ಟ್ರೇಲಿಯದ ಪಕ್ಷಿ. ಹಾರಲಾಗದ ಆದರೆ ವೇಗವಾಗಿ ಓಡಬಲ್ಲ ಪಕ್ಷಿ. ಎತ್ತರದ ಅಡಚಣೆಗಳನ್ನು ನೆಗೆದು ದಾಟಬಲ್ಲದು. ಸಮರ್ಥವಾಗಿ ಈಜ ಬಲ್ಲದು. ಇದರ ಅಂದವಾದ ಗರಿಗಳು ಅಲಂಕರಣವಾಗಿ ಬಳಕೆ
emu
ಈಯುವುದು
(ವೈ) ಜರಾಯುಜ ಪ್ರಾಣಿಗಳು ಮರಿಹಾಕುವ ಕ್ರಿಯೆ. ಹೆರಿಗೆ, ಪ್ರಸೂತಿ
parturition
ಈರುಳ್ಳಿ
(ಸ) ಲಿಲಿಯೇಸೀ ಕುಟುಂಬದ ಅಲ್ಲಿಯಮ್ ಜಾತಿಯ ದ್ವೈವಾರ್ಷಿಕ ಪೊದೆ ಸಸ್ಯ. ಅಲ್ಲಿಯಮ್ ಸೀಪ ವೈಜ್ಞಾನಿಕ ನಾಮ. ಸುಮಾರು ೩೦೦ ಪ್ರಭೇದಗಳು ಉಂಟು. ಅನಾದಿಕಾಲದಿಂದ ಬಳಕೆಯಲ್ಲಿ ಇರುವ ಮುಖ್ಯ ತರಕಾರಿಗಳಲ್ಲಿ ಒಂದು. ಗೆಡ್ಡೆ ಹಾಗೂ ಕಾವುಗಳು ತರಕಾರಿ ಯಾಗಿ ಬಳಕೆ. ಅಲೈಲ್ ಪ್ರೊಪೈಲ್ ಡೈ ಸಲ್ಫೈಡ್ ರಾಸಾಯನಿಕವೂ ಆವಿಶೀಲ ತೈಲವೂ ಇರುವುದರಿಂದ ರುಚಿಯಲ್ಲಿ ಖಾರವಾಗಿರುತ್ತದೆ. ರುಚಿಕರ ಪುಷ್ಟಿಕರ ಆಹಾರ, ರಂಜಕ ಹಾಗೂ ‘ಸಿ’ ವೈಟಮಿನ್‌ಗಳಿವೆ. ಔಷಧೀಯ ಗುಣಗಳೂ ಉಂಟು. ಹೆಚ್ಚು ಕಾಲ ಕೆಡದೆ ಇರುವ ಜನಪ್ರಿಯ ತರಕಾರಿ. ವಾಣಿಜ್ಯ ಪ್ರಾಮುಖ್ಯವೂ ಉಂಟು. ಉಳ್ಳಾಗೆಡ್ಡೆ, ನೀರುಳ್ಳಿ
onion
ಈಸ್ಟ್ರೊಜೆನ್
(ಪ್ರಾ) ಸ್ತನಿಗಳಲ್ಲಿ ಸ್ತ್ರೀಯರ ಮದಚಕ್ರ ಮತ್ತಿತರ ಲೈಂಗಿಕ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರುವ ಲೈಂಗಿಕ ಹಾರ್ಮೋನ್. ಅಂಡಾಶಯದಲ್ಲಿ ಪ್ರಧಾನವಾಗಿ ಉತ್ಪತ್ತಿ. ಸ್ತ್ರೀ ಜನನಾಂಗಗಳ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಬಳಕೆ
oestrogen
ಈಸ್ಟ್ರೋನ್
(ಪ್ರಾ) ಮನುಷ್ಯರಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿ ಯಾಗುವ ಮೂರು ಬೆದೆಜನಕ ಹಾರ್ಮೋನ್‌ಗಳಲ್ಲಿ ಒಂದು. ಉಳಿದೆರಡು: ಈಸ್ಟ್ರಡಿಯೋಲ್ ಮತ್ತು ಈಸ್ಟ್ರಿಯಾಲ್. ಸ್ತ್ರೀ ಜನನೇಂದ್ರಿಯ ಹಾಗೂ ಅಡ್ರಿನಲ್ ಕಾರ್ಟೆಕ್ಸ್‌ಗಳಲ್ಲಿ ಉತ್ಪತ್ತಿ ಯಾಗುವ ಇದೊಂದು ಸ್ಟೀರಾಯ್ಡ್ ಚೋದಕ. ರಾಸಾಯನಿಕವಾಗಿ ಸ್ಟೀರಾಯ್ಡ್ ಬಳಗದ ಒಂದು ಕೀಟೋನ್. C18H22O2 ಇದನ್ನು ಈಸ್ಟ್ರೊಜನ್ ಎಂದೂ ಕರೆಯುವುದುಂಟು
oestrone
ಉಂಗುರ
(ರ) ನೋಡಿ : ವಲಯ
ring
ಉಂಗುರ ನೀಹಾರಿಕೆ
(ಖ) ವೀಣಾಪುಂಜದಲ್ಲಿರುವ ಗ್ರಹಯುಕ್ತ ನೀಹಾರಿಕೆ (M೫೭ ಅಥವಾ NGC ೬೭೨೦). ನಮ್ಮ ದೃಷ್ಟಿರೇಖೆಗೆ ಲಂಬ ತಳದಲ್ಲಿ ವಿಕ್ಷೇಪಗೊಳ್ಳುವ ಈ ನೀಹಾರಿಕೆಯ ಆಕಾರ ಉಂಗುರದಂತೆಯೇ ಕಾಣುತ್ತದೆ. ಇದರಲ್ಲಿ ಅಲ್ಲಲ್ಲಿ ಹರಡಿರುವ ಅನಿಲದ ತುಣುಕುಗಳು ಸೂರ್ಯನ ಸುತ್ತಲಿನ ಗ್ರಹಗಳ ಚಿತ್ರವನ್ನು ನೆನಪಿಗೆ ತರುವುದರಿಂದ ಇದಕ್ಕೆ ಗ್ರಹಯುಕ್ತ ನೀಹಾರಿಕೆ ಎಂಬ ಹೆಸರು