logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಇಲಿಯಮ್
(ಪ್ರಾ) ಕಶೇರುಕಗಳಲ್ಲಿ ಸೊಂಟದ ಬಳಿ ಇರುವ ಎಲುಬು. ವಸ್ತಿಕುಹರದ ಬಲ ಅಥವಾ ಎಡ ಅರ್ಧವನ್ನು ರೂಪಿಸುವ ಮೂರು ಎಲುಬುಗಳಲ್ಲಿ ಹಿಂದಿನ ಮೇಲು ಎಲುಬು. ರೊಂಡಿ ಎಲುಬು
ilium

ಇಲಿಯಾಕಸ್
(ವೈ) ಟೊಂಕದಿಂದ ತೊಡೆಯವರೆಗೆ ವಿಸ್ತರಿಸಿರುವ ಸ್ನಾಯು. ಶರೀರದ ತಳಭಾಗವನ್ನು ಮುಂದಕ್ಕೆ ಬಾಗಿಸಲು ಸಹಾಯಕ
iliacus

ಇಲಿಯಾಕ್ ಸೂಚ್ಯಂಕ
(ವೈ) ಸೊಂಟದ ಹಾಗೂ ಬೆನ್ನಿನ ಮೂಳೆಗಳ ನಡುವಿನ ಅಂತರಗಳನ್ನು ಆಧರಿಸಿ ಮಾನವ ಜೀವಿ ವಿಜ್ಞಾನದಲ್ಲಿ ಗೊತ್ತುಪಡಿಸಿರುವ ಸೂಚ್ಯಂಕ
iliac index

ಇಲೆಕ್ಟ್ರಾನ್
(ಭೌ) ನೋಡಿ: ಎಲೆಕ್ಟ್ರಾನ್
electron

ಇಲ್ಮೆನೈಟ್
(ಭೂವಿ) ತ್ರಿನತೀಯ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುವ ಕಬ್ಬಿಣ ಮತ್ತು ಟೈಟೇನಿಯಮ್‌ಗಳ ಆಕ್ಸೈಡ್. FeTiO3 ಟೈಟೇನಿಯಮ್‌ನ ಪ್ರಧಾನ ಅಪಾರಕ ಖನಿಜ. ಸಾಸಾಂ ೪.೫-೫. ಕಾಠಿಣ್ಯಾಂಕ ೫-೬. ಬಣ್ಣ ಕಪ್ಪು ಅಥವಾ ಕಂದು-ಕೆಂಪು. ರೂಟೈಲ್ ಸಮರೂಪಿ. ಅಗ್ನಿಶಿಲೆ ರೂಪಾಂತರಿತ ಶಿಲೆಗಳಲ್ಲಿ ಆನುಷಂಗಿಕ ಖನಿಜ ವಾಗಿಯೂ ಜಲಜಶಿಲೆಗಳಲ್ಲಿ ಮತ್ತು ಕಡಲ ತೀರ ಮರಳಿನಲ್ಲಿ ವ್ಯಾಪಕವಾಗಿಯೂ ಲಭ್ಯ. ಆಕ್ಸಿಡೀಕರಣದಿಂದ ಲ್ಯೂಕಾಕ್ಸಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ರಷ್ಯದ ಉರಾಲ್ ಪರ್ವತಗಳಲ್ಲೂ ಭಾರತದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ಮತ್ತು ಮಹಾರಾಷ್ಟ್ರಗಳಲ್ಲೂ ನಿಕ್ಷೇಪಗಳು ದೊರೆಯುತ್ತವೆ. ಕೃತಕ ರೂಟೈಲ್, ಟೈಟಾನಿಯಮ್ ಡೈ ಆಕ್ಸೈಡ್, ಟೈಟಾನಿಯಮ್ ಲೋಹ ಉತ್ಪಾದನೆಯಲ್ಲಿ ಬಳಕೆ
ilmenite

ಇಸಬು
(ವೈ) ಒಂದು ಬಗೆಯ ಚರ್ಮ ರೋಗ. ನವೆ/ತುರಿಕೆ ಇದರ ಮುಖ್ಯ ಲಕ್ಷಣ. ಇದರಲ್ಲಿ ಎರಡು ಬಗೆ; ಒಣ, ಆರ್ದ್ರ. ಇಸುಬು ತಾಗಿದ ಭಾಗದಲ್ಲಿ ಚರ್ಮ ಕೆಂಪಗಾಗಿ, ಮಂದವಾಗಿ, ದೊರಗಾಗಿ, ಅದರಿಂದ ದ್ರವ ಒಸರುವುದುಂಟು
eczema

ಇಳಿಜಾರು
(ಭೂವಿ) ಪ್ರಬಲ ಸ್ತರಭಂಗದಿಂದಾದ ಭೂಸರಿತ
slide

ಇಳಿದಾಣ
(ತಂ) ಯಾನ ಪೂರ್ಣಗೊಳಿಸಿದ ಅನಂತರ ವಿಮಾನಗಳು ನೆಲಕ್ಕಿಳಿಯುವ ನಿಗದಿತ ಸ್ಥಳ ಅಥವಾ ಹಡಗುಗಳು ದಡ ಸೇರುವ ಜಾಗ
landing place

ಇಳಿನೀರು
(ಭೂ) ಉಬ್ಬರವಿಳಿತದಲ್ಲಿ ಅತ್ಯಂತ ಕೆಳಮಟ್ಟದ ನೀರು. ನೋಡಿ: ಉಬ್ಬರವಿಳಿತಗಳು
low water

ಇಳಿಯೆಣಿಕೆ
(ತಂ) ರಾಕೆಟ್ ಉಡಾವಣೆ, ಪ್ರಾಯೋಗಿಕ ಬಾಂಬ್ ಆಸ್ಫೋಟನೆ ಮುಂತಾದವನ್ನು ಕ್ಲುಪ್ತ ಕ್ಷಣದಲ್ಲಿ ನಿರ್ವಹಿಸುವ ಸಲುವಾಗಿ ಕಾಲವನ್ನು ಹಿಂದಕ್ಕೆ ಎಣಿಸುವುದು: ೪,೩,೨,೧,೦ ಸೊನ್ನೆ ಎನ್ನುವಾಗ ಆ ಘಟನೆ ಸಂಭವಿಸತಕ್ಕದ್ದು. ಕ್ಷಣಗಣನೆ
countdown


logo